ಮುಖಪುಟ / ಲೆಕ್ಕಪರಿಶೋಧನೆ1 ನಿಮಿಷದ ಓದು
ಅನುಸರಣೆಯ ಹೇಳಿಕೆ, ಪುರಾವೆ ಇಲ್ಲ
ಫಲಕಗಳು ತ್ರಿಭಾಷೆಯಲ್ಲಿವೆ ಎಂದ ಮಹಾಲೇಖಪಾಲರ ಕಚೇರಿ; ಜವಾಬ್ದಾರ ಅಧಿಕಾರಿಯ ಹೆಸರು ‘ವೈಯಕ್ತಿಕ ಮಾಹಿತಿ’ ಎಂದು ನಿರಾಕರಣೆ
ಎರಡು ಪುಟಗಳ ಕೋಷ್ಟಕ ರೂಪದ ಪತ್ರ. ಯಾವುದೇ ದಾಖಲೆ ಅಥವಾ ಫೋಟೋ ಇಲ್ಲ.
ಸಾರ್ವಜನಿಕ ಪ್ರಾಧಿಕಾರಮಹಾಲೇಖಪಾಲರ (ಲೆಕ್ಕ ಮತ್ತು ಹಕ್ದಾರಿ) ಕಛೇರಿ, ಕರ್ನಾಟಕ, ಬೆಂಗಳೂರು
ನೋಂದಣಿ ಸಂಖ್ಯೆ
PAGAK/R/E/26/00032ಸಲ್ಲಿಕೆ06.08.2026
ಉತ್ತರ03.09.2026 28ನೇ ದಿನ
ಮೂಲಕಆರ್ಟಿಐ ಆನ್ಲೈನ್ ಪೋರ್ಟಲ್
ಕೇಳಿದ್ದು ಏನು, ಬಂದ ಉತ್ತರ ಏನು
| 1OM ಅಡಿ ಹೊರಡಿಸಿದ ಸುತ್ತೋಲೆಗಳು | “This office has taken necessary measures to ensure compliance with the prescribed language requirements relating to public-facing official displays.” ಯಾವುದೇ ಸುತ್ತೋಲೆಯ ಪ್ರತಿ ಇಲ್ಲ |
|---|---|
| 2ಕನ್ನಡ ಬಳಕೆಗೆ ಕೈಗೊಂಡ ಕ್ರಮ | ಎಲ್ಲ ಫಲಕಗಳು “prepared in trilingual format, including Kannada, Hindi and English, wherever applicable” (1 ಮತ್ತು 2ಕ್ಕೆ ಒಂದೇ ಉತ್ತರ); ಫೋಟೋ ಇಲ್ಲ |
| 3ತಪಾಸಣೆ / ಅನುಸರಣಾ ವರದಿಗಳು | “Not Available” |
| 4ಅನುಸರಣೆ ಇಲ್ಲದೆಡೆ ಸರಿಪಡಿಸುವ ಕ್ರಮ | “Not Available” (3 ಮತ್ತು 4ಕ್ಕೆ ಒಂದೇ ಉತ್ತರ) |
| 5ಮೇಲ್ವಿಚಾರಣೆಯ ಹೊಣೆ ಹೊತ್ತ ಅಧಿಕಾರಿ | ನಿರಾಕರಿಸಲಾಗಿದೆ: “Information sought relates to personal information of a third party … exempted under section 8(1)(j) of RTI Act 2005.” |
ಇದೇಕೆ ಮುಖ್ಯ
OM ಜಾರಿಗೆ ಹೊರಡಿಸಿದ ಸುತ್ತೋಲೆಗಳ ಪ್ರತಿ ಕೇಳಿದ 1ನೇ ಪ್ರಶ್ನೆಗೆ ‘ಅಗತ್ಯ ಕ್ರಮ ಕೈಗೊಳ್ಳಲಾಗಿದೆ’ ಎಂಬ ಸಾಮಾನ್ಯ ಹೇಳಿಕೆ ಬಂದಿದೆ, ಯಾವುದೇ ದಾಖಲೆ ಇಲ್ಲ. ತ್ರಿಭಾಷಾ ಫಲಕಗಳ ಹೇಳಿಕೆಗೆ ಫೋಟೋ ಇಲ್ಲ, ಮತ್ತು ತಪಾಸಣಾ ವರದಿಗಳು “Not Available”. ಮೇಲ್ವಿಚಾರಣೆಯ ಜವಾಬ್ದಾರಿ ಹೊತ್ತ ಅಧಿಕಾರಿ ಅಥವಾ ವಿಭಾಗದ ವಿವರವನ್ನು ಮೂರನೇ ವ್ಯಕ್ತಿಯ ವೈಯಕ್ತಿಕ ಮಾಹಿತಿ ಎಂದು ಸೆಕ್ಷನ್ 8(1)(j) ಅಡಿ ತಡೆಹಿಡಿಯಲಾಗಿದೆ. ಪತ್ರದ ಶಿರೋಲೇಖದಲ್ಲಿ ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ಮೂರೂ ಇವೆ.

