ಮುಖಪುಟ / ವಿಜ್ಞಾನ ಮತ್ತು ಬಾಹ್ಯಾಕಾಶ1 ನಿಮಿಷದ ಓದು
ದಾಖಲೆಗಳು ಲಭ್ಯವಿಲ್ಲ
ಮೂರು ತಿಂಗಳ ನಂತರ ಇಸ್ರೋ ಕೇಂದ್ರ ಕಚೇರಿ ಉತ್ತರ: ಸುತ್ತೋಲೆ ಹೊರಡಿಸಿಲ್ಲ, ಉಳಿದ ಮಾಹಿತಿ “ಲಭ್ಯವಿಲ್ಲ”
ಮೂರು ಪುಟಗಳ ಉತ್ತರ: ಎರಡು ಪುಟದ CPIO ಪತ್ರ ಮತ್ತು ರಾಜಭಾಷಾ ಜಂಟಿ ನಿರ್ದೇಶಕರು ಸಹಿ ಮಾಡಿದ ಒಂದು ಪುಟದ ಕೋಷ್ಟಕ.
ಸಾರ್ವಜನಿಕ ಪ್ರಾಧಿಕಾರಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಕೇಂದ್ರ ಕಚೇರಿ, ಬೆಂಗಳೂರು
ನೋಂದಣಿ ಸಂಖ್ಯೆ
ISROH/R/E/26/00331ಸಲ್ಲಿಕೆ29.07.2026
ಉತ್ತರ03.11.2026 97ನೇ ದಿನ
ಮೂಲಕಆರ್ಟಿಐ ಆನ್ಲೈನ್ ಪೋರ್ಟಲ್
ಕೇಳಿದ್ದು ಏನು, ಬಂದ ಉತ್ತರ ಏನು
| 1OM ಅಡಿ ಹೊರಡಿಸಿದ ಸುತ್ತೋಲೆಗಳು | “No such circular is issued.” |
|---|---|
| 2ಕನ್ನಡ ಬಳಕೆಗೆ ಕೈಗೊಂಡ ಕ್ರಮ | “Not available.” |
| 3ತಪಾಸಣೆ / ಅನುಸರಣಾ ವರದಿಗಳು | “Not available.” |
| 4ಅನುಸರಣೆ ಇಲ್ಲದೆಡೆ ಸರಿಪಡಿಸುವ ಕ್ರಮ | “Not available.” |
| 5ಮೇಲ್ವಿಚಾರಣೆಯ ಹೊಣೆ ಹೊತ್ತ ಅಧಿಕಾರಿ | “Hindi Section/Cell and the Office entrusted with the preparation of such display of the respective Office is responsible for monitoring.” ಯಾವುದೇ ಅಧಿಕಾರಿಯನ್ನು ಹೆಸರಿಸಿಲ್ಲ |
ಇದೇಕೆ ಮುಖ್ಯ
ಅರ್ಜಿ 29.07.2026ರಂದು ತಲುಪಿತ್ತು; CPIO ಪತ್ರದ ದಿನಾಂಕ 03.11.2026, ಆದರೆ ಲಗತ್ತಿಸಿದ ಕೋಷ್ಟಕಕ್ಕೆ ರಾಜಭಾಷಾ ಜಂಟಿ ನಿರ್ದೇಶಕರು 21.08ರಂದೇ ಸಹಿ ಹಾಕಿದ್ದಾರೆ. ಇಸ್ರೋ ಕೇಂದ್ರ ಕಚೇರಿ OM ಜಾರಿಗೆ ಯಾವುದೇ ಸುತ್ತೋಲೆ ಹೊರಡಿಸಿಲ್ಲ ಎನ್ನುತ್ತದೆ; ಕನ್ನಡ ಫಲಕಗಳ ಕ್ರಮ, ತಪಾಸಣೆ ಮತ್ತು ಕಡತಗಳ ಮಾಹಿತಿ “Not available”. ಜಂಟಿ ನಿರ್ದೇಶಕರ ಮೊಹರಿನಲ್ಲಿ ಕನ್ನಡ ಇದೆ; ಪತ್ರದ ಶಿರೋಲೇಖ ಹಿಂದಿ ಮತ್ತು ಇಂಗ್ಲಿಷ್ನಲ್ಲಿ ಮಾತ್ರ ಇದೆ.


