ಮುಖಪುಟ / ರೈಲ್ವೆ1 ನಿಮಿಷದ ಓದು
ಅನುಸರಣೆಯ ಹೇಳಿಕೆ, ಪುರಾವೆ ಇಲ್ಲ
ಯಾವುದೇ ಸುತ್ತೋಲೆ ಬಂದಿಲ್ಲ, ಆದರೂ ತ್ರಿಭಾಷಾ ನೀತಿ “ಕಟ್ಟುನಿಟ್ಟಾಗಿ” ಪಾಲನೆ ಎಂದ ಮೈಸೂರು ಕೇಂದ್ರ ರೈಲ್ವೆ ಕಾರ್ಯಾಗಾರ; ತಪಾಸಣಾ ವರದಿ ಕೊಡಲಿಲ್ಲ
ಎರಡು ಪುಟಗಳ ಕೋಷ್ಟಕ ರೂಪದ ಪತ್ರ. ಯಾವುದೇ ದಾಖಲೆ ಅಥವಾ ಫೋಟೋ ಇಲ್ಲ.
ಸಾರ್ವಜನಿಕ ಪ್ರಾಧಿಕಾರನೈಋತ್ಯ ರೈಲ್ವೆ, ಕೇಂದ್ರ ಕಾರ್ಯಾಗಾರ, ಮೈಸೂರು ದಕ್ಷಿಣ
ನೋಂದಣಿ ಸಂಖ್ಯೆ
SWRMW/R/X/26/00013ಸಲ್ಲಿಕೆ01.09.2026
ಉತ್ತರ28.09.2026 27ನೇ ದಿನ
ಮೂಲಕಆರ್ಟಿಐ ಆನ್ಲೈನ್ ಪೋರ್ಟಲ್
ಕೇಳಿದ್ದು ಏನು, ಬಂದ ಉತ್ತರ ಏನು
| 1OM ಅಡಿ ಹೊರಡಿಸಿದ ಸುತ್ತೋಲೆಗಳು | “No separate circulars, office orders, instructions and guidelines received at this office. However, regional language in being used in all public information displays, boards and nameplates in this unit.” |
|---|---|
| 2ಕನ್ನಡ ಬಳಕೆಗೆ ಕೈಗೊಂಡ ಕ್ರಮ | “Trilingual/bilingual display policy (Kannada, Hindi and English) is strictly followed across all public information displays, boards, nameplates, signages, etc. in this unit.” ಫೋಟೋ ಇಲ್ಲ |
| 3ತಪಾಸಣೆ / ಅನುಸರಣಾ ವರದಿಗಳು | ರಾಜಭಾಷಾ ಅನುಷ್ಠಾನ ಸಮಿತಿ “routine inspection cycles”ನಲ್ಲಿ ನಿಯಮಿತ ಪರಿಶೀಲನೆ, ತಪಾಸಣೆ ನಡೆಸುತ್ತದೆ ಎಂದಿದೆ; ಯಾವುದೇ ವರದಿಯ ಪ್ರತಿ ಇಲ್ಲ |
| 4ಅನುಸರಣೆ ಇಲ್ಲದೆಡೆ ಸರಿಪಡಿಸುವ ಕ್ರಮ | “No such information available in this office, since the instructions are being complied.” |
| 5ಮೇಲ್ವಿಚಾರಣೆಯ ಹೊಣೆ ಹೊತ್ತ ಅಧಿಕಾರಿ | “Officer - Dy Mukhya Rajbhasha Adhikari /MYSS. Department- Rajbhasha Department.” |
ಇದೇಕೆ ಮುಖ್ಯ
ಕಾರ್ಯಾಗಾರ OM ಕುರಿತು ಯಾವುದೇ ಪ್ರತ್ಯೇಕ ಸುತ್ತೋಲೆ ಬಂದಿಲ್ಲ ಎನ್ನುತ್ತದೆ. 3ನೇ ಪ್ರಶ್ನೆ ತಪಾಸಣಾ ವರದಿಗಳ ಪ್ರತಿ ಕೇಳಿತ್ತು; ತಪಾಸಣೆಗಳು ನಡೆಯುತ್ತವೆ ಎಂದು ಹೇಳಿದರೂ ಒಂದು ವರದಿಯನ್ನೂ ಕೊಟ್ಟಿಲ್ಲ, ದಿನಾಂಕವನ್ನೂ ನೀಡಿಲ್ಲ. 2ನೇ ಉತ್ತರ ನೀತಿಯನ್ನು “Trilingual/bilingual” ಎಂದು ಕರೆಯುತ್ತದೆ. ಪತ್ರದ ಶಿರೋಲೇಖ ಹಿಂದಿ ಮತ್ತು ಇಂಗ್ಲಿಷ್ನಲ್ಲಿ ಮಾತ್ರ ಇದೆ.

