ಮುಖಪುಟ / ತೆರಿಗೆ ಮತ್ತು ಸುಂಕ1 ನಿಮಿಷದ ಓದು
ಅನುಸರಣೆಯ ಹೇಳಿಕೆ, ಪುರಾವೆ ಇಲ್ಲ
ಯಾವುದೇ ಸುತ್ತೋಲೆ ಹೊರಡಿಸಿಲ್ಲ, ಆದರೂ ಫಲಕಗಳು ತ್ರಿಭಾಷೆಯಲ್ಲಿವೆ ಎಂದ ಸಿಜಿಎಸ್ಟಿ ಮೇಲ್ಮನವಿ-1 ಆಯುಕ್ತಾಲಯ
ಎರಡು ಪುಟಗಳ ಪತ್ರ: ಮೂರು ಸಾಲಿನ ಉತ್ತರ. ಯಾವುದೇ ಫೋಟೋ ಅಥವಾ ದಾಖಲೆ ಇಲ್ಲ.
ಸಾರ್ವಜನಿಕ ಪ್ರಾಧಿಕಾರಕೇಂದ್ರ ತೆರಿಗೆ ಆಯುಕ್ತರ ಕಚೇರಿ, ಮೇಲ್ಮನವಿ-1 ಆಯುಕ್ತಾಲಯ, ಬೆಂಗಳೂರು
ನೋಂದಣಿ ಸಂಖ್ಯೆ
CCEBL/R/E/26/00098ಸಲ್ಲಿಕೆ05.08.2026
ಉತ್ತರ04.09.2026 30ನೇ ದಿನ
ಮೂಲಕಇ-ಮೇಲ್
ಕೇಳಿದ್ದು ಏನು, ಬಂದ ಉತ್ತರ ಏನು
| 1OM ಅಡಿ ಹೊರಡಿಸಿದ ಸುತ್ತೋಲೆಗಳು | “This Office has issued no separate circular, office order, instruction, or guideline.” |
|---|---|
| 2ಕನ್ನಡ ಬಳಕೆಗೆ ಕೈಗೊಂಡ ಕ್ರಮ | ಸಾರ್ವಜನಿಕ ಮಾಹಿತಿ ಫಲಕಗಳು, ಪ್ರವೇಶ ಫಲಕಗಳು, ಕಚೇರಿ ನಾಮಫಲಕ, ದಿಕ್ಕು ಸೂಚಕಗಳು “trilingual form (Kannada, Hindi, and English)”ನಲ್ಲಿವೆ ಎಂದಿದೆ (1 ಮತ್ತು 2ಕ್ಕೆ ಒಂದೇ ಉತ್ತರ); ಫೋಟೋ ಇಲ್ಲ |
| 3ತಪಾಸಣೆ / ಅನುಸರಣಾ ವರದಿಗಳು | “No such inspection reports, compliance reports, internal audits, or review reports are available on record.” |
| 4ಅನುಸರಣೆ ಇಲ್ಲದೆಡೆ ಸರಿಪಡಿಸುವ ಕ್ರಮ | “Not applicable.” |
| 5ಮೇಲ್ವಿಚಾರಣೆಯ ಹೊಣೆ ಹೊತ್ತ ಅಧಿಕಾರಿ | “Not applicable.” (4 ಮತ್ತು 5ಕ್ಕೆ ಒಂದೇ ಉತ್ತರ); ಯಾವುದೇ ಅಧಿಕಾರಿಯನ್ನು ಹೆಸರಿಸಿಲ್ಲ |
ಇದೇಕೆ ಮುಖ್ಯ
ಪ್ರಧಾನ ಮುಖ್ಯ ಆಯುಕ್ತರ ಕಚೇರಿ 25.08.2026ರಂದು ಕಳುಹಿಸಿದ ಅರ್ಜಿಗೆ ಈ ಉತ್ತರ. ಕಚೇರಿ ಯಾವುದೇ ಸುತ್ತೋಲೆ ಹೊರಡಿಸಿಲ್ಲ ಮತ್ತು ಯಾವುದೇ ತಪಾಸಣಾ ವರದಿ ಇಲ್ಲ ಎನ್ನುತ್ತದೆ; ಫಲಕಗಳು ತ್ರಿಭಾಷೆಯಲ್ಲಿವೆ ಎಂಬ ಹೇಳಿಕೆಗೆ ಫೋಟೋ ಇಲ್ಲ. ಮೇಲ್ವಿಚಾರಣೆಯ ಜವಾಬ್ದಾರಿ ಯಾರದು ಎಂಬ 5ನೇ ಪ್ರಶ್ನೆಗೆ “Not applicable” ಎಂದು ಉತ್ತರಿಸಲಾಗಿದೆ. ಪತ್ರದ ಶಿರೋಲೇಖ ಹಿಂದಿ ಮತ್ತು ಇಂಗ್ಲಿಷ್ನಲ್ಲಿ ಮಾತ್ರ ಇದೆ.

