ಮುಖಪುಟ / ವಿಜ್ಞಾನ ಮತ್ತು ಬಾಹ್ಯಾಕಾಶ1 ನಿಮಿಷದ ಓದು
ದಾಖಲೆಗಳು ಲಭ್ಯವಿಲ್ಲ
ಸುತ್ತೋಲೆ, ತಪಾಸಣೆ, ಜವಾಬ್ದಾರ ಅಧಿಕಾರಿ ಯಾವುದರ ಮಾಹಿತಿಯೂ ಇಲ್ಲ ಎಂದ ಐಸಿಎಂಆರ್-ನೈನ್; ಫಲಕಗಳಲ್ಲಿ ಕನ್ನಡ ‘ಕೂಡ’ ಇದೆಯಂತೆ
ಎರಡು ಪುಟಗಳ ಪತ್ರ: ಐದು ಅಂಶಗಳ ಕೋಷ್ಟಕ, ನಾಲ್ಕಕ್ಕೆ ಒಂದೇ ‘ಮಾಹಿತಿ ಲಭ್ಯವಿಲ್ಲ’ ಉತ್ತರ. ಯಾವುದೇ ದಾಖಲೆ ಅಥವಾ ಫೋಟೋ ಇಲ್ಲ.
ಸಾರ್ವಜನಿಕ ಪ್ರಾಧಿಕಾರಐಸಿಎಂಆರ್ - ರಾಷ್ಟ್ರೀಯ ಸಾಂಕ್ರಾಮಿಕವಲ್ಲದ ರೋಗಗಳ ಸೋಂಕುಶಾಸ್ತ್ರ ಸಂಸ್ಥೆ (ICMR-NINE), ಬೆಂಗಳೂರು
ನೋಂದಣಿ ಸಂಖ್ಯೆ
NCDIR/R/E/26/00024ಸಲ್ಲಿಕೆ30.07.2026
ಉತ್ತರ28.08.2026 29ನೇ ದಿನ
ಮೂಲಕಆರ್ಟಿಐ ಆನ್ಲೈನ್ ಪೋರ್ಟಲ್
ಕೇಳಿದ್ದು ಏನು, ಬಂದ ಉತ್ತರ ಏನು
| 1OM ಅಡಿ ಹೊರಡಿಸಿದ ಸುತ್ತೋಲೆಗಳು | “ಕೋರಿದ ಮಾಹಿತಿ ICMR-NINEನಲ್ಲಿ ಲಭ್ಯವಿಲ್ಲ.” RTI ಕಾಯ್ದೆಯ ಸೆಕ್ಷನ್ 2(f) ಪ್ರಕಾರ ಲಭ್ಯವಿರುವ ಮಾಹಿತಿಯನ್ನು ಮಾತ್ರ ಕೊಡಬಹುದು ಎಂದಿದೆ |
|---|---|
| 2ಕನ್ನಡ ಬಳಕೆಗೆ ಕೈಗೊಂಡ ಕ್ರಮ | “ICMR-NINEನಲ್ಲಿ ಲಭ್ಯವಿರುವ ನಾಮಫಲಕಗಳು, ಪ್ರವೇಶ ಫಲಕಗಳು, ದಿಕ್ಸೂಚಿಗಳು ಇತ್ಯಾದಿಯನ್ನು ಕನ್ನಡ ಭಾಷೆಯಲ್ಲೂ ಪ್ರದರ್ಶಿಸಲಾಗಿದೆ.” ಫೋಟೋ ಇಲ್ಲ |
| 3ತಪಾಸಣೆ / ಅನುಸರಣಾ ವರದಿಗಳು | 1ನೇ ಅಂಶದ ಉತ್ತರವೇ: “ಕೋರಿದ ಮಾಹಿತಿ ICMR-NINEನಲ್ಲಿ ಲಭ್ಯವಿಲ್ಲ” |
| 4ಅನುಸರಣೆ ಇಲ್ಲದೆಡೆ ಸರಿಪಡಿಸುವ ಕ್ರಮ | 1ನೇ ಅಂಶದ ಉತ್ತರವೇ |
| 5ಮೇಲ್ವಿಚಾರಣೆಯ ಹೊಣೆ ಹೊತ್ತ ಅಧಿಕಾರಿ | 1ನೇ ಅಂಶದ ಉತ್ತರವೇ; ಯಾವುದೇ ಅಧಿಕಾರಿ ಅಥವಾ ವಿಭಾಗದ ಹೆಸರಿಲ್ಲ |
ಇದೇಕೆ ಮುಖ್ಯ
OM ಜಾರಿಗೆ ಸುತ್ತೋಲೆ, ತಪಾಸಣಾ ವರದಿ, ಸರಿಪಡಿಸುವ ಕ್ರಮದ ದಾಖಲೆ, ಮೇಲ್ವಿಚಾರಣೆಗೆ ಜವಾಬ್ದಾರ ಅಧಿಕಾರಿ ಯಾವುದರ ಮಾಹಿತಿಯೂ ಸಂಸ್ಥೆಯಲ್ಲಿ ಇಲ್ಲ ಎಂದು ಉತ್ತರ ಹೇಳುತ್ತದೆ. ಫಲಕಗಳಲ್ಲಿ ಕನ್ನಡ ‘ಕೂಡ’ ಇದೆ ಎನ್ನುತ್ತದೆ, ಆದರೆ ಕನ್ನಡ ಯಾವ ಕ್ರಮದಲ್ಲಿದೆ ಎಂದು ಹೇಳುವುದಿಲ್ಲ, ಫೋಟೋ ಕೂಡ ಇಲ್ಲ. ಪತ್ರದ ಶಿರೋಲೇಖ ಇಂಗ್ಲಿಷ್ನಲ್ಲಿ ಮಾತ್ರ ಇದೆ; ಅಡಿಟಿಪ್ಪಣಿಯ ವಿಳಾಸ ಹಿಂದಿ ಮತ್ತು ಇಂಗ್ಲಿಷ್ನಲ್ಲಿದೆ.

