ನಡೆಯುತ್ತಿದೆ
ಮೂರು ತಿಂಗಳ ನಂತರ ಇಸ್ರೋ ಕೇಂದ್ರ ಕಚೇರಿ ಉತ್ತರ: ಸುತ್ತೋಲೆ ಹೊರಡಿಸಿಲ್ಲ, ಉಳಿದ ಮಾಹಿತಿ “ಲಭ್ಯವಿಲ್ಲ”ಧಾರವಾಡ ನಿಲ್ದಾಣದಲ್ಲಿ ಇಂಗ್ಲಿಷ್ ಮಾತ್ರದ ಫಲಕಗಳನ್ನು ಗುರುತಿಸಿದ ತಪಾಸಣಾ ವರದಿ ಕೊಟ್ಟ ನೈಋತ್ಯ ರೈಲ್ವೆಕನ್ನಡ ಆದೇಶ "ನಮಗೆ ತಲುಪಿಯೇ ಇಲ್ಲ" ಎಂದ ಹುಬ್ಬಳ್ಳಿ ರೈಲ್ವೆ ವಿಭಾಗಹುಬ್ಬಳ್ಳಿ ರೈಲ್ವೆ ಕಾರ್ಖಾನೆ: ಕನ್ನಡ ಮೊದಲಿರುವ ಫಲಕಗಳ ಫೋಟೋ; 2024ರಲ್ಲಿ ಕನ್ನಡ-ಹಿಂದಿ-ಇಂಗ್ಲಿಷ್ ಕ್ರಮ ಪಾಲಿಸುತ್ತಿದ್ದೇವೆ ಎಂದು ವರದಿಯಾವುದೇ ಸುತ್ತೋಲೆ ಬಂದಿಲ್ಲ, ಆದರೂ ತ್ರಿಭಾಷಾ ನೀತಿ “ಕಟ್ಟುನಿಟ್ಟಾಗಿ” ಪಾಲನೆ ಎಂದ ಮೈಸೂರು ಕೇಂದ್ರ ರೈಲ್ವೆ ಕಾರ್ಯಾಗಾರ; ತಪಾಸಣಾ ವರದಿ ಕೊಡಲಿಲ್ಲಪ್ರತ್ಯೇಕ ಸುತ್ತೋಲೆ ಇಲ್ಲ, ತಪಾಸಣಾ ವರದಿ ಇಲ್ಲ, ಆದರೂ ಫಲಕಗಳು ತ್ರಿಭಾಷೆಯಲ್ಲಿವೆ ಎಂದ ಜಿಎಸ್‌ಟಿ ಮೇಲ್ಮನವಿ-II ಕಚೇರಿOM ಹೊರಡಿಸಿದ ರಾಜಭಾಷಾ ಇಲಾಖೆಯಲ್ಲೇ ಅನುಸರಣೆಯ ದಾಖಲೆ ಇಲ್ಲ; 2022ರ ಜ್ಞಾಪನ ಪತ್ರ ಒಂದನ್ನು ಮಾತ್ರ ಕೊಟ್ಟಿದೆಕರ್ನಾಟಕ ವೃತ್ತ ಕಚೇರಿಯ ಸೂಚನೆ ಪಾಲಿಸುತ್ತೇವೆ ಎಂದ ಬಿಎಸ್‌ಎನ್‌ಎಲ್ ಶಿವಮೊಗ್ಗ; ಉಳಿದದ್ದು ‘ವೃತ್ತ ಕಚೇರಿಯ ವ್ಯಾಪ್ತಿ’ಬೆಂಗಳೂರು ದಕ್ಷಿಣ ಜಿಎಸ್‌ಟಿ: ಸುತ್ತೋಲೆ ಇಲ್ಲ; ತಪಾಸಣೆ, ಸರಿಪಡಿಸುವ ಕ್ರಮ, ಹೊಣೆಗಾರ ಎಲ್ಲದಕ್ಕೂ “ಫಲಕಗಳಲ್ಲಿ ಕನ್ನಡ ಇದೆ” ಎಂಬುದೇ ಉತ್ತರನಾಲ್ಕೂ ಪ್ರಶ್ನೆಗಳಿಗೆ “ಮಾಹಿತಿ ಲಭ್ಯವಿಲ್ಲ” ಎಂದ ಬಿಎಸ್‌ಎನ್‌ಎಲ್ ಸಿವಿಲ್ ವಿಭಾಗ; ಐದನೇ ಪ್ರಶ್ನೆಗೆ ಉತ್ತರವೇ ಇಲ್ಲಸೆಕ್ಷನ್ 6(1) ಪಾಲನೆಯಾಗಿಲ್ಲ ಎಂದು ಮಾಹಿತಿ ನಿರಾಕರಿಸಿದ ಸಿಜಿಎಸ್‌ಟಿ ಬೆಳಗಾವಿಫಲಕಗಳಲ್ಲಿ ಕನ್ನಡ ಇದೆ ಎಂದ ಜಿಎಸ್‌ಟಿ ಬೆಂಗಳೂರು ಪಶ್ಚಿಮ; ಪ್ರತ್ಯೇಕ ಸುತ್ತೋಲೆ, ತಪಾಸಣಾ ವರದಿ, ಮೇಲ್ವಿಚಾರಣಾ ಅಧಿಕಾರಿ ಯಾವುದೂ ಇಲ್ಲಎಲ್ಲ ರೈಲುಗಳ ಗಮ್ಯಸ್ಥಾನ ಫಲಕಗಳಲ್ಲಿ ಕನ್ನಡ ಮೊದಲು ಎಂದ ನೈಋತ್ಯ ರೈಲ್ವೆ ಯಾಂತ್ರಿಕ ವಿಭಾಗ; ಐದು ಪ್ರಶ್ನೆಗೆ ಒಂದೇ ಉತ್ತರಫಲಕಗಳು ಕನ್ನಡ, ಹಿಂದಿ, ಇಂಗ್ಲಿಷ್‌ನಲ್ಲಿವೆ ಎಂದ ಸಿಜಿಎಸ್‌ಟಿ ಆಡಿಟ್-II ಬೆಂಗಳೂರು; ಸುತ್ತೋಲೆ, ವರದಿ, ಹೊಣೆಗಾರ ಅಧಿಕಾರಿ ಯಾವುದೂ ಇಲ್ಲನಿಯಮ ರೂಪಿಸಿದ ಇಲಾಖೆಯ ಬಳಿಯೇ ಅದರ ಪಾಲನೆಯ ಯಾವುದೇ ದಾಖಲೆ ಇಲ್ಲ3 ನಾಮಫಲಕ, 9 ಸೂಚನಾಫಲಕ ಮೂರೂ ಭಾಷೆಯಲ್ಲಿವೆ ಎಂದ ಮೈಸೂರು ಜಿಎಸ್‌ಟಿ ಮೇಲ್ಮನವಿ ಕಚೇರಿ; 2011ರ ಜ್ಞಾಪನ ಉಲ್ಲೇಖಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ: ಉತ್ತರ ಅಂಚೆಯಲ್ಲಿ ಕಳಿಸಿದ್ದೇವೆ ಎಂದು ಪೋರ್ಟಲ್‌ನಲ್ಲಿ ಅರ್ಜಿ ಮುಚ್ಚಿದೆತ್ರಿಭಾಷಾ ಫಲಕಗಳ ಅನುಸರಣೆಯ ಮಾಹಿತಿ ಸಚಿವಾಲಯಗಳಿಂದ ಬಂದಿಲ್ಲ ಎಂದು 2022ರಲ್ಲೇ ಬರೆದಿದ್ದ ರಾಜಭಾಷಾ ಇಲಾಖೆ; ತಪಾಸಣೆ ದಾಖಲೆ ತನ್ನಲ್ಲೂ ಇಲ್ಲಐಟಿಐ ಲಿಮಿಟೆಡ್: ಫಲಕಗಳ ಸುತ್ತೋಲೆ, ತಪಾಸಣಾ ವರದಿಗಳಿಗೆ ವೈಯಕ್ತಿಕ ಮಾಹಿತಿಯ ವಿನಾಯಿತಿ, ಸೆಕ್ಷನ್ 8(1)(j)ಜಿಎಸ್‌ಟಿ ಲೆಕ್ಕಪರಿಶೋಧನೆ-I ಬೆಂಗಳೂರು: ಫಲಕಗಳು ತ್ರಿಭಾಷೆಯಲ್ಲಿವೆ ಎಂಬ ಹೇಳಿಕೆ, ಸುತ್ತೋಲೆ, ತಪಾಸಣೆ, ಹೊಣೆಗಾರ ಇಲ್ಲಜಿಎಸ್‌ಟಿ ಬೆಂಗಳೂರು ಉತ್ತರ ಕಳುಹಿಸಿದ ‘ಸೂಚನೆ’ ಫಲಕಗಳು ‘ದ್ವಿಭಾಷೆ/ತ್ರಿಭಾಷೆ’ಯಲ್ಲಿರಲಿ ಎನ್ನುತ್ತದೆ, ಕನ್ನಡದ ಹೆಸರಿಲ್ಲ2022ರಲ್ಲಿ ಎಲ್ಲ ಸಚಿವಾಲಯಗಳಿಂದ ಅನುಸರಣಾ ವರದಿ ಕೇಳಿದ್ದ ರಾಜಭಾಷಾ ಇಲಾಖೆ, ಈಗ ‘ಸಂಬಂಧಿತ ದಾಖಲೆಗಳು ಇಲಾಖೆಯಲ್ಲಿ ಇಲ್ಲ’ ಎನ್ನುತ್ತದೆಹಾಸನ ಬಿಎಸ್‌ಎನ್‌ಎಲ್: “ಹಲವು” ಫಲಕಗಳು ತ್ರಿಭಾಷೆಯಲ್ಲಿವೆ ಎನ್ನುವ ರಾಜಭಾಷಾ ತಪಾಸಣಾ ವರದಿ ಕೊಟ್ಟಿದೆ, ಫೋಟೋ ಇಲ್ಲಮೈಸೂರು ಸಿಜಿಎಸ್‌ಟಿ ಲೆಕ್ಕಪರಿಶೋಧನಾ ಆಯುಕ್ತಾಲಯದಿಂದ ತಪಾಸಣಾ ಅಂಶಗಳ ಆದೇಶ ಮತ್ತು ಹಿಂದಿ ತಪಾಸಣಾ ವರದಿ; ಕನ್ನಡದ ಉಲ್ಲೇಖವಿಲ್ಲಸುತ್ತೋಲೆ ಬಂದಿಲ್ಲ ಎಂದು ಸೆಕ್ಷನ್ 2(f) ಅಡಿ ಮಾಹಿತಿ ನಿರಾಕರಿಸಿದ ಸಿಜಿಐಟಿ ಬೆಂಗಳೂರು; ಫಲಕಗಳು ಸ್ಥಳೀಯ ಮತ್ತು ಅಧಿಕೃತ ಭಾಷೆಯಲ್ಲಿವೆ ಎಂಬ ಒಂದು ಸಾಲುಐದೂ ಪ್ರಶ್ನೆಗಳಿಗೆ ‘ಮಾಹಿತಿ ಈ ಕಚೇರಿಯಲ್ಲಿ ಲಭ್ಯವಿಲ್ಲ’ ಎಂದ ಮೈಸೂರು ರೈಲ್ವೆ ವಿಭಾಗದ ಸಿಬ್ಬಂದಿ ವಿಭಾಗಯಾವುದೇ ಸುತ್ತೋಲೆ ಹೊರಡಿಸಿಲ್ಲ, ಆದರೂ ಫಲಕಗಳು ತ್ರಿಭಾಷೆಯಲ್ಲಿವೆ ಎಂದ ಸಿಜಿಎಸ್‌ಟಿ ಮೇಲ್ಮನವಿ-1 ಆಯುಕ್ತಾಲಯಸುತ್ತೋಲೆ ಹೊರಡಿಸಿಲ್ಲ, ಆದರೆ ಫಲಕಗಳು ಮೂರೂ ಭಾಷೆಯಲ್ಲಿವೆ ಎಂದ ಜಿಎಸ್‌ಟಿ ಬೆಂಗಳೂರು ಪೂರ್ವ; ಹೊಣೆಗಾರ ಅಧಿಕಾರಿಯ ಪ್ರಶ್ನೆ ‘ಅನ್ವಯಿಸದು’ಬೆಂಗಳೂರು ಉತ್ತರ ಪಶ್ಚಿಮ ಜಿಎಸ್‌ಟಿ: ಹಿಂದಿ ಜಾರಿಯ ‘ತಪಾಸಣಾ ಅಂಶಗಳು’ ಮತ್ತು ಒಂದು ತಪಾಸಣಾ ವರದಿ ಕೊಟ್ಟಿದೆ; ಕನ್ನಡದ ಹೆಸರಿಲ್ಲಮಂಗಳೂರು ಜಿಎಸ್‌ಟಿ: ಎಲ್ಲ ಫಲಕಗಳು ತ್ರಿಭಾಷೆಯಲ್ಲಿವೆ ಎಂಬ ಹೇಳಿಕೆ; ಸುತ್ತೋಲೆ, ತಪಾಸಣೆ, ಹೊಣೆಗಾರ ಇಲ್ಲಮೈಸೂರು ಜಿಎಸ್‌ಟಿ: 13 ನಾಮಫಲಕ, 40 ಸೂಚನಾಫಲಕ ತ್ರಿಭಾಷೆಯಲ್ಲಿವೆ ಎಂದು ಹೇಳಿಕೆ; ತಪಾಸಣಾ ವರದಿಗಳಿಗೆ ಸೆಕ್ಷನ್ 8(1) ವಿನಾಯಿತಿಕೇಂದ್ರೀಯ ಲೆಕ್ಕಪರಿಶೋಧನಾ ಕಚೇರಿಯಿಂದ ಆದೇಶಗಳು ಮತ್ತು ಕನ್ನಡ ಫಲಕಗಳ ಫೋಟೋ; 2024ರಲ್ಲಿ ಮೂರು ಇಂಗ್ಲಿಷ್ ನಾಮಫಲಕ ಪತ್ತೆ, ಎರಡು ಜ್ಞಾಪನಗಳಿಗೂ ಉತ್ತರ ಬಂದಿರಲಿಲ್ಲ‘ಲಗತ್ತಿನಂತೆ’ ಎಂದು ಅರ್ಜಿ ವಿಲೇವಾರಿ; ಲಗತ್ತೇ ಇಲ್ಲತುಮಕೂರು ಕಚೇರಿಯ ಫಲಕಗಳು ತ್ರಿಭಾಷೆಯಲ್ಲಿವೆ ಎಂದು ಬಿಎಸ್‌ಎನ್‌ಎಲ್ ರಾಜಭಾಷಾ ತಪಾಸಣಾ ವರದಿ; ಸುತ್ತೋಲೆ ಎಂದು ಕೊಟ್ಟದ್ದು ಹಿಂದಿ ವಾರ್ಷಿಕ ಕಾರ್ಯಕ್ರಮOM ಬಂದೇ ಇಲ್ಲ, 2010ರ ಪತ್ರದಂತೆ ಕ್ರಮ ಎಂದ ರಕ್ಷಣಾ-ವಾಣಿಜ್ಯ ಲೆಕ್ಕಪರಿಶೋಧನಾ ಕಚೇರಿಯಾವುದೇ ಸುತ್ತೋಲೆ ಹೊರಡಿಸಿಲ್ಲ, ಕ್ರಮ ಮತ್ತು ತಪಾಸಣೆಯ ಮಾಹಿತಿ “ಲಭ್ಯವಿಲ್ಲ” ಎಂದ ಬಾಹ್ಯಾಕಾಶ ಇಲಾಖೆವಿಮಾ ಕಂಪನಿಗಳ ಮೇಲೆ ತನಗೆ ಅಧಿಕಾರವಿಲ್ಲ ಎಂದ ವಿಮಾ ಓಂಬುಡ್ಸ್‌ಮನ್; ತನ್ನದೇ ಕಚೇರಿಯ ಫಲಕಗಳ ಬಗ್ಗೆ ಮಾತಿಲ್ಲಮಹಾನಿರ್ದೇಶಕರಿಂದ ಯಾವುದೇ ಮಾರ್ಗಸೂಚಿ ಬಂದಿಲ್ಲ, ಆದರೆ ಫಲಕಗಳು ಕನ್ನಡದಲ್ಲೂ ಇವೆ ಎಂದ ಕಾರ್ಮಿಕ ಕಲ್ಯಾಣ ಸಂಘಟನೆ ಬೆಂಗಳೂರುಫಲಕಗಳು ತ್ರಿಭಾಷೆಯಲ್ಲಿವೆ ಎಂದ ಮಹಾಲೇಖಪಾಲರ ಕಚೇರಿ; ಜವಾಬ್ದಾರ ಅಧಿಕಾರಿಯ ಹೆಸರು ‘ವೈಯಕ್ತಿಕ ಮಾಹಿತಿ’ ಎಂದು ನಿರಾಕರಣೆಯಾವುದೇ ಸುತ್ತೋಲೆ, ತಪಾಸಣೆ ಇಲ್ಲ, ಆದರೂ OM ಪಾಲನೆಯಾಗುತ್ತಿದೆ ಎಂದ ಲೆಕ್ಕಪರಿಶೋಧನೆ-I ಮಹಾಲೇಖಪಾಲರ ಕಚೇರಿಸುತ್ತೋಲೆ, ತಪಾಸಣಾ ವರದಿ ಇಲ್ಲ ಎಂದ ಎನ್‌ಜಿಎಂಎ ಬೆಂಗಳೂರು, 12 ಫಲಕಗಳ ಫೋಟೋ ಕಳುಹಿಸಿತುಬೆಂಗಳೂರು ಬಿಎಸ್‌ಎನ್‌ಎಲ್: ಕನ್ನಡ ಮೊದಲಿರುವ 30 ಫಲಕಗಳ ಫೋಟೋ, ಎರಡು ರಾಜಭಾಷಾ ತಪಾಸಣಾ ಪತ್ರಸಿಜಿಎಸ್‌ಟಿ ಬೆಂಗಳೂರು ವಲಯದಿಂದ 05.01.2026ರ ಸೂಚನೆ ಮತ್ತು ಲೆಕ್ಕ ವಿಭಾಗದ ಹಿಂದಿ ತಪಾಸಣಾ ವರದಿ; ಕನ್ನಡದ ಉಲ್ಲೇಖವಿಲ್ಲನಗರ ಸೀಮಾ ಸುಂಕ ಕಚೇರಿಯಿಂದ ಫಲಕಗಳ ಫೋಟೋ ಮತ್ತು ತಪಾಸಣಾ ಅಂಶಗಳ ಆದೇಶ; ಅನುಸರಣಾ ವರದಿ ಹಿಂದಿ ಬಳಕೆಯ ಬಗ್ಗೆ ಮಾತ್ರಬೆಳಗಾವಿ ಜಿಎಸ್‌ಟಿ ಲೆಕ್ಕಪರಿಶೋಧನಾ ಕಚೇರಿ: ಸೆಕ್ಷನ್ 6(1)ರ ‘ಅನುಸರಣೆ ಇಲ್ಲ’ ಎಂದು ಮಾಹಿತಿ ನಿರಾಕರಣೆಐಐಎಸ್‌ಸಿ: ಕನ್ನಡ ಮೊದಲಿರುವ ಫಲಕಗಳ 13 ಪುಟದ ಫೋಟೋ, ಕನ್ನಡ ಅನುಷ್ಠಾನ ಘಟಕಕ್ಕೆ ಜಂಟಿ ರಿಜಿಸ್ಟ್ರಾರ್ ಹೊಣೆ; ಸುತ್ತೋಲೆ, ತಪಾಸಣೆ ಮಾಹಿತಿ ಇಲ್ಲಹುಬ್ಬಳ್ಳಿಯ ರೈಲ್ವೆ ಲೆಕ್ಕಪರಿಶೋಧನಾ ಕಚೇರಿ: ಫಲಕಗಳು ಮೂರು ಭಾಷೆಯಲ್ಲಿವೆ, ಆದರೆ ಪ್ರತ್ಯೇಕ ಸುತ್ತೋಲೆ, ತಪಾಸಣೆ ಇಲ್ಲOMಗಿಂತ ಮುಂಚೆಯೇ 2021ರಲ್ಲಿ ತ್ರಿಭಾಷಾ ಫಲಕ ಹಾಕಿದ್ದೇವೆ ಎಂದ ಪರಿಸರ ಸಚಿವಾಲಯದ ಬೆಂಗಳೂರು ಕಚೇರಿ; ಉತ್ತರದ ದಿನವೇ ತೆಗೆದ ಫೋಟೋಗಳುಕ್ಯಾಂಪಸ್‌ನಲ್ಲಿ 77 ತ್ರಿಭಾಷಾ ಫಲಕಗಳಿವೆ ಎಂದ ಐಐಎಂಬಿ; ಆಧಾರ 1977ರ ಜ್ಞಾಪನ, ಫೋಟೋ ಅಥವಾ ತಪಾಸಣಾ ವರದಿ ಇಲ್ಲಕಚೇರಿ ಆದೇಶ ಇದೆ ಎಂದ ಆಂಟ್ರಿಕ್ಸ್, ಪ್ರತಿ ಕೊಡಲಿಲ್ಲ; ತಪಾಸಣೆ ನಡೆದಿಲ್ಲ ಎಂದು ಒಪ್ಪಿಗೆOM ಜಾರಿಯ 2022ರ ಆದೇಶ ಸರಪಳಿ ಮತ್ತು ಕನ್ನಡ-ಮೊದಲ ಫಲಕದ ಫೋಟೋ ಕೊಟ್ಟ CPWD ಮೈಸೂರುಐದು ಪ್ರಶ್ನೆಗಳಿಗೆ ಒಂದೇ ವಾಕ್ಯ: OM ಪಾಲಿಸಲಾಗಿದೆ ಎಂದ ರಕ್ಷಣಾ ಸಂಪದಾ ಕಚೇರಿನಿಮ್ಹಾನ್ಸ್ ಕಾರ್ಯಕ್ರಮದ ಹಿಂದಿ ಮಾತ್ರದ ಬ್ಯಾನರ್ ಕುರಿತ ಪ್ರಶ್ನೆಗಳಿಗೆ ‘ಅನ್ವಯಿಸದು’ ಎಂದ ಇಪಿಎಫ್‌ಒ; ಕನ್ನಡ ಫಲಕಗಳೂ ಇದ್ದವು ಎಂಬ ಹೇಳಿಕೆಸುತ್ತೋಲೆ, ತಪಾಸಣೆ, ಜವಾಬ್ದಾರ ಅಧಿಕಾರಿ ಯಾವುದರ ಮಾಹಿತಿಯೂ ಇಲ್ಲ ಎಂದ ಐಸಿಎಂಆರ್-ನೈನ್; ಫಲಕಗಳಲ್ಲಿ ಕನ್ನಡ ‘ಕೂಡ’ ಇದೆಯಂತೆಫಲಕಗಳು ಕನ್ನಡ, ಹಿಂದಿ, ಇಂಗ್ಲಿಷ್‌ನಲ್ಲಿರಬೇಕು ಎಂಬ 2022ರ ಆದೇಶ ಮತ್ತು ಫೋಟೋ ಕೊಟ್ಟ BSNL ಮೈಸೂರು; ತಪಾಸಣಾ ವರದಿ ಇಲ್ಲಫಲಕಗಳಲ್ಲಿ ಕನ್ನಡ ಬಳಸಿದ್ದೇವೆ ಎಂದ ಬಿಎಸ್‌ಎನ್‌ಎಲ್ ವಿಜಯಪುರ; ಉಳಿದ ನಾಲ್ಕು ಅಂಶಗಳಿಗೆ ‘ಇಲ್ಲ’ಕಾರವಾರ ಬಿಎಸ್‌ಎನ್‌ಎಲ್: ತ್ರಿಭಾಷಾ ಫಲಕಗಳಿವೆ ಎಂದು ಹೇಳಿಕೆ; ಸುತ್ತೋಲೆ, ತಪಾಸಣೆ, ಹೊಣೆಗಾರ ಯಾವುದೂ ಇಲ್ಲಆರು ಫಲಕಗಳ ಫೋಟೋ ಕಳುಹಿಸಿದ BSNL ಬೀದರ್; ಸುತ್ತೋಲೆ, ತಪಾಸಣಾ ವರದಿ ಇಲ್ಲಬಿಎಸ್‌ಎನ್‌ಎಲ್ ಕರ್ನಾಟಕ ವೃತ್ತದಿಂದ ಸುತ್ತೋಲೆ, ಫಲಕಗಳ ಫೋಟೋ ಮತ್ತು ಮೂರು ತಪಾಸಣಾ ವರದಿ; ತ್ರಿಭಾಷಾ ಫಲಕಕ್ಕೆ ಪತ್ರ 17.06.2026ರದ್ದುಎಲ್ಲ ಫಲಕಗಳು ಕನ್ನಡದಲ್ಲಿವೆ ಎಂದ ಮಂಗಳೂರು ಸೀಮಾ ಸುಂಕ ಕಚೇರಿ; ಸುತ್ತೋಲೆ ಹೊರಡಿಸಿಲ್ಲ, ಹೊಣೆಗಾರ ಅಧಿಕಾರಿ ಇಲ್ಲಫಲಕಗಳಲ್ಲಿ ಕನ್ನಡ ಇದೆ ಎಂದ ಕರ್ನಾಟಕ ಗ್ರಾಮೀಣ ಬ್ಯಾಂಕ್; ಉಳಿದ ನಾಲ್ಕು ಪ್ರಶ್ನೆಗಳಿಗೆ ‘ದಾಖಲೆ ಇಟ್ಟಿಲ್ಲ’ರೈಲ್ವೆ ನೇಮಕಾತಿ ಮಂಡಳಿ ಬೆಂಗಳೂರು: ಐದೂ ಪ್ರಶ್ನೆಗಳಿಗೆ ಒಂದೇ ಸಾಲು: ಕೋರಿದ ಮಾಹಿತಿ ಲಭ್ಯವಿಲ್ಲಐದೂ ಪ್ರಶ್ನೆಗಳಿಗೆ “ಮಾಹಿತಿ ಈ ಕಚೇರಿಯಲ್ಲಿ ಲಭ್ಯವಿಲ್ಲ” ಎಂದ ನೈಋತ್ಯ ರೈಲ್ವೆ ಮೈಸೂರು ವಿಭಾಗತಪಾಸಣಾ ವರದಿಗಳು “ವಾಣಿಜ್ಯ ಗೋಪ್ಯತೆ” ಎಂದು ನಿರಾಕರಿಸಿದ ಎಲ್‌ಐಸಿ; ಎಂಟು ವಿಭಾಗಗಳ ‘ದೃಢೀಕರಣ’ವೇ ಅನುಸರಣೆಯ ಆಧಾರಮಹಾಲೇಖಪಾಲರ ಕಚೇರಿ: ನಾಮಫಲಕಗಳು ಕನ್ನಡ ಸೇರಿ ತ್ರಿಭಾಷೆಯಲ್ಲಿರಬೇಕು ಎಂಬ 2024ರ ಆದೇಶ ಸೇರಿ ಮೂರು ಕಚೇರಿ ಆದೇಶಗಳನ್ನು ಕೊಟ್ಟಿದೆಯು.ಆರ್. ರಾವ್ ಉಪಗ್ರಹ ಕೇಂದ್ರದಿಂದ ನಾಲ್ಕು ವರ್ಷಗಳ ತಪಾಸಣಾ ಅಂಶಗಳ ಪಟ್ಟಿ; ಎಲ್ಲದರಲ್ಲೂ ಫಲಕಗಳು “ದ್ವಿಭಾಷೆ (ಅಗತ್ಯವಿದ್ದಲ್ಲಿ ತ್ರಿಭಾಷೆ)”ತ್ರಿಭಾಷಾ ಫಲಕಗಳಿವೆ ಎಂದ BSNL ಮಂಗಳೂರು; ಸುತ್ತೋಲೆ, ತಪಾಸಣೆ, ಹೊಣೆಗಾರ ಅಧಿಕಾರಿ ಯಾವುದೂ ದಾಖಲೆಯಲ್ಲಿಲ್ಲಬಳ್ಳಾರಿ ಬಿಎಸ್‌ಎನ್‌ಎಲ್: ಎಲ್ಲವೂ ಕರ್ನಾಟಕ ವೃತ್ತ ಕಚೇರಿಯ ವ್ಯಾಪ್ತಿ, “ಸೂಚನೆಗಳನ್ನು ಪಾಲಿಸಲಾಗುತ್ತಿದೆ”ಕನ್ನಡ ಫಲಕಗಳ ಫೋಟೋ, 2025ರ ಸುತ್ತೋಲೆ ಮತ್ತು ತಪಾಸಣಾ ವರದಿ ಕಳುಹಿಸಿದ BSNL ಹುಬ್ಬಳ್ಳಿ ವ್ಯಾಪಾರ ಕ್ಷೇತ್ರಕನ್ನಡ ಫಲಕ ಬಳಸಿದ್ದೇವೆ ಎಂದ ಬಿಎಸ್‌ಎನ್‌ಎಲ್ ಬೆಳಗಾವಿ; ಉಳಿದ ನಾಲ್ಕು ಪ್ರಶ್ನೆಗಳಿಗೆ “Nil”ಎಲ್ಲಾ ಕ್ಷೇಮ ಕೇಂದ್ರಗಳ ಫಲಕಗಳು ತ್ರಿಭಾಷೆಯಲ್ಲಿವೆ ಎಂದ CGHS ಬೆಂಗಳೂರು; ಕಳುಹಿಸಿದ ನಾಲ್ಕು ಫೋಟೋಗಳಲ್ಲಿ ಯಾವುದೂ ಕ್ಷೇಮ ಕೇಂದ್ರದ್ದು ಎಂದು ಗುರುತಿಸಿಲ್ಲಫಲಕಗಳಲ್ಲಿ ಕನ್ನಡ ಮೊದಲು ಎಂದ CPWD ಬೆಂಗಳೂರು; ‘OM’ಗಳೆಂದು ಕಳುಹಿಸಿದ್ದು ಹಿಂದಿ ಸಾಹಿತ್ಯ ಕುರಿತ 2017-18ರ ಪತ್ರಗಳುOM ಬಂದು ಮೂರು ವರ್ಷದ ನಂತರ, 2025ರಲ್ಲಿ ತ್ರಿಭಾಷಾ ಫಲಕದ ಸೂಚನೆ ಕಳುಹಿಸಿದ ಐಟಿಎಟಿ; ತಪಾಸಣೆಯ ಮಾಹಿತಿ ಇಲ್ಲಕನ್ನಡ ನಾಮಫಲಕಗಳ ಫೋಟೋ, 2025ರ ಸುತ್ತೋಲೆ ಮತ್ತು ತಪಾಸಣಾ ವರದಿ ಕೊಟ್ಟ BSNL ಹುಬ್ಬಳ್ಳಿಕನ್ನಡ ಮೊದಲಿರುವ ಕಚೇರಿ ಫಲಕ, ನಾಮಫಲಕದ ಫೋಟೋ ಕೊಟ್ಟ ಬೆಂಗಳೂರು ವಿಮಾನ ನಿಲ್ದಾಣ ಸೀಮಾ ಸುಂಕ ಕಚೇರಿ; ಜೊತೆಗಿನ ಆದೇಶಗಳು ಹಿಂದಿ ಕುರಿತು2022ರ OM ಜಾರಿಯ ದಾಖಲೆ ಕೇಳಿದರೆ 2012 ಮತ್ತು 2016ರ ಪತ್ರಗಳನ್ನು ಕೊಟ್ಟ HALಆದಾಯ ತೆರಿಗೆ ಇಲಾಖೆ: ಕರ್ನಾಟಕದಲ್ಲಿ OM ಕುರಿತ ಸುತ್ತೋಲೆ ಹೊರಡಿಸಿದ್ದು 2025ರ ಏಪ್ರಿಲ್‌ನಲ್ಲಿ, ದೆಹಲಿಯಿಂದ ಗಡುವು ಬಂದ ಮೇಲೆಫಲಕಗಳು ಕನ್ನಡ, ಹಿಂದಿ, ಇಂಗ್ಲಿಷ್‌ನಲ್ಲಿವೆ ಎಂದ ಸಿಬ್ಬಂದಿ ಆಯ್ಕೆ ಆಯೋಗ; ಉಳಿದ ನಾಲ್ಕು ಪ್ರಶ್ನೆ ರಾಜಭಾಷಾ ಇಲಾಖೆಗೆ ವರ್ಗಇಸ್ಟ್ರ್ಯಾಕ್: ನಾಲ್ಕು ಪ್ರಶ್ನೆಗಳಿಗೆ “Nil”, ಆದರೂ “ಅನುಸರಣೆ ಖಚಿತಪಡಿಸಲಾಗಿದೆ” ಎಂಬ ಹೇಳಿಕೆಎಸ್‌ಬಿಐ: ಕನ್ನಡಕ್ಕೆ “ಕಟ್ಟುನಿಟ್ಟಿನ ಸೂಚನೆ” ಕೊಟ್ಟಿದ್ದೇವೆ, ಆದರೆ ಸುತ್ತೋಲೆ, ತಪಾಸಣಾ ವರದಿಗಳು “ಗೋಪ್ಯ”ಕನ್ನಡ ಫಲಕಗಳ ಫೋಟೋ ಕೊಟ್ಟ FCI ಕರ್ನಾಟಕ‘ತಪಾಸಣಾ ವರದಿ’ ಎಂದು 2022ರ ಹಿಂದಿ ಬಳಕೆಯ ತಪಾಸಣೆ ಕಳುಹಿಸಿದ ಎಲ್‌ಪಿಎಸ್‌ಸಿ; ಅದರಲ್ಲಿ ಕನ್ನಡ ಫಲಕಗಳ ಪ್ರಸ್ತಾಪವಿಲ್ಲ"ಎಲ್ಲ ಫಲಕಗಳೂ ಅನುಸರಣೆಯಲ್ಲಿವೆ": ಒಂದೇ ಸಾಲು, ಒಂದೂ ದಾಖಲೆ ಇಲ್ಲಮಾಹಿತಿ ಇಲ್ಲ, ಕರ್ನಾಟಕ ವೃತ್ತದ CPIO ಕೊಡುತ್ತಾರೆ ಎಂದ BSNL ಮುಖ್ಯ ವಾಸ್ತುಶಿಲ್ಪಿ ಕಚೇರಿಉತ್ತರವನ್ನು ಅರ್ಜಿಯಲ್ಲಿನ ವಿಳಾಸಕ್ಕೆ ಕಳುಹಿಸಿದ್ದೇವೆ ಎಂದ ಸಾಲ ವಸೂಲಾತಿ ನ್ಯಾಯಮಂಡಳಿ; ಪೋರ್ಟಲ್‌ನಲ್ಲಿ ಉತ್ತರವಿಲ್ಲOM ಪಾಲಿಸಿದ್ದೇವೆ, ಉಳಿದ ಪ್ರಶ್ನೆಗಳು ‘ಮಾಹಿತಿ’ ಅಲ್ಲ ಎಂದ ಬೆಂಗಳೂರಿನ ಆಫೀಶಿಯಲ್ ಲಿಕ್ವಿಡೇಟರ್OM ಜಾರಿಯ ಯಾವುದೇ ದಾಖಲೆ ತನ್ನಲ್ಲಿಲ್ಲ ಎಂದ CPWD ಬೆಂಗಳೂರು ಪ್ರದೇಶ; ವರ್ಗಾವಣೆಯನ್ನೂ ನಿರಾಕರಣೆಫಲಕಗಳು ತ್ರಿಭಾಷೆಯಲ್ಲಿವೆ, OM ಪಾಲಿಸುತ್ತಿದ್ದೇವೆ ಎಂದು ಹೇಳಿ ಅರ್ಜಿಯನ್ನೇ ‘ಹಿಂದಿರುಗಿಸಿದ’ ಗುಣಮಟ್ಟ ನಿಯಂತ್ರಣ ಘಟಕ2026ರ ಜನವರಿಯ ಸೂಚನೆ ಕೊಟ್ಟ BEL; ಕರ್ನಾಟಕದ ಎಲ್ಲ ಫಲಕಗಳೂ ತ್ರಿಭಾಷೆಯಲ್ಲಿವೆ ಎಂಬುದಕ್ಕೆ ಪುರಾವೆ ಇಲ್ಲಕನ್ನಡ ಫಲಕಗಳ ಫೋಟೋ ಕಳುಹಿಸಿದ ಬಿಎಸ್‌ಎನ್‌ಎಲ್ ಚಿಕ್ಕಮಗಳೂರು; ಮಾಸಿಕ ತಪಾಸಣೆ ಎಂದರೂ ವರದಿ ಇಲ್ಲಐದೂ ಪ್ರಶ್ನೆಗಳಿಗೆ ‘ಮಾಹಿತಿ ಲಭ್ಯವಿಲ್ಲ’ ಎಂದ CPWD ಹುಬ್ಬಳ್ಳಿOM ಪಾಲಿಸಲಾಗಿದೆ ಎಂದು ಕನ್ನಡ-ಮೊದಲ ಫಲಕ, ನಾಮಫಲಕ, ಪತ್ರಶೀರ್ಷಿಕೆಗಳ ಉದಾಹರಣೆ ಕೊಟ್ಟ CPWD ಬೆಂಗಳೂರು ಕಚೇರಿಕನ್ನಡ ಮೊದಲು ಎಂಬ 2022ರ ಸುರಕ್ಷಾ ಫಲಕ ಆದೇಶ ಕಳುಹಿಸಿದ ಎಂಆರ್‌ಪಿಎಲ್; ಎಲ್ಲ ಕಚೇರಿಗಳ ಸುತ್ತೋಲೆ ಬಂದದ್ದು ಅರ್ಜಿಯ ನಂತರ, 04.08.2026ರಂದುKAPL: ‘ಸಾಧ್ಯವಾದಷ್ಟು’ ಕನ್ನಡ ಫಲಕ ಹಾಕಿದ್ದೇವೆ; ತಪಾಸಣೆ, ತಿದ್ದುಪಡಿಯ ದಾಖಲೆ ಇಲ್ಲಹಿಂದಿ-ಮಾತ್ರ ಬ್ಯಾನರ್‌ಗಳ ಕಾರ್ಯಕ್ರಮ ಇಪಿಎಫ್‌ಒದ್ದು ಎಂದ ನಿಮ್ಹಾನ್ಸ್; ತನ್ನ ಭಾಷಾ ನೀತಿಯ ಪ್ರಶ್ನೆಗಳಿಗೆ ಉತ್ತರವಿಲ್ಲಮೂರು ತಿಂಗಳ ನಂತರ ಇಸ್ರೋ ಕೇಂದ್ರ ಕಚೇರಿ ಉತ್ತರ: ಸುತ್ತೋಲೆ ಹೊರಡಿಸಿಲ್ಲ, ಉಳಿದ ಮಾಹಿತಿ “ಲಭ್ಯವಿಲ್ಲ”ಧಾರವಾಡ ನಿಲ್ದಾಣದಲ್ಲಿ ಇಂಗ್ಲಿಷ್ ಮಾತ್ರದ ಫಲಕಗಳನ್ನು ಗುರುತಿಸಿದ ತಪಾಸಣಾ ವರದಿ ಕೊಟ್ಟ ನೈಋತ್ಯ ರೈಲ್ವೆಕನ್ನಡ ಆದೇಶ "ನಮಗೆ ತಲುಪಿಯೇ ಇಲ್ಲ" ಎಂದ ಹುಬ್ಬಳ್ಳಿ ರೈಲ್ವೆ ವಿಭಾಗಹುಬ್ಬಳ್ಳಿ ರೈಲ್ವೆ ಕಾರ್ಖಾನೆ: ಕನ್ನಡ ಮೊದಲಿರುವ ಫಲಕಗಳ ಫೋಟೋ; 2024ರಲ್ಲಿ ಕನ್ನಡ-ಹಿಂದಿ-ಇಂಗ್ಲಿಷ್ ಕ್ರಮ ಪಾಲಿಸುತ್ತಿದ್ದೇವೆ ಎಂದು ವರದಿಯಾವುದೇ ಸುತ್ತೋಲೆ ಬಂದಿಲ್ಲ, ಆದರೂ ತ್ರಿಭಾಷಾ ನೀತಿ “ಕಟ್ಟುನಿಟ್ಟಾಗಿ” ಪಾಲನೆ ಎಂದ ಮೈಸೂರು ಕೇಂದ್ರ ರೈಲ್ವೆ ಕಾರ್ಯಾಗಾರ; ತಪಾಸಣಾ ವರದಿ ಕೊಡಲಿಲ್ಲಪ್ರತ್ಯೇಕ ಸುತ್ತೋಲೆ ಇಲ್ಲ, ತಪಾಸಣಾ ವರದಿ ಇಲ್ಲ, ಆದರೂ ಫಲಕಗಳು ತ್ರಿಭಾಷೆಯಲ್ಲಿವೆ ಎಂದ ಜಿಎಸ್‌ಟಿ ಮೇಲ್ಮನವಿ-II ಕಚೇರಿOM ಹೊರಡಿಸಿದ ರಾಜಭಾಷಾ ಇಲಾಖೆಯಲ್ಲೇ ಅನುಸರಣೆಯ ದಾಖಲೆ ಇಲ್ಲ; 2022ರ ಜ್ಞಾಪನ ಪತ್ರ ಒಂದನ್ನು ಮಾತ್ರ ಕೊಟ್ಟಿದೆಕರ್ನಾಟಕ ವೃತ್ತ ಕಚೇರಿಯ ಸೂಚನೆ ಪಾಲಿಸುತ್ತೇವೆ ಎಂದ ಬಿಎಸ್‌ಎನ್‌ಎಲ್ ಶಿವಮೊಗ್ಗ; ಉಳಿದದ್ದು ‘ವೃತ್ತ ಕಚೇರಿಯ ವ್ಯಾಪ್ತಿ’ಬೆಂಗಳೂರು ದಕ್ಷಿಣ ಜಿಎಸ್‌ಟಿ: ಸುತ್ತೋಲೆ ಇಲ್ಲ; ತಪಾಸಣೆ, ಸರಿಪಡಿಸುವ ಕ್ರಮ, ಹೊಣೆಗಾರ ಎಲ್ಲದಕ್ಕೂ “ಫಲಕಗಳಲ್ಲಿ ಕನ್ನಡ ಇದೆ” ಎಂಬುದೇ ಉತ್ತರನಾಲ್ಕೂ ಪ್ರಶ್ನೆಗಳಿಗೆ “ಮಾಹಿತಿ ಲಭ್ಯವಿಲ್ಲ” ಎಂದ ಬಿಎಸ್‌ಎನ್‌ಎಲ್ ಸಿವಿಲ್ ವಿಭಾಗ; ಐದನೇ ಪ್ರಶ್ನೆಗೆ ಉತ್ತರವೇ ಇಲ್ಲಸೆಕ್ಷನ್ 6(1) ಪಾಲನೆಯಾಗಿಲ್ಲ ಎಂದು ಮಾಹಿತಿ ನಿರಾಕರಿಸಿದ ಸಿಜಿಎಸ್‌ಟಿ ಬೆಳಗಾವಿಫಲಕಗಳಲ್ಲಿ ಕನ್ನಡ ಇದೆ ಎಂದ ಜಿಎಸ್‌ಟಿ ಬೆಂಗಳೂರು ಪಶ್ಚಿಮ; ಪ್ರತ್ಯೇಕ ಸುತ್ತೋಲೆ, ತಪಾಸಣಾ ವರದಿ, ಮೇಲ್ವಿಚಾರಣಾ ಅಧಿಕಾರಿ ಯಾವುದೂ ಇಲ್ಲಎಲ್ಲ ರೈಲುಗಳ ಗಮ್ಯಸ್ಥಾನ ಫಲಕಗಳಲ್ಲಿ ಕನ್ನಡ ಮೊದಲು ಎಂದ ನೈಋತ್ಯ ರೈಲ್ವೆ ಯಾಂತ್ರಿಕ ವಿಭಾಗ; ಐದು ಪ್ರಶ್ನೆಗೆ ಒಂದೇ ಉತ್ತರಫಲಕಗಳು ಕನ್ನಡ, ಹಿಂದಿ, ಇಂಗ್ಲಿಷ್‌ನಲ್ಲಿವೆ ಎಂದ ಸಿಜಿಎಸ್‌ಟಿ ಆಡಿಟ್-II ಬೆಂಗಳೂರು; ಸುತ್ತೋಲೆ, ವರದಿ, ಹೊಣೆಗಾರ ಅಧಿಕಾರಿ ಯಾವುದೂ ಇಲ್ಲನಿಯಮ ರೂಪಿಸಿದ ಇಲಾಖೆಯ ಬಳಿಯೇ ಅದರ ಪಾಲನೆಯ ಯಾವುದೇ ದಾಖಲೆ ಇಲ್ಲ3 ನಾಮಫಲಕ, 9 ಸೂಚನಾಫಲಕ ಮೂರೂ ಭಾಷೆಯಲ್ಲಿವೆ ಎಂದ ಮೈಸೂರು ಜಿಎಸ್‌ಟಿ ಮೇಲ್ಮನವಿ ಕಚೇರಿ; 2011ರ ಜ್ಞಾಪನ ಉಲ್ಲೇಖಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ: ಉತ್ತರ ಅಂಚೆಯಲ್ಲಿ ಕಳಿಸಿದ್ದೇವೆ ಎಂದು ಪೋರ್ಟಲ್‌ನಲ್ಲಿ ಅರ್ಜಿ ಮುಚ್ಚಿದೆತ್ರಿಭಾಷಾ ಫಲಕಗಳ ಅನುಸರಣೆಯ ಮಾಹಿತಿ ಸಚಿವಾಲಯಗಳಿಂದ ಬಂದಿಲ್ಲ ಎಂದು 2022ರಲ್ಲೇ ಬರೆದಿದ್ದ ರಾಜಭಾಷಾ ಇಲಾಖೆ; ತಪಾಸಣೆ ದಾಖಲೆ ತನ್ನಲ್ಲೂ ಇಲ್ಲಐಟಿಐ ಲಿಮಿಟೆಡ್: ಫಲಕಗಳ ಸುತ್ತೋಲೆ, ತಪಾಸಣಾ ವರದಿಗಳಿಗೆ ವೈಯಕ್ತಿಕ ಮಾಹಿತಿಯ ವಿನಾಯಿತಿ, ಸೆಕ್ಷನ್ 8(1)(j)ಜಿಎಸ್‌ಟಿ ಲೆಕ್ಕಪರಿಶೋಧನೆ-I ಬೆಂಗಳೂರು: ಫಲಕಗಳು ತ್ರಿಭಾಷೆಯಲ್ಲಿವೆ ಎಂಬ ಹೇಳಿಕೆ, ಸುತ್ತೋಲೆ, ತಪಾಸಣೆ, ಹೊಣೆಗಾರ ಇಲ್ಲಜಿಎಸ್‌ಟಿ ಬೆಂಗಳೂರು ಉತ್ತರ ಕಳುಹಿಸಿದ ‘ಸೂಚನೆ’ ಫಲಕಗಳು ‘ದ್ವಿಭಾಷೆ/ತ್ರಿಭಾಷೆ’ಯಲ್ಲಿರಲಿ ಎನ್ನುತ್ತದೆ, ಕನ್ನಡದ ಹೆಸರಿಲ್ಲ2022ರಲ್ಲಿ ಎಲ್ಲ ಸಚಿವಾಲಯಗಳಿಂದ ಅನುಸರಣಾ ವರದಿ ಕೇಳಿದ್ದ ರಾಜಭಾಷಾ ಇಲಾಖೆ, ಈಗ ‘ಸಂಬಂಧಿತ ದಾಖಲೆಗಳು ಇಲಾಖೆಯಲ್ಲಿ ಇಲ್ಲ’ ಎನ್ನುತ್ತದೆಹಾಸನ ಬಿಎಸ್‌ಎನ್‌ಎಲ್: “ಹಲವು” ಫಲಕಗಳು ತ್ರಿಭಾಷೆಯಲ್ಲಿವೆ ಎನ್ನುವ ರಾಜಭಾಷಾ ತಪಾಸಣಾ ವರದಿ ಕೊಟ್ಟಿದೆ, ಫೋಟೋ ಇಲ್ಲಮೈಸೂರು ಸಿಜಿಎಸ್‌ಟಿ ಲೆಕ್ಕಪರಿಶೋಧನಾ ಆಯುಕ್ತಾಲಯದಿಂದ ತಪಾಸಣಾ ಅಂಶಗಳ ಆದೇಶ ಮತ್ತು ಹಿಂದಿ ತಪಾಸಣಾ ವರದಿ; ಕನ್ನಡದ ಉಲ್ಲೇಖವಿಲ್ಲಸುತ್ತೋಲೆ ಬಂದಿಲ್ಲ ಎಂದು ಸೆಕ್ಷನ್ 2(f) ಅಡಿ ಮಾಹಿತಿ ನಿರಾಕರಿಸಿದ ಸಿಜಿಐಟಿ ಬೆಂಗಳೂರು; ಫಲಕಗಳು ಸ್ಥಳೀಯ ಮತ್ತು ಅಧಿಕೃತ ಭಾಷೆಯಲ್ಲಿವೆ ಎಂಬ ಒಂದು ಸಾಲುಐದೂ ಪ್ರಶ್ನೆಗಳಿಗೆ ‘ಮಾಹಿತಿ ಈ ಕಚೇರಿಯಲ್ಲಿ ಲಭ್ಯವಿಲ್ಲ’ ಎಂದ ಮೈಸೂರು ರೈಲ್ವೆ ವಿಭಾಗದ ಸಿಬ್ಬಂದಿ ವಿಭಾಗಯಾವುದೇ ಸುತ್ತೋಲೆ ಹೊರಡಿಸಿಲ್ಲ, ಆದರೂ ಫಲಕಗಳು ತ್ರಿಭಾಷೆಯಲ್ಲಿವೆ ಎಂದ ಸಿಜಿಎಸ್‌ಟಿ ಮೇಲ್ಮನವಿ-1 ಆಯುಕ್ತಾಲಯಸುತ್ತೋಲೆ ಹೊರಡಿಸಿಲ್ಲ, ಆದರೆ ಫಲಕಗಳು ಮೂರೂ ಭಾಷೆಯಲ್ಲಿವೆ ಎಂದ ಜಿಎಸ್‌ಟಿ ಬೆಂಗಳೂರು ಪೂರ್ವ; ಹೊಣೆಗಾರ ಅಧಿಕಾರಿಯ ಪ್ರಶ್ನೆ ‘ಅನ್ವಯಿಸದು’ಬೆಂಗಳೂರು ಉತ್ತರ ಪಶ್ಚಿಮ ಜಿಎಸ್‌ಟಿ: ಹಿಂದಿ ಜಾರಿಯ ‘ತಪಾಸಣಾ ಅಂಶಗಳು’ ಮತ್ತು ಒಂದು ತಪಾಸಣಾ ವರದಿ ಕೊಟ್ಟಿದೆ; ಕನ್ನಡದ ಹೆಸರಿಲ್ಲಮಂಗಳೂರು ಜಿಎಸ್‌ಟಿ: ಎಲ್ಲ ಫಲಕಗಳು ತ್ರಿಭಾಷೆಯಲ್ಲಿವೆ ಎಂಬ ಹೇಳಿಕೆ; ಸುತ್ತೋಲೆ, ತಪಾಸಣೆ, ಹೊಣೆಗಾರ ಇಲ್ಲಮೈಸೂರು ಜಿಎಸ್‌ಟಿ: 13 ನಾಮಫಲಕ, 40 ಸೂಚನಾಫಲಕ ತ್ರಿಭಾಷೆಯಲ್ಲಿವೆ ಎಂದು ಹೇಳಿಕೆ; ತಪಾಸಣಾ ವರದಿಗಳಿಗೆ ಸೆಕ್ಷನ್ 8(1) ವಿನಾಯಿತಿಕೇಂದ್ರೀಯ ಲೆಕ್ಕಪರಿಶೋಧನಾ ಕಚೇರಿಯಿಂದ ಆದೇಶಗಳು ಮತ್ತು ಕನ್ನಡ ಫಲಕಗಳ ಫೋಟೋ; 2024ರಲ್ಲಿ ಮೂರು ಇಂಗ್ಲಿಷ್ ನಾಮಫಲಕ ಪತ್ತೆ, ಎರಡು ಜ್ಞಾಪನಗಳಿಗೂ ಉತ್ತರ ಬಂದಿರಲಿಲ್ಲ‘ಲಗತ್ತಿನಂತೆ’ ಎಂದು ಅರ್ಜಿ ವಿಲೇವಾರಿ; ಲಗತ್ತೇ ಇಲ್ಲತುಮಕೂರು ಕಚೇರಿಯ ಫಲಕಗಳು ತ್ರಿಭಾಷೆಯಲ್ಲಿವೆ ಎಂದು ಬಿಎಸ್‌ಎನ್‌ಎಲ್ ರಾಜಭಾಷಾ ತಪಾಸಣಾ ವರದಿ; ಸುತ್ತೋಲೆ ಎಂದು ಕೊಟ್ಟದ್ದು ಹಿಂದಿ ವಾರ್ಷಿಕ ಕಾರ್ಯಕ್ರಮOM ಬಂದೇ ಇಲ್ಲ, 2010ರ ಪತ್ರದಂತೆ ಕ್ರಮ ಎಂದ ರಕ್ಷಣಾ-ವಾಣಿಜ್ಯ ಲೆಕ್ಕಪರಿಶೋಧನಾ ಕಚೇರಿಯಾವುದೇ ಸುತ್ತೋಲೆ ಹೊರಡಿಸಿಲ್ಲ, ಕ್ರಮ ಮತ್ತು ತಪಾಸಣೆಯ ಮಾಹಿತಿ “ಲಭ್ಯವಿಲ್ಲ” ಎಂದ ಬಾಹ್ಯಾಕಾಶ ಇಲಾಖೆವಿಮಾ ಕಂಪನಿಗಳ ಮೇಲೆ ತನಗೆ ಅಧಿಕಾರವಿಲ್ಲ ಎಂದ ವಿಮಾ ಓಂಬುಡ್ಸ್‌ಮನ್; ತನ್ನದೇ ಕಚೇರಿಯ ಫಲಕಗಳ ಬಗ್ಗೆ ಮಾತಿಲ್ಲಮಹಾನಿರ್ದೇಶಕರಿಂದ ಯಾವುದೇ ಮಾರ್ಗಸೂಚಿ ಬಂದಿಲ್ಲ, ಆದರೆ ಫಲಕಗಳು ಕನ್ನಡದಲ್ಲೂ ಇವೆ ಎಂದ ಕಾರ್ಮಿಕ ಕಲ್ಯಾಣ ಸಂಘಟನೆ ಬೆಂಗಳೂರುಫಲಕಗಳು ತ್ರಿಭಾಷೆಯಲ್ಲಿವೆ ಎಂದ ಮಹಾಲೇಖಪಾಲರ ಕಚೇರಿ; ಜವಾಬ್ದಾರ ಅಧಿಕಾರಿಯ ಹೆಸರು ‘ವೈಯಕ್ತಿಕ ಮಾಹಿತಿ’ ಎಂದು ನಿರಾಕರಣೆಯಾವುದೇ ಸುತ್ತೋಲೆ, ತಪಾಸಣೆ ಇಲ್ಲ, ಆದರೂ OM ಪಾಲನೆಯಾಗುತ್ತಿದೆ ಎಂದ ಲೆಕ್ಕಪರಿಶೋಧನೆ-I ಮಹಾಲೇಖಪಾಲರ ಕಚೇರಿಸುತ್ತೋಲೆ, ತಪಾಸಣಾ ವರದಿ ಇಲ್ಲ ಎಂದ ಎನ್‌ಜಿಎಂಎ ಬೆಂಗಳೂರು, 12 ಫಲಕಗಳ ಫೋಟೋ ಕಳುಹಿಸಿತುಬೆಂಗಳೂರು ಬಿಎಸ್‌ಎನ್‌ಎಲ್: ಕನ್ನಡ ಮೊದಲಿರುವ 30 ಫಲಕಗಳ ಫೋಟೋ, ಎರಡು ರಾಜಭಾಷಾ ತಪಾಸಣಾ ಪತ್ರಸಿಜಿಎಸ್‌ಟಿ ಬೆಂಗಳೂರು ವಲಯದಿಂದ 05.01.2026ರ ಸೂಚನೆ ಮತ್ತು ಲೆಕ್ಕ ವಿಭಾಗದ ಹಿಂದಿ ತಪಾಸಣಾ ವರದಿ; ಕನ್ನಡದ ಉಲ್ಲೇಖವಿಲ್ಲನಗರ ಸೀಮಾ ಸುಂಕ ಕಚೇರಿಯಿಂದ ಫಲಕಗಳ ಫೋಟೋ ಮತ್ತು ತಪಾಸಣಾ ಅಂಶಗಳ ಆದೇಶ; ಅನುಸರಣಾ ವರದಿ ಹಿಂದಿ ಬಳಕೆಯ ಬಗ್ಗೆ ಮಾತ್ರಬೆಳಗಾವಿ ಜಿಎಸ್‌ಟಿ ಲೆಕ್ಕಪರಿಶೋಧನಾ ಕಚೇರಿ: ಸೆಕ್ಷನ್ 6(1)ರ ‘ಅನುಸರಣೆ ಇಲ್ಲ’ ಎಂದು ಮಾಹಿತಿ ನಿರಾಕರಣೆಐಐಎಸ್‌ಸಿ: ಕನ್ನಡ ಮೊದಲಿರುವ ಫಲಕಗಳ 13 ಪುಟದ ಫೋಟೋ, ಕನ್ನಡ ಅನುಷ್ಠಾನ ಘಟಕಕ್ಕೆ ಜಂಟಿ ರಿಜಿಸ್ಟ್ರಾರ್ ಹೊಣೆ; ಸುತ್ತೋಲೆ, ತಪಾಸಣೆ ಮಾಹಿತಿ ಇಲ್ಲಹುಬ್ಬಳ್ಳಿಯ ರೈಲ್ವೆ ಲೆಕ್ಕಪರಿಶೋಧನಾ ಕಚೇರಿ: ಫಲಕಗಳು ಮೂರು ಭಾಷೆಯಲ್ಲಿವೆ, ಆದರೆ ಪ್ರತ್ಯೇಕ ಸುತ್ತೋಲೆ, ತಪಾಸಣೆ ಇಲ್ಲOMಗಿಂತ ಮುಂಚೆಯೇ 2021ರಲ್ಲಿ ತ್ರಿಭಾಷಾ ಫಲಕ ಹಾಕಿದ್ದೇವೆ ಎಂದ ಪರಿಸರ ಸಚಿವಾಲಯದ ಬೆಂಗಳೂರು ಕಚೇರಿ; ಉತ್ತರದ ದಿನವೇ ತೆಗೆದ ಫೋಟೋಗಳುಕ್ಯಾಂಪಸ್‌ನಲ್ಲಿ 77 ತ್ರಿಭಾಷಾ ಫಲಕಗಳಿವೆ ಎಂದ ಐಐಎಂಬಿ; ಆಧಾರ 1977ರ ಜ್ಞಾಪನ, ಫೋಟೋ ಅಥವಾ ತಪಾಸಣಾ ವರದಿ ಇಲ್ಲಕಚೇರಿ ಆದೇಶ ಇದೆ ಎಂದ ಆಂಟ್ರಿಕ್ಸ್, ಪ್ರತಿ ಕೊಡಲಿಲ್ಲ; ತಪಾಸಣೆ ನಡೆದಿಲ್ಲ ಎಂದು ಒಪ್ಪಿಗೆOM ಜಾರಿಯ 2022ರ ಆದೇಶ ಸರಪಳಿ ಮತ್ತು ಕನ್ನಡ-ಮೊದಲ ಫಲಕದ ಫೋಟೋ ಕೊಟ್ಟ CPWD ಮೈಸೂರುಐದು ಪ್ರಶ್ನೆಗಳಿಗೆ ಒಂದೇ ವಾಕ್ಯ: OM ಪಾಲಿಸಲಾಗಿದೆ ಎಂದ ರಕ್ಷಣಾ ಸಂಪದಾ ಕಚೇರಿನಿಮ್ಹಾನ್ಸ್ ಕಾರ್ಯಕ್ರಮದ ಹಿಂದಿ ಮಾತ್ರದ ಬ್ಯಾನರ್ ಕುರಿತ ಪ್ರಶ್ನೆಗಳಿಗೆ ‘ಅನ್ವಯಿಸದು’ ಎಂದ ಇಪಿಎಫ್‌ಒ; ಕನ್ನಡ ಫಲಕಗಳೂ ಇದ್ದವು ಎಂಬ ಹೇಳಿಕೆಸುತ್ತೋಲೆ, ತಪಾಸಣೆ, ಜವಾಬ್ದಾರ ಅಧಿಕಾರಿ ಯಾವುದರ ಮಾಹಿತಿಯೂ ಇಲ್ಲ ಎಂದ ಐಸಿಎಂಆರ್-ನೈನ್; ಫಲಕಗಳಲ್ಲಿ ಕನ್ನಡ ‘ಕೂಡ’ ಇದೆಯಂತೆಫಲಕಗಳು ಕನ್ನಡ, ಹಿಂದಿ, ಇಂಗ್ಲಿಷ್‌ನಲ್ಲಿರಬೇಕು ಎಂಬ 2022ರ ಆದೇಶ ಮತ್ತು ಫೋಟೋ ಕೊಟ್ಟ BSNL ಮೈಸೂರು; ತಪಾಸಣಾ ವರದಿ ಇಲ್ಲಫಲಕಗಳಲ್ಲಿ ಕನ್ನಡ ಬಳಸಿದ್ದೇವೆ ಎಂದ ಬಿಎಸ್‌ಎನ್‌ಎಲ್ ವಿಜಯಪುರ; ಉಳಿದ ನಾಲ್ಕು ಅಂಶಗಳಿಗೆ ‘ಇಲ್ಲ’ಕಾರವಾರ ಬಿಎಸ್‌ಎನ್‌ಎಲ್: ತ್ರಿಭಾಷಾ ಫಲಕಗಳಿವೆ ಎಂದು ಹೇಳಿಕೆ; ಸುತ್ತೋಲೆ, ತಪಾಸಣೆ, ಹೊಣೆಗಾರ ಯಾವುದೂ ಇಲ್ಲಆರು ಫಲಕಗಳ ಫೋಟೋ ಕಳುಹಿಸಿದ BSNL ಬೀದರ್; ಸುತ್ತೋಲೆ, ತಪಾಸಣಾ ವರದಿ ಇಲ್ಲಬಿಎಸ್‌ಎನ್‌ಎಲ್ ಕರ್ನಾಟಕ ವೃತ್ತದಿಂದ ಸುತ್ತೋಲೆ, ಫಲಕಗಳ ಫೋಟೋ ಮತ್ತು ಮೂರು ತಪಾಸಣಾ ವರದಿ; ತ್ರಿಭಾಷಾ ಫಲಕಕ್ಕೆ ಪತ್ರ 17.06.2026ರದ್ದುಎಲ್ಲ ಫಲಕಗಳು ಕನ್ನಡದಲ್ಲಿವೆ ಎಂದ ಮಂಗಳೂರು ಸೀಮಾ ಸುಂಕ ಕಚೇರಿ; ಸುತ್ತೋಲೆ ಹೊರಡಿಸಿಲ್ಲ, ಹೊಣೆಗಾರ ಅಧಿಕಾರಿ ಇಲ್ಲಫಲಕಗಳಲ್ಲಿ ಕನ್ನಡ ಇದೆ ಎಂದ ಕರ್ನಾಟಕ ಗ್ರಾಮೀಣ ಬ್ಯಾಂಕ್; ಉಳಿದ ನಾಲ್ಕು ಪ್ರಶ್ನೆಗಳಿಗೆ ‘ದಾಖಲೆ ಇಟ್ಟಿಲ್ಲ’ರೈಲ್ವೆ ನೇಮಕಾತಿ ಮಂಡಳಿ ಬೆಂಗಳೂರು: ಐದೂ ಪ್ರಶ್ನೆಗಳಿಗೆ ಒಂದೇ ಸಾಲು: ಕೋರಿದ ಮಾಹಿತಿ ಲಭ್ಯವಿಲ್ಲಐದೂ ಪ್ರಶ್ನೆಗಳಿಗೆ “ಮಾಹಿತಿ ಈ ಕಚೇರಿಯಲ್ಲಿ ಲಭ್ಯವಿಲ್ಲ” ಎಂದ ನೈಋತ್ಯ ರೈಲ್ವೆ ಮೈಸೂರು ವಿಭಾಗತಪಾಸಣಾ ವರದಿಗಳು “ವಾಣಿಜ್ಯ ಗೋಪ್ಯತೆ” ಎಂದು ನಿರಾಕರಿಸಿದ ಎಲ್‌ಐಸಿ; ಎಂಟು ವಿಭಾಗಗಳ ‘ದೃಢೀಕರಣ’ವೇ ಅನುಸರಣೆಯ ಆಧಾರಮಹಾಲೇಖಪಾಲರ ಕಚೇರಿ: ನಾಮಫಲಕಗಳು ಕನ್ನಡ ಸೇರಿ ತ್ರಿಭಾಷೆಯಲ್ಲಿರಬೇಕು ಎಂಬ 2024ರ ಆದೇಶ ಸೇರಿ ಮೂರು ಕಚೇರಿ ಆದೇಶಗಳನ್ನು ಕೊಟ್ಟಿದೆಯು.ಆರ್. ರಾವ್ ಉಪಗ್ರಹ ಕೇಂದ್ರದಿಂದ ನಾಲ್ಕು ವರ್ಷಗಳ ತಪಾಸಣಾ ಅಂಶಗಳ ಪಟ್ಟಿ; ಎಲ್ಲದರಲ್ಲೂ ಫಲಕಗಳು “ದ್ವಿಭಾಷೆ (ಅಗತ್ಯವಿದ್ದಲ್ಲಿ ತ್ರಿಭಾಷೆ)”ತ್ರಿಭಾಷಾ ಫಲಕಗಳಿವೆ ಎಂದ BSNL ಮಂಗಳೂರು; ಸುತ್ತೋಲೆ, ತಪಾಸಣೆ, ಹೊಣೆಗಾರ ಅಧಿಕಾರಿ ಯಾವುದೂ ದಾಖಲೆಯಲ್ಲಿಲ್ಲಬಳ್ಳಾರಿ ಬಿಎಸ್‌ಎನ್‌ಎಲ್: ಎಲ್ಲವೂ ಕರ್ನಾಟಕ ವೃತ್ತ ಕಚೇರಿಯ ವ್ಯಾಪ್ತಿ, “ಸೂಚನೆಗಳನ್ನು ಪಾಲಿಸಲಾಗುತ್ತಿದೆ”ಕನ್ನಡ ಫಲಕಗಳ ಫೋಟೋ, 2025ರ ಸುತ್ತೋಲೆ ಮತ್ತು ತಪಾಸಣಾ ವರದಿ ಕಳುಹಿಸಿದ BSNL ಹುಬ್ಬಳ್ಳಿ ವ್ಯಾಪಾರ ಕ್ಷೇತ್ರಕನ್ನಡ ಫಲಕ ಬಳಸಿದ್ದೇವೆ ಎಂದ ಬಿಎಸ್‌ಎನ್‌ಎಲ್ ಬೆಳಗಾವಿ; ಉಳಿದ ನಾಲ್ಕು ಪ್ರಶ್ನೆಗಳಿಗೆ “Nil”ಎಲ್ಲಾ ಕ್ಷೇಮ ಕೇಂದ್ರಗಳ ಫಲಕಗಳು ತ್ರಿಭಾಷೆಯಲ್ಲಿವೆ ಎಂದ CGHS ಬೆಂಗಳೂರು; ಕಳುಹಿಸಿದ ನಾಲ್ಕು ಫೋಟೋಗಳಲ್ಲಿ ಯಾವುದೂ ಕ್ಷೇಮ ಕೇಂದ್ರದ್ದು ಎಂದು ಗುರುತಿಸಿಲ್ಲಫಲಕಗಳಲ್ಲಿ ಕನ್ನಡ ಮೊದಲು ಎಂದ CPWD ಬೆಂಗಳೂರು; ‘OM’ಗಳೆಂದು ಕಳುಹಿಸಿದ್ದು ಹಿಂದಿ ಸಾಹಿತ್ಯ ಕುರಿತ 2017-18ರ ಪತ್ರಗಳುOM ಬಂದು ಮೂರು ವರ್ಷದ ನಂತರ, 2025ರಲ್ಲಿ ತ್ರಿಭಾಷಾ ಫಲಕದ ಸೂಚನೆ ಕಳುಹಿಸಿದ ಐಟಿಎಟಿ; ತಪಾಸಣೆಯ ಮಾಹಿತಿ ಇಲ್ಲಕನ್ನಡ ನಾಮಫಲಕಗಳ ಫೋಟೋ, 2025ರ ಸುತ್ತೋಲೆ ಮತ್ತು ತಪಾಸಣಾ ವರದಿ ಕೊಟ್ಟ BSNL ಹುಬ್ಬಳ್ಳಿಕನ್ನಡ ಮೊದಲಿರುವ ಕಚೇರಿ ಫಲಕ, ನಾಮಫಲಕದ ಫೋಟೋ ಕೊಟ್ಟ ಬೆಂಗಳೂರು ವಿಮಾನ ನಿಲ್ದಾಣ ಸೀಮಾ ಸುಂಕ ಕಚೇರಿ; ಜೊತೆಗಿನ ಆದೇಶಗಳು ಹಿಂದಿ ಕುರಿತು2022ರ OM ಜಾರಿಯ ದಾಖಲೆ ಕೇಳಿದರೆ 2012 ಮತ್ತು 2016ರ ಪತ್ರಗಳನ್ನು ಕೊಟ್ಟ HALಆದಾಯ ತೆರಿಗೆ ಇಲಾಖೆ: ಕರ್ನಾಟಕದಲ್ಲಿ OM ಕುರಿತ ಸುತ್ತೋಲೆ ಹೊರಡಿಸಿದ್ದು 2025ರ ಏಪ್ರಿಲ್‌ನಲ್ಲಿ, ದೆಹಲಿಯಿಂದ ಗಡುವು ಬಂದ ಮೇಲೆಫಲಕಗಳು ಕನ್ನಡ, ಹಿಂದಿ, ಇಂಗ್ಲಿಷ್‌ನಲ್ಲಿವೆ ಎಂದ ಸಿಬ್ಬಂದಿ ಆಯ್ಕೆ ಆಯೋಗ; ಉಳಿದ ನಾಲ್ಕು ಪ್ರಶ್ನೆ ರಾಜಭಾಷಾ ಇಲಾಖೆಗೆ ವರ್ಗಇಸ್ಟ್ರ್ಯಾಕ್: ನಾಲ್ಕು ಪ್ರಶ್ನೆಗಳಿಗೆ “Nil”, ಆದರೂ “ಅನುಸರಣೆ ಖಚಿತಪಡಿಸಲಾಗಿದೆ” ಎಂಬ ಹೇಳಿಕೆಎಸ್‌ಬಿಐ: ಕನ್ನಡಕ್ಕೆ “ಕಟ್ಟುನಿಟ್ಟಿನ ಸೂಚನೆ” ಕೊಟ್ಟಿದ್ದೇವೆ, ಆದರೆ ಸುತ್ತೋಲೆ, ತಪಾಸಣಾ ವರದಿಗಳು “ಗೋಪ್ಯ”ಕನ್ನಡ ಫಲಕಗಳ ಫೋಟೋ ಕೊಟ್ಟ FCI ಕರ್ನಾಟಕ‘ತಪಾಸಣಾ ವರದಿ’ ಎಂದು 2022ರ ಹಿಂದಿ ಬಳಕೆಯ ತಪಾಸಣೆ ಕಳುಹಿಸಿದ ಎಲ್‌ಪಿಎಸ್‌ಸಿ; ಅದರಲ್ಲಿ ಕನ್ನಡ ಫಲಕಗಳ ಪ್ರಸ್ತಾಪವಿಲ್ಲ"ಎಲ್ಲ ಫಲಕಗಳೂ ಅನುಸರಣೆಯಲ್ಲಿವೆ": ಒಂದೇ ಸಾಲು, ಒಂದೂ ದಾಖಲೆ ಇಲ್ಲಮಾಹಿತಿ ಇಲ್ಲ, ಕರ್ನಾಟಕ ವೃತ್ತದ CPIO ಕೊಡುತ್ತಾರೆ ಎಂದ BSNL ಮುಖ್ಯ ವಾಸ್ತುಶಿಲ್ಪಿ ಕಚೇರಿಉತ್ತರವನ್ನು ಅರ್ಜಿಯಲ್ಲಿನ ವಿಳಾಸಕ್ಕೆ ಕಳುಹಿಸಿದ್ದೇವೆ ಎಂದ ಸಾಲ ವಸೂಲಾತಿ ನ್ಯಾಯಮಂಡಳಿ; ಪೋರ್ಟಲ್‌ನಲ್ಲಿ ಉತ್ತರವಿಲ್ಲOM ಪಾಲಿಸಿದ್ದೇವೆ, ಉಳಿದ ಪ್ರಶ್ನೆಗಳು ‘ಮಾಹಿತಿ’ ಅಲ್ಲ ಎಂದ ಬೆಂಗಳೂರಿನ ಆಫೀಶಿಯಲ್ ಲಿಕ್ವಿಡೇಟರ್OM ಜಾರಿಯ ಯಾವುದೇ ದಾಖಲೆ ತನ್ನಲ್ಲಿಲ್ಲ ಎಂದ CPWD ಬೆಂಗಳೂರು ಪ್ರದೇಶ; ವರ್ಗಾವಣೆಯನ್ನೂ ನಿರಾಕರಣೆಫಲಕಗಳು ತ್ರಿಭಾಷೆಯಲ್ಲಿವೆ, OM ಪಾಲಿಸುತ್ತಿದ್ದೇವೆ ಎಂದು ಹೇಳಿ ಅರ್ಜಿಯನ್ನೇ ‘ಹಿಂದಿರುಗಿಸಿದ’ ಗುಣಮಟ್ಟ ನಿಯಂತ್ರಣ ಘಟಕ2026ರ ಜನವರಿಯ ಸೂಚನೆ ಕೊಟ್ಟ BEL; ಕರ್ನಾಟಕದ ಎಲ್ಲ ಫಲಕಗಳೂ ತ್ರಿಭಾಷೆಯಲ್ಲಿವೆ ಎಂಬುದಕ್ಕೆ ಪುರಾವೆ ಇಲ್ಲಕನ್ನಡ ಫಲಕಗಳ ಫೋಟೋ ಕಳುಹಿಸಿದ ಬಿಎಸ್‌ಎನ್‌ಎಲ್ ಚಿಕ್ಕಮಗಳೂರು; ಮಾಸಿಕ ತಪಾಸಣೆ ಎಂದರೂ ವರದಿ ಇಲ್ಲಐದೂ ಪ್ರಶ್ನೆಗಳಿಗೆ ‘ಮಾಹಿತಿ ಲಭ್ಯವಿಲ್ಲ’ ಎಂದ CPWD ಹುಬ್ಬಳ್ಳಿOM ಪಾಲಿಸಲಾಗಿದೆ ಎಂದು ಕನ್ನಡ-ಮೊದಲ ಫಲಕ, ನಾಮಫಲಕ, ಪತ್ರಶೀರ್ಷಿಕೆಗಳ ಉದಾಹರಣೆ ಕೊಟ್ಟ CPWD ಬೆಂಗಳೂರು ಕಚೇರಿಕನ್ನಡ ಮೊದಲು ಎಂಬ 2022ರ ಸುರಕ್ಷಾ ಫಲಕ ಆದೇಶ ಕಳುಹಿಸಿದ ಎಂಆರ್‌ಪಿಎಲ್; ಎಲ್ಲ ಕಚೇರಿಗಳ ಸುತ್ತೋಲೆ ಬಂದದ್ದು ಅರ್ಜಿಯ ನಂತರ, 04.08.2026ರಂದುKAPL: ‘ಸಾಧ್ಯವಾದಷ್ಟು’ ಕನ್ನಡ ಫಲಕ ಹಾಕಿದ್ದೇವೆ; ತಪಾಸಣೆ, ತಿದ್ದುಪಡಿಯ ದಾಖಲೆ ಇಲ್ಲಹಿಂದಿ-ಮಾತ್ರ ಬ್ಯಾನರ್‌ಗಳ ಕಾರ್ಯಕ್ರಮ ಇಪಿಎಫ್‌ಒದ್ದು ಎಂದ ನಿಮ್ಹಾನ್ಸ್; ತನ್ನ ಭಾಷಾ ನೀತಿಯ ಪ್ರಶ್ನೆಗಳಿಗೆ ಉತ್ತರವಿಲ್ಲ
X ನಲ್ಲಿ ಅಭಿಯಾನ ↗

ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ ಕನ್ನಡ ಬಳಕೆಯ ಕುರಿತು ಮಾಹಿತಿ ಹಕ್ಕು ಉತ್ತರಗಳ ಸಾರ್ವಜನಿಕ ಸೂಚ್ಯಂಕ

ಎಲ್ಲ ಉತ್ತರಗಳು

ಎಲ್ಲ ಉತ್ತರಗಳು

ಪ್ರಕಟವಾದ ಎಲ್ಲ ಉತ್ತರಗಳು. ಉತ್ತರದ ಬಗೆ ಅಥವಾ ವಲಯದ ಪ್ರಕಾರ ಆರಿಸಿ.

ಉತ್ತರದ ಬಗೆ
ವಲಯ
ದಾಖಲೆಗಳು ಲಭ್ಯವಿಲ್ಲ

ಮೂರು ತಿಂಗಳ ನಂತರ ಇಸ್ರೋ ಕೇಂದ್ರ ಕಚೇರಿ ಉತ್ತರ: ಸುತ್ತೋಲೆ ಹೊರಡಿಸಿಲ್ಲ, ಉಳಿದ ಮಾಹಿತಿ “ಲಭ್ಯವಿಲ್ಲ”

ಮೂರು ಪುಟಗಳ ಉತ್ತರ: ಎರಡು ಪುಟದ CPIO ಪತ್ರ ಮತ್ತು ರಾಜಭಾಷಾ ಜಂಟಿ ನಿರ್ದೇಶಕರು ಸಹಿ ಮಾಡಿದ ಒಂದು ಪುಟದ ಕೋಷ್ಟಕ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಕೇಂದ್ರ ಕಚೇರಿ, ಬೆಂಗಳೂರುISROH/R/E/26/00331
ದಾಖಲೆಗಳನ್ನು ನೀಡಲಾಗಿದೆ

ಧಾರವಾಡ ನಿಲ್ದಾಣದಲ್ಲಿ ಇಂಗ್ಲಿಷ್ ಮಾತ್ರದ ಫಲಕಗಳನ್ನು ಗುರುತಿಸಿದ ತಪಾಸಣಾ ವರದಿ ಕೊಟ್ಟ ನೈಋತ್ಯ ರೈಲ್ವೆ

34 ಪುಟಗಳ ಉತ್ತರ: ಎರಡು ಜೊತೆ ಪತ್ರಗಳು, ರೈಲ್ವೆ ಮಂಡಳಿಯ ಸುತ್ತೋಲೆಗಳು ಮತ್ತು ರಾಜಭಾಷಾ ಇಲಾಖೆಯ ಪತ್ರ (ಅನುಬಂಧ I), ಹಾಗೂ ಧಾರವಾಡ, ವಾಸ್ಕೋ-ಡ-ಗಾಮಾ, ಸೋಲೂರು ನಿಲ್ದಾಣಗಳು ಮತ್ತು ಹುಬ್ಬಳ್ಳಿ ಕಾರ್ಯಾಗಾರದ ರಾಜಭಾಷಾ ತಪಾಸಣಾ ವರದಿಗಳು ಹಾಗೂ ಕಚೇರಿಗಳ ಅನುಸರಣಾ ಪತ್ರಗಳು (ಅನುಬಂಧ II); ಬಹುತೇಕ ಹಿಂದಿಯಲ್ಲಿ.

ನೈಋತ್ಯ ರೈಲ್ವೆ, ಮಹಾಪ್ರಬಂಧಕರ ಕಚೇರಿ, ರಾಜಭಾಷಾ ವಿಭಾಗ, ಹುಬ್ಬಳ್ಳಿSWRLY/R/T/26/00457
ಆದೇಶ ತಲುಪಿಲ್ಲ ಎಂಬ ಉತ್ತರ

ಕನ್ನಡ ಆದೇಶ "ನಮಗೆ ತಲುಪಿಯೇ ಇಲ್ಲ" ಎಂದ ಹುಬ್ಬಳ್ಳಿ ರೈಲ್ವೆ ವಿಭಾಗ

ಐದೂ ಪ್ರಶ್ನೆಗಳಿಗೆ ಒಂದೇ ವಾಕ್ಯದ ಉತ್ತರ: ಆದೇಶ "ತಲುಪಿಲ್ಲ". ಅದೇ ಪತ್ರ, OM ಅಲ್ಲ, ಹಿಂದಿಯ ವಾರ್ಷಿಕ ಕಾರ್ಯಕ್ರಮವನ್ನು ಉಲ್ಲೇಖಿಸಿ, ವಿಭಾಗದ ಎಲ್ಲ ಫಲಕಗಳು ಈಗಾಗಲೇ ಮೂರು ಭಾಷೆಗಳಲ್ಲಿವೆ ಎನ್ನುತ್ತದೆ.

ನೈಋತ್ಯ ರೈಲ್ವೆ, ಹುಬ್ಬಳ್ಳಿ ವಿಭಾಗSWRHD/R/T/26/00336
ದಾಖಲೆಗಳನ್ನು ನೀಡಲಾಗಿದೆ

ಹುಬ್ಬಳ್ಳಿ ರೈಲ್ವೆ ಕಾರ್ಖಾನೆ: ಕನ್ನಡ ಮೊದಲಿರುವ ಫಲಕಗಳ ಫೋಟೋ; 2024ರಲ್ಲಿ ಕನ್ನಡ-ಹಿಂದಿ-ಇಂಗ್ಲಿಷ್ ಕ್ರಮ ಪಾಲಿಸುತ್ತಿದ್ದೇವೆ ಎಂದು ವರದಿ

25 ಪುಟಗಳ ಉತ್ತರ: ಒಂದು ಪುಟದ ಪತ್ರ, ಅನುಬಂಧ I (ರೈಲ್ವೆ ಹಿಂದಿ ಸಲಹಾ ಸಮಿತಿಯ ಸಭೆಯ ನಡಾವಳಿ, ರೈಲ್ವೆ ಮಂಡಳಿ ಮತ್ತು ರಾಜಭಾಷಾ ಇಲಾಖೆಯ ಪತ್ರಗಳು) ಮತ್ತು ಅನುಬಂಧ II (ಎರಡು ರಾಜಭಾಷಾ ತಪಾಸಣಾ ಪಟ್ಟಿ, 2024ರ ಅನುಸರಣಾ ಪತ್ರ, ಫಲಕಗಳ ಫೋಟೋಗಳು). ಇ-ಮೇಲ್‌ನಲ್ಲಿ ಬಂದ ಪ್ರತಿಯೂ ಇದೇ.

ಪ್ರಯಾಣಿಕರ ವಾಹನ ದುರಸ್ತಿ ಕಾರ್ಖಾನೆ, ಹುಬ್ಬಳ್ಳಿ (ನೈಋತ್ಯ ರೈಲ್ವೆ)SWRCW/R/X/26/00009
ಅನುಸರಣೆಯ ಹೇಳಿಕೆ, ಪುರಾವೆ ಇಲ್ಲ

ಯಾವುದೇ ಸುತ್ತೋಲೆ ಬಂದಿಲ್ಲ, ಆದರೂ ತ್ರಿಭಾಷಾ ನೀತಿ “ಕಟ್ಟುನಿಟ್ಟಾಗಿ” ಪಾಲನೆ ಎಂದ ಮೈಸೂರು ಕೇಂದ್ರ ರೈಲ್ವೆ ಕಾರ್ಯಾಗಾರ; ತಪಾಸಣಾ ವರದಿ ಕೊಡಲಿಲ್ಲ

ಎರಡು ಪುಟಗಳ ಕೋಷ್ಟಕ ರೂಪದ ಪತ್ರ. ಯಾವುದೇ ದಾಖಲೆ ಅಥವಾ ಫೋಟೋ ಇಲ್ಲ.

ನೈಋತ್ಯ ರೈಲ್ವೆ, ಕೇಂದ್ರ ಕಾರ್ಯಾಗಾರ, ಮೈಸೂರು ದಕ್ಷಿಣSWRMW/R/X/26/00013
ಅನುಸರಣೆಯ ಹೇಳಿಕೆ, ಪುರಾವೆ ಇಲ್ಲ

ಪ್ರತ್ಯೇಕ ಸುತ್ತೋಲೆ ಇಲ್ಲ, ತಪಾಸಣಾ ವರದಿ ಇಲ್ಲ, ಆದರೂ ಫಲಕಗಳು ತ್ರಿಭಾಷೆಯಲ್ಲಿವೆ ಎಂದ ಜಿಎಸ್‌ಟಿ ಮೇಲ್ಮನವಿ-II ಕಚೇರಿ

ಎರಡು ಪುಟಗಳ ಪತ್ರ (ಇ-ಮೇಲ್ ಮೂಲಕ): ಮೂರು ಅಂಶಗಳ ಉತ್ತರ ಮತ್ತು ಮೇಲ್ಮನವಿ ಪ್ರಾಧಿಕಾರದ ವಿಳಾಸ. ಯಾವುದೇ ಫೋಟೋ ಅಥವಾ ದಾಖಲೆ ಇಲ್ಲ.

ಕೇಂದ್ರ ತೆರಿಗೆ ಆಯುಕ್ತರ ಕಚೇರಿ (ಮೇಲ್ಮನವಿ - II), ಬೆಂಗಳೂರುCCEBL/R/E/26/00098
ದಾಖಲೆಗಳು ಲಭ್ಯವಿಲ್ಲ

OM ಹೊರಡಿಸಿದ ರಾಜಭಾಷಾ ಇಲಾಖೆಯಲ್ಲೇ ಅನುಸರಣೆಯ ದಾಖಲೆ ಇಲ್ಲ; 2022ರ ಜ್ಞಾಪನ ಪತ್ರ ಒಂದನ್ನು ಮಾತ್ರ ಕೊಟ್ಟಿದೆ

ಮೂರು ಪುಟಗಳ ಉತ್ತರ: ಎರಡು ಪುಟದ ಪತ್ರ ಮತ್ತು 05.09.2022ರ ಒಂದು ಪುಟದ ಅರೆ-ಸರ್ಕಾರಿ ಪತ್ರ.

ರಾಜಭಾಷಾ ಇಲಾಖೆ, ಕೇಂದ್ರ ಗೃಹ ಸಚಿವಾಲಯDPOOL/R/T/26/00178
ಅನುಸರಣೆಯ ಹೇಳಿಕೆ, ಪುರಾವೆ ಇಲ್ಲ

ಕರ್ನಾಟಕ ವೃತ್ತ ಕಚೇರಿಯ ಸೂಚನೆ ಪಾಲಿಸುತ್ತೇವೆ ಎಂದ ಬಿಎಸ್‌ಎನ್‌ಎಲ್ ಶಿವಮೊಗ್ಗ; ಉಳಿದದ್ದು ‘ವೃತ್ತ ಕಚೇರಿಯ ವ್ಯಾಪ್ತಿ’

ಒಂದು ಪುಟದ ಪತ್ರ. ಸುತ್ತೋಲೆಗಳನ್ನು ‘CO ಕರ್ನಾಟಕ’ ಹೊರಡಿಸಿದೆ ಎನ್ನುತ್ತದೆ, ಆದರೆ ಯಾವುದನ್ನೂ ಲಗತ್ತಿಸಿಲ್ಲ.

ಬಿಎಸ್‌ಎನ್‌ಎಲ್, ಶಿವಮೊಗ್ಗ ದೂರಸಂಪರ್ಕ ಜಿಲ್ಲೆBSNKN/R/E/26/00071/17
ಅನುಸರಣೆಯ ಹೇಳಿಕೆ, ಪುರಾವೆ ಇಲ್ಲ

ಬೆಂಗಳೂರು ದಕ್ಷಿಣ ಜಿಎಸ್‌ಟಿ: ಸುತ್ತೋಲೆ ಇಲ್ಲ; ತಪಾಸಣೆ, ಸರಿಪಡಿಸುವ ಕ್ರಮ, ಹೊಣೆಗಾರ ಎಲ್ಲದಕ್ಕೂ “ಫಲಕಗಳಲ್ಲಿ ಕನ್ನಡ ಇದೆ” ಎಂಬುದೇ ಉತ್ತರ

ನಾಲ್ಕು ಪುಟಗಳ ಹಿಂದಿ–ಇಂಗ್ಲಿಷ್ ಪತ್ರ. ಯಾವುದೇ ದಾಖಲೆ ಅಥವಾ ಫೋಟೋ ಲಗತ್ತಿಸಿಲ್ಲ.

ಕೇಂದ್ರ ತೆರಿಗೆ ಆಯುಕ್ತರ ಕಚೇರಿ, ಬೆಂಗಳೂರು ದಕ್ಷಿಣ ಕಮಿಷನರೇಟ್CCEBL/R/E/26/00098
ದಾಖಲೆಗಳು ಲಭ್ಯವಿಲ್ಲ

ನಾಲ್ಕೂ ಪ್ರಶ್ನೆಗಳಿಗೆ “ಮಾಹಿತಿ ಲಭ್ಯವಿಲ್ಲ” ಎಂದ ಬಿಎಸ್‌ಎನ್‌ಎಲ್ ಸಿವಿಲ್ ವಿಭಾಗ; ಐದನೇ ಪ್ರಶ್ನೆಗೆ ಉತ್ತರವೇ ಇಲ್ಲ

ಎರಡು ಪುಟಗಳ ಪತ್ರ: ನಾಲ್ಕು ಸಾಲಿನ ಕೋಷ್ಟಕ, ಪ್ರತಿ ಸಾಲಿಗೂ ಒಂದೇ ಉತ್ತರ. ಯಾವುದೇ ದಾಖಲೆ ಲಗತ್ತಿಸಿಲ್ಲ.

ಬಿಎಸ್‌ಎನ್‌ಎಲ್, ಸಿವಿಲ್ ವಿಭಾಗ, ಮುಖ್ಯ ಮಹಾಪ್ರಬಂಧಕರ ಕಚೇರಿ, ಕರ್ನಾಟಕ ಟೆಲಿಕಾಂ ವೃತ್ತ, ಬೆಂಗಳೂರುBSNKN/R/E/26/00071/10
ಮಾಹಿತಿ ನಿರಾಕರಣೆ

ಸೆಕ್ಷನ್ 6(1) ಪಾಲನೆಯಾಗಿಲ್ಲ ಎಂದು ಮಾಹಿತಿ ನಿರಾಕರಿಸಿದ ಸಿಜಿಎಸ್‌ಟಿ ಬೆಳಗಾವಿ

ಎರಡು ಪುಟಗಳ ಪತ್ರ: ಒಂದೇ ಕಾರಣ ನೀಡಿ ಎಲ್ಲ ಮಾಹಿತಿಯನ್ನೂ ನಿರಾಕರಿಸುತ್ತದೆ ಮತ್ತು ಮೇಲ್ಮನವಿ ಪ್ರಾಧಿಕಾರಿಯನ್ನು ಹೆಸರಿಸುತ್ತದೆ.

ಕೇಂದ್ರ ಜಿಎಸ್‌ಟಿ ಮತ್ತು ಕೇಂದ್ರ ಅಬಕಾರಿ ಆಯುಕ್ತರ ಕಚೇರಿ, ಬೆಳಗಾವಿCCEBL/R/E/26/00098
ಅನುಸರಣೆಯ ಹೇಳಿಕೆ, ಪುರಾವೆ ಇಲ್ಲ

ಫಲಕಗಳಲ್ಲಿ ಕನ್ನಡ ಇದೆ ಎಂದ ಜಿಎಸ್‌ಟಿ ಬೆಂಗಳೂರು ಪಶ್ಚಿಮ; ಪ್ರತ್ಯೇಕ ಸುತ್ತೋಲೆ, ತಪಾಸಣಾ ವರದಿ, ಮೇಲ್ವಿಚಾರಣಾ ಅಧಿಕಾರಿ ಯಾವುದೂ ಇಲ್ಲ

ಎರಡು ಪುಟಗಳ ಪತ್ರ (ಇ-ಮೇಲ್ ಮೂಲಕ). ಯಾವುದೇ ದಾಖಲೆ ಅಥವಾ ಫೋಟೋ ಲಗತ್ತಿಸಿಲ್ಲ.

ಕೇಂದ್ರ ತೆರಿಗೆ ಪ್ರಧಾನ ಆಯುಕ್ತರ ಕಚೇರಿ, ಬೆಂಗಳೂರು ಪಶ್ಚಿಮ ಆಯುಕ್ತಾಲಯCCEBL/R/E/26/00098
ಅನುಸರಣೆಯ ಹೇಳಿಕೆ, ಪುರಾವೆ ಇಲ್ಲ

ಎಲ್ಲ ರೈಲುಗಳ ಗಮ್ಯಸ್ಥಾನ ಫಲಕಗಳಲ್ಲಿ ಕನ್ನಡ ಮೊದಲು ಎಂದ ನೈಋತ್ಯ ರೈಲ್ವೆ ಯಾಂತ್ರಿಕ ವಿಭಾಗ; ಐದು ಪ್ರಶ್ನೆಗೆ ಒಂದೇ ಉತ್ತರ

ಎರಡು ಪುಟಗಳ ಪತ್ರ: ಐದೂ ಪ್ರಶ್ನೆಗಳಿಗೆ ಕೋಷ್ಟಕದಲ್ಲಿ ಒಂದೇ ಉತ್ತರ. ಯಾವುದೇ ದಾಖಲೆ ಅಥವಾ ಫೋಟೋ ಲಗತ್ತಿಸಿಲ್ಲ.

ನೈಋತ್ಯ ರೈಲ್ವೆ, ಕೇಂದ್ರ ಕಚೇರಿ, ಯಾಂತ್ರಿಕ ವಿಭಾಗ, ಹುಬ್ಬಳ್ಳಿSWRLY/R/T/26/00457/2
ಅನುಸರಣೆಯ ಹೇಳಿಕೆ, ಪುರಾವೆ ಇಲ್ಲ

ಫಲಕಗಳು ಕನ್ನಡ, ಹಿಂದಿ, ಇಂಗ್ಲಿಷ್‌ನಲ್ಲಿವೆ ಎಂದ ಸಿಜಿಎಸ್‌ಟಿ ಆಡಿಟ್-II ಬೆಂಗಳೂರು; ಸುತ್ತೋಲೆ, ವರದಿ, ಹೊಣೆಗಾರ ಅಧಿಕಾರಿ ಯಾವುದೂ ಇಲ್ಲ

ಎರಡು ಪುಟಗಳ ಪತ್ರ, ಇ-ಮೇಲ್ ಮೂಲಕ; ಯಾವುದೇ ದಾಖಲೆ ಅಥವಾ ಫೋಟೋ ಲಗತ್ತಿಸಿಲ್ಲ.

ಕೇಂದ್ರ ತೆರಿಗೆ ಆಯುಕ್ತರ (ಲೆಕ್ಕಪರಿಶೋಧನೆ-II) ಕಚೇರಿ, ಬೆಂಗಳೂರುCCEBL/R/E/26/00098
ದಾಖಲೆಗಳು ಲಭ್ಯವಿಲ್ಲ

ನಿಯಮ ರೂಪಿಸಿದ ಇಲಾಖೆಯ ಬಳಿಯೇ ಅದರ ಪಾಲನೆಯ ಯಾವುದೇ ದಾಖಲೆ ಇಲ್ಲ

OM 14013/04/2022 ಹೊರಡಿಸಿದ ರಾಜಭಾಷಾ ಇಲಾಖೆಯೇ ತನ್ನ ಆದೇಶದ ಪಾಲನೆ ಕುರಿತು ಯಾವುದೇ ದಾಖಲೆ ಇಲ್ಲ ಎನ್ನುತ್ತದೆ. ಅದು ಕಳುಹಿಸಿದ ಏಕೈಕ ದಾಖಲೆ, ಸಚಿವಾಲಯಗಳು ಪಾಲನೆಯ ಮಾಹಿತಿ ಕಳುಹಿಸಿಲ್ಲ ಎಂದು ನೆನಪಿಸಿದ 2022ರ ಪತ್ರ.

ರಾಜಭಾಷಾ ಇಲಾಖೆ, ಗೃಹ ಸಚಿವಾಲಯDPOOL/R/T/26/00172
ಅನುಸರಣೆಯ ಹೇಳಿಕೆ, ಪುರಾವೆ ಇಲ್ಲ

3 ನಾಮಫಲಕ, 9 ಸೂಚನಾಫಲಕ ಮೂರೂ ಭಾಷೆಯಲ್ಲಿವೆ ಎಂದ ಮೈಸೂರು ಜಿಎಸ್‌ಟಿ ಮೇಲ್ಮನವಿ ಕಚೇರಿ; 2011ರ ಜ್ಞಾಪನ ಉಲ್ಲೇಖ

ಎರಡು ಪುಟಗಳ ಪತ್ರ, ಇ-ಮೇಲ್ ಮೂಲಕ; ಯಾವುದೇ ದಾಖಲೆ ಅಥವಾ ಫೋಟೋ ಲಗತ್ತಿಸಿಲ್ಲ.

ಕೇಂದ್ರ ಜಿಎಸ್‌ಟಿ ಮತ್ತು ಕೇಂದ್ರ ಅಬಕಾರಿ ಆಯುಕ್ತರ (ಮೇಲ್ಮನವಿ) ಕಚೇರಿ, ಮೈಸೂರುCCEBL/R/E/26/00098
ಉತ್ತರವಿಲ್ಲ

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ: ಉತ್ತರ ಅಂಚೆಯಲ್ಲಿ ಕಳಿಸಿದ್ದೇವೆ ಎಂದು ಪೋರ್ಟಲ್‌ನಲ್ಲಿ ಅರ್ಜಿ ಮುಚ್ಚಿದೆ

ಪೋರ್ಟಲ್‌ನಲ್ಲಿ ಉತ್ತರದ ದಾಖಲೆ ಇಲ್ಲ; ಉತ್ತರವನ್ನು 01.09.2026ರಂದು ಅಂಚೆಯಲ್ಲಿ ಕಳಿಸಲಾಗಿದೆ ಎಂಬ ಒಂದು ಸಾಲಿನ ಟಿಪ್ಪಣಿ ಮಾತ್ರ ಇದೆ.

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯCUVRK/R/E/26/00082
ಭಾಗಶಃ ಉತ್ತರ

ತ್ರಿಭಾಷಾ ಫಲಕಗಳ ಅನುಸರಣೆಯ ಮಾಹಿತಿ ಸಚಿವಾಲಯಗಳಿಂದ ಬಂದಿಲ್ಲ ಎಂದು 2022ರಲ್ಲೇ ಬರೆದಿದ್ದ ರಾಜಭಾಷಾ ಇಲಾಖೆ; ತಪಾಸಣೆ ದಾಖಲೆ ತನ್ನಲ್ಲೂ ಇಲ್ಲ

ಮೂರು ಪುಟಗಳ ಉತ್ತರ: ಎರಡು ಪುಟಗಳ ದ್ವಿಭಾಷಾ ಪತ್ರ ಮತ್ತು ಎಲ್ಲ ಸಚಿವಾಲಯಗಳಿಗೆ ಕಳುಹಿಸಿದ 05.09.2022ರ ಹಿಂದಿ ಅರ್ಧ-ಶಾಸಕೀಯ ಪತ್ರ. ಸಿಬ್ಬಂದಿ ಆಯ್ಕೆ ಆಯೋಗ, ಬೆಂಗಳೂರು 1, 3, 4, 5ನೇ ಅಂಶಗಳನ್ನು ವರ್ಗಾಯಿಸಿತ್ತು.

ರಾಜಭಾಷಾ ಇಲಾಖೆ, ಗೃಹ ಸಚಿವಾಲಯ, ನವದೆಹಲಿDPOOL/R/X/26/00003
ಮಾಹಿತಿ ನಿರಾಕರಣೆ

ಐಟಿಐ ಲಿಮಿಟೆಡ್: ಫಲಕಗಳ ಸುತ್ತೋಲೆ, ತಪಾಸಣಾ ವರದಿಗಳಿಗೆ ವೈಯಕ್ತಿಕ ಮಾಹಿತಿಯ ವಿನಾಯಿತಿ, ಸೆಕ್ಷನ್ 8(1)(j)

ಪೋರ್ಟಲ್‌ನಲ್ಲಿ ಮಾತ್ರ ಇರುವ ಪಠ್ಯ ಉತ್ತರ: ಸೆಕ್ಷನ್ 8(1)(j) ಅಡಿಯಲ್ಲಿ ನಿರಾಕರಣೆ, ಜೊತೆಗೆ ಮಾರ್ಗಸೂಚಿಗಳನ್ನು ಪಾಲಿಸುತ್ತಿದ್ದೇವೆ ಎಂಬ ಹೇಳಿಕೆ. ಯಾವುದೇ ದಾಖಲೆ ಇಲ್ಲ.

ಐಟಿಐ ಲಿಮಿಟೆಡ್ (ಇಂಡಿಯನ್ ಟೆಲಿಫೋನ್ ಇಂಡಸ್ಟ್ರೀಸ್)ITILT/R/E/26/00060
ಅನುಸರಣೆಯ ಹೇಳಿಕೆ, ಪುರಾವೆ ಇಲ್ಲ

ಜಿಎಸ್‌ಟಿ ಲೆಕ್ಕಪರಿಶೋಧನೆ-I ಬೆಂಗಳೂರು: ಫಲಕಗಳು ತ್ರಿಭಾಷೆಯಲ್ಲಿವೆ ಎಂಬ ಹೇಳಿಕೆ, ಸುತ್ತೋಲೆ, ತಪಾಸಣೆ, ಹೊಣೆಗಾರ ಇಲ್ಲ

ಎರಡು ಪುಟಗಳ ಪತ್ರ, ಐದೂ ಅಂಶಗಳಿಗೆ ಉತ್ತರ. ಯಾವುದೇ ದಾಖಲೆ ಅಥವಾ ಫೋಟೋ ಲಗತ್ತಿಸಿಲ್ಲ.

ಕೇಂದ್ರ ತೆರಿಗೆ ಲೆಕ್ಕಪರಿಶೋಧನೆ-I ಕಮಿಷನರೇಟ್, ಬೆಂಗಳೂರುCCEBL/R/E/26/00098
ದಾಖಲೆಗಳನ್ನು ನೀಡಲಾಗಿದೆ

ಜಿಎಸ್‌ಟಿ ಬೆಂಗಳೂರು ಉತ್ತರ ಕಳುಹಿಸಿದ ‘ಸೂಚನೆ’ ಫಲಕಗಳು ‘ದ್ವಿಭಾಷೆ/ತ್ರಿಭಾಷೆ’ಯಲ್ಲಿರಲಿ ಎನ್ನುತ್ತದೆ, ಕನ್ನಡದ ಹೆಸರಿಲ್ಲ

ಒಂಬತ್ತು ಪುಟಗಳ ಉತ್ತರ: ಎರಡು ಪುಟದ ಪತ್ರ, ಜಾಗೃತ (ವಿಜಿಲೆನ್ಸ್) ವಿಭಾಗದ ಮೂರು ಪುಟದ ರಾಜಭಾಷಾ ತಪಾಸಣಾ ವರದಿ ಮತ್ತು 05.01.2026ರ ನಾಲ್ಕು ಪುಟದ ‘ಚೆಕ್ ಪಾಯಿಂಟ್’ ಸೂಚನೆ.

ಕೇಂದ್ರ ತೆರಿಗೆ ಆಯುಕ್ತರ ಕಚೇರಿ, ಬೆಂಗಳೂರು ಉತ್ತರ ಆಯುಕ್ತಾಲಯCCEBL/R/E/26/00098
ಭಾಗಶಃ ಉತ್ತರ

2022ರಲ್ಲಿ ಎಲ್ಲ ಸಚಿವಾಲಯಗಳಿಂದ ಅನುಸರಣಾ ವರದಿ ಕೇಳಿದ್ದ ರಾಜಭಾಷಾ ಇಲಾಖೆ, ಈಗ ‘ಸಂಬಂಧಿತ ದಾಖಲೆಗಳು ಇಲಾಖೆಯಲ್ಲಿ ಇಲ್ಲ’ ಎನ್ನುತ್ತದೆ

ಮೂರು ಪುಟಗಳ ಉತ್ತರ: ಎರಡು ಪುಟದ ಪತ್ರ ಮತ್ತು ಜಂಟಿ ಕಾರ್ಯದರ್ಶಿಯವರ 05.09.2022ರ ಅರೆ-ಸರ್ಕಾರಿ ಪತ್ರ (ಹಿಂದಿ). ಲೆಕ್ಕಪರಿಶೋಧನಾ ಮಹಾನಿರ್ದೇಶಕರ ಕಚೇರಿಯಿಂದ ವರ್ಗಾವಣೆಯಾದ ಅರ್ಜಿ.

ರಾಜಭಾಷಾ ಇಲಾಖೆ, ಗೃಹ ಸಚಿವಾಲಯDPOOL/R/T/26/00174
ದಾಖಲೆಗಳನ್ನು ನೀಡಲಾಗಿದೆ

ಹಾಸನ ಬಿಎಸ್‌ಎನ್‌ಎಲ್: “ಹಲವು” ಫಲಕಗಳು ತ್ರಿಭಾಷೆಯಲ್ಲಿವೆ ಎನ್ನುವ ರಾಜಭಾಷಾ ತಪಾಸಣಾ ವರದಿ ಕೊಟ್ಟಿದೆ, ಫೋಟೋ ಇಲ್ಲ

68 ಪುಟಗಳ ಉತ್ತರ: ಎರಡು ಪುಟದ ಪತ್ರ, 62 ಪುಟಗಳ ಅನುಬಂಧ 1 (ಕರ್ನಾಟಕ ವೃತ್ತದ ಸುತ್ತೋಲೆ, ಬಿಎಸ್‌ಎನ್‌ಎಲ್ ಮತ್ತು ದೂರಸಂಪರ್ಕ ಇಲಾಖೆಯ ರವಾನೆ ಪತ್ರಗಳು, ರಾಜಭಾಷಾ ಇಲಾಖೆಯ 2026-27ರ ವಾರ್ಷಿಕ ಕಾರ್ಯಕ್ರಮ) ಮತ್ತು 4 ಪುಟಗಳ ಅನುಬಂಧ 2 (ರಾಜಭಾಷಾ ತಪಾಸಣಾ ವರದಿ, ಹಿಂದಿ ಕಾರ್ಯಾಗಾರದ ವರದಿ).

ಭಾರತ ಸಂಚಾರ ನಿಗಮ ಲಿಮಿಟೆಡ್, ಹಾಸನBSNKN/R/E/26/00071/18
ದಾಖಲೆಗಳನ್ನು ನೀಡಲಾಗಿದೆ

ಮೈಸೂರು ಸಿಜಿಎಸ್‌ಟಿ ಲೆಕ್ಕಪರಿಶೋಧನಾ ಆಯುಕ್ತಾಲಯದಿಂದ ತಪಾಸಣಾ ಅಂಶಗಳ ಆದೇಶ ಮತ್ತು ಹಿಂದಿ ತಪಾಸಣಾ ವರದಿ; ಕನ್ನಡದ ಉಲ್ಲೇಖವಿಲ್ಲ

11 ಪುಟಗಳ ಉತ್ತರ: ಪತ್ರ ಮತ್ತು ಕೋಷ್ಟಕ, 12.01.2026ರ ತಪಾಸಣಾ ಅಂಶಗಳ ಆದೇಶ, 25.06.2026ರ ಸ್ಥಾಪನಾ ವಿಭಾಗದ ತಪಾಸಣಾ ವರದಿ ಮತ್ತು 22.07.2026ರ ಅನುಸರಣಾ ಪತ್ರ.

ಕೇಂದ್ರ ತೆರಿಗೆ ಆಯುಕ್ತರ ಕಚೇರಿ, ಮೈಸೂರು ಲೆಕ್ಕಪರಿಶೋಧನಾ ಆಯುಕ್ತಾಲಯCCEBL/R/E/26/00098
ಮಾಹಿತಿ ನಿರಾಕರಣೆ

ಸುತ್ತೋಲೆ ಬಂದಿಲ್ಲ ಎಂದು ಸೆಕ್ಷನ್ 2(f) ಅಡಿ ಮಾಹಿತಿ ನಿರಾಕರಿಸಿದ ಸಿಜಿಐಟಿ ಬೆಂಗಳೂರು; ಫಲಕಗಳು ಸ್ಥಳೀಯ ಮತ್ತು ಅಧಿಕೃತ ಭಾಷೆಯಲ್ಲಿವೆ ಎಂಬ ಒಂದು ಸಾಲು

ಪೋರ್ಟಲ್‌ನಲ್ಲಿ ಮಾತ್ರ ಉತ್ತರ, PDF ಇಲ್ಲ: ಒಂದು ಸಾಲಿನ ಹೇಳಿಕೆ ಮತ್ತು ಸೆಕ್ಷನ್ 2(f)ರ ವ್ಯಾಖ್ಯಾನವನ್ನು ಉಲ್ಲೇಖಿಸಿದ ನಿರಾಕರಣೆ.

ಕೇಂದ್ರ ಸರ್ಕಾರದ ಕೈಗಾರಿಕಾ ನ್ಯಾಯಮಂಡಳಿ ಮತ್ತು ಕಾರ್ಮಿಕ ನ್ಯಾಯಾಲಯ, ಬೆಂಗಳೂರುCITBA/R/E/26/00047
ದಾಖಲೆಗಳು ಲಭ್ಯವಿಲ್ಲ

ಐದೂ ಪ್ರಶ್ನೆಗಳಿಗೆ ‘ಮಾಹಿತಿ ಈ ಕಚೇರಿಯಲ್ಲಿ ಲಭ್ಯವಿಲ್ಲ’ ಎಂದ ಮೈಸೂರು ರೈಲ್ವೆ ವಿಭಾಗದ ಸಿಬ್ಬಂದಿ ವಿಭಾಗ

ಒಂದು ಪುಟದ ಪತ್ರ: ಐದೂ ಅಂಶಗಳಿಗೆ ಒಂದೇ ಸಾಲಿನ ಉತ್ತರ.

ನೈಋತ್ಯ ರೈಲ್ವೆ, ಮೈಸೂರು ವಿಭಾಗ (ಸಿಬ್ಬಂದಿ ವಿಭಾಗ)SWRMD/R/T/26/00320
ಅನುಸರಣೆಯ ಹೇಳಿಕೆ, ಪುರಾವೆ ಇಲ್ಲ

ಯಾವುದೇ ಸುತ್ತೋಲೆ ಹೊರಡಿಸಿಲ್ಲ, ಆದರೂ ಫಲಕಗಳು ತ್ರಿಭಾಷೆಯಲ್ಲಿವೆ ಎಂದ ಸಿಜಿಎಸ್‌ಟಿ ಮೇಲ್ಮನವಿ-1 ಆಯುಕ್ತಾಲಯ

ಎರಡು ಪುಟಗಳ ಪತ್ರ: ಮೂರು ಸಾಲಿನ ಉತ್ತರ. ಯಾವುದೇ ಫೋಟೋ ಅಥವಾ ದಾಖಲೆ ಇಲ್ಲ.

ಕೇಂದ್ರ ತೆರಿಗೆ ಆಯುಕ್ತರ ಕಚೇರಿ, ಮೇಲ್ಮನವಿ-1 ಆಯುಕ್ತಾಲಯ, ಬೆಂಗಳೂರುCCEBL/R/E/26/00098
ಅನುಸರಣೆಯ ಹೇಳಿಕೆ, ಪುರಾವೆ ಇಲ್ಲ

ಸುತ್ತೋಲೆ ಹೊರಡಿಸಿಲ್ಲ, ಆದರೆ ಫಲಕಗಳು ಮೂರೂ ಭಾಷೆಯಲ್ಲಿವೆ ಎಂದ ಜಿಎಸ್‌ಟಿ ಬೆಂಗಳೂರು ಪೂರ್ವ; ಹೊಣೆಗಾರ ಅಧಿಕಾರಿಯ ಪ್ರಶ್ನೆ ‘ಅನ್ವಯಿಸದು’

ಒಂದು ಪುಟದ ಪತ್ರ, ಇ-ಮೇಲ್ ಮೂಲಕ; ಐದು ಅಂಶಗಳಿಗೆ ಮೂರು ಸಾಲುಗಳ ಉತ್ತರ, ಯಾವುದೇ ದಾಖಲೆ ಅಥವಾ ಫೋಟೋ ಇಲ್ಲ.

ಕೇಂದ್ರ ತೆರಿಗೆ ಪ್ರಧಾನ ಆಯುಕ್ತರ ಕಚೇರಿ, ಜಿಎಸ್‌ಟಿ ಆಯುಕ್ತಾಲಯ, ಬೆಂಗಳೂರು ಪೂರ್ವCCEBL/R/E/26/00098
ದಾಖಲೆಗಳನ್ನು ನೀಡಲಾಗಿದೆ

ಬೆಂಗಳೂರು ಉತ್ತರ ಪಶ್ಚಿಮ ಜಿಎಸ್‌ಟಿ: ಹಿಂದಿ ಜಾರಿಯ ‘ತಪಾಸಣಾ ಅಂಶಗಳು’ ಮತ್ತು ಒಂದು ತಪಾಸಣಾ ವರದಿ ಕೊಟ್ಟಿದೆ; ಕನ್ನಡದ ಹೆಸರಿಲ್ಲ

9 ಪುಟಗಳ ಉತ್ತರ: ಮೂರು ಪುಟದ ಪತ್ರ, 05.01.2026ರ ನಾಲ್ಕು ಪುಟಗಳ ‘ತಪಾಸಣಾ ಅಂಶಗಳ’ ಸೂಚನೆ ಮತ್ತು 2024ರ ಎರಡು ಪುಟಗಳ ರಾಜಭಾಷಾ ತಪಾಸಣಾ ವರದಿ.

ಕೇಂದ್ರ ತೆರಿಗೆ ಆಯುಕ್ತರ ಕಚೇರಿ, ಬೆಂಗಳೂರು ಉತ್ತರ ಪಶ್ಚಿಮ ಕಮಿಷನರೇಟ್CCEBL/R/E/26/00098
ಅನುಸರಣೆಯ ಹೇಳಿಕೆ, ಪುರಾವೆ ಇಲ್ಲ

ಮಂಗಳೂರು ಜಿಎಸ್‌ಟಿ: ಎಲ್ಲ ಫಲಕಗಳು ತ್ರಿಭಾಷೆಯಲ್ಲಿವೆ ಎಂಬ ಹೇಳಿಕೆ; ಸುತ್ತೋಲೆ, ತಪಾಸಣೆ, ಹೊಣೆಗಾರ ಇಲ್ಲ

ಮೂರು ಪುಟಗಳ ಪತ್ರ, ಐದು ಸಾಲಿನ ಕೋಷ್ಟಕ. ಯಾವುದೇ ದಾಖಲೆ ಅಥವಾ ಫೋಟೋ ಲಗತ್ತಿಸಿಲ್ಲ.

ಕೇಂದ್ರ ಅಬಕಾರಿ ಮತ್ತು ಸಿಜಿಎಸ್‌ಟಿ ಆಯುಕ್ತರ ಕಚೇರಿ, ಮಂಗಳೂರುCCEBL/R/E/26/00098
ಭಾಗಶಃ ಉತ್ತರ

ಮೈಸೂರು ಜಿಎಸ್‌ಟಿ: 13 ನಾಮಫಲಕ, 40 ಸೂಚನಾಫಲಕ ತ್ರಿಭಾಷೆಯಲ್ಲಿವೆ ಎಂದು ಹೇಳಿಕೆ; ತಪಾಸಣಾ ವರದಿಗಳಿಗೆ ಸೆಕ್ಷನ್ 8(1) ವಿನಾಯಿತಿ

ಎರಡು ಪುಟಗಳ ಪತ್ರ. ಯಾವುದೇ ದಾಖಲೆ ಅಥವಾ ಫೋಟೋ ಲಗತ್ತಿಸಿಲ್ಲ.

ಕೇಂದ್ರ ತೆರಿಗೆ ಪ್ರಧಾನ ಆಯುಕ್ತರ ಕಚೇರಿ, ಜಿಎಸ್‌ಟಿ ಕಮಿಷನರೇಟ್, ಮೈಸೂರುCCEBL/R/E/26/00098
ದಾಖಲೆಗಳನ್ನು ನೀಡಲಾಗಿದೆ

ಕೇಂದ್ರೀಯ ಲೆಕ್ಕಪರಿಶೋಧನಾ ಕಚೇರಿಯಿಂದ ಆದೇಶಗಳು ಮತ್ತು ಕನ್ನಡ ಫಲಕಗಳ ಫೋಟೋ; 2024ರಲ್ಲಿ ಮೂರು ಇಂಗ್ಲಿಷ್ ನಾಮಫಲಕ ಪತ್ತೆ, ಎರಡು ಜ್ಞಾಪನಗಳಿಗೂ ಉತ್ತರ ಬಂದಿರಲಿಲ್ಲ

37 ಪುಟಗಳು: ಎರಡು ಪುಟದ ಉತ್ತರ (ಇ-ಮೇಲ್‌ನಲ್ಲೂ ಅದೇ), ರಾಜಭಾಷಾ ಇ-ಮೇಲ್ ಮತ್ತು ಐದು ಕಚೇರಿ ಆದೇಶಗಳು, ಆರು ಫಲಕಗಳ ಫೋಟೋಗಳು, ಹಾಗೂ 2024ರ ಒಂದು ಪತ್ರ ಮತ್ತು ಮೂರು ಆಂತರಿಕ ಜ್ಞಾಪನಗಳು (ಹಿಂದಿಯಲ್ಲಿ).

ಪ್ರಧಾನ ನಿರ್ದೇಶಕರು ಲೆಕ್ಕ ಪರಿಶೋಧನೆ (ಕೇಂದ್ರೀಯ) ರವರ ಕಾರ್ಯಾಲಯ, ಬೆಂಗಳೂರುDGPDB/R/E/26/00010
ಉತ್ತರವಿಲ್ಲ

‘ಲಗತ್ತಿನಂತೆ’ ಎಂದು ಅರ್ಜಿ ವಿಲೇವಾರಿ; ಲಗತ್ತೇ ಇಲ್ಲ

04.09.2026ರಂದು ಅರ್ಜಿ ವಿಲೇವಾರಿ ಎಂದು ಮುಚ್ಚಲಾಗಿದೆ; ಪೋರ್ಟಲ್‌ನಲ್ಲಿ ಉತ್ತರ ದಾಖಲೆ ಲಗತ್ತಾಗಿಲ್ಲ.

ಪ್ರಾದೇಶಿಕ ನಿರ್ದೇಶಕರು (SWR), ಬೆಂಗಳೂರುSWRBG/R/E/26/00005
ದಾಖಲೆಗಳನ್ನು ನೀಡಲಾಗಿದೆ

ತುಮಕೂರು ಕಚೇರಿಯ ಫಲಕಗಳು ತ್ರಿಭಾಷೆಯಲ್ಲಿವೆ ಎಂದು ಬಿಎಸ್‌ಎನ್‌ಎಲ್ ರಾಜಭಾಷಾ ತಪಾಸಣಾ ವರದಿ; ಸುತ್ತೋಲೆ ಎಂದು ಕೊಟ್ಟದ್ದು ಹಿಂದಿ ವಾರ್ಷಿಕ ಕಾರ್ಯಕ್ರಮ

69 ಪುಟಗಳ ಉತ್ತರ: ಎರಡು ಪುಟದ ಪತ್ರ, 63 ಪುಟಗಳ ಅನುಬಂಧ 1 (ರಾಜಭಾಷಾ ಇಲಾಖೆಯ 2026-27ರ ವಾರ್ಷಿಕ ಕಾರ್ಯಕ್ರಮ ಮತ್ತು ಅದನ್ನು ರವಾನಿಸಿದ ನಾಲ್ಕು ಪತ್ರಗಳು) ಹಾಗೂ 4 ಪುಟಗಳ ಅನುಬಂಧ 2 (07.03.2026ರ ರಾಜಭಾಷಾ ತಪಾಸಣಾ ವರದಿ).

ಬಿಎಸ್‌ಎನ್‌ಎಲ್, ತುಮಕೂರು ವ್ಯಾಪಾರ ವಲಯBSNKN/R/E/26/00071/2
ಆದೇಶ ತಲುಪಿಲ್ಲ ಎಂಬ ಉತ್ತರ

OM ಬಂದೇ ಇಲ್ಲ, 2010ರ ಪತ್ರದಂತೆ ಕ್ರಮ ಎಂದ ರಕ್ಷಣಾ-ವಾಣಿಜ್ಯ ಲೆಕ್ಕಪರಿಶೋಧನಾ ಕಚೇರಿ

ಒಂದು ಪುಟದ ಕೋಷ್ಟಕ ರೂಪದ ಉತ್ತರ ಮತ್ತು ಅದನ್ನು ಕಳುಹಿಸಿದ ಇ-ಮೇಲ್‌ನ ಮುದ್ರಣ. ಯಾವುದೇ ದಾಖಲೆ ಅಥವಾ ಫೋಟೋ ಇಲ್ಲ.

ಮಹಾನಿರ್ದೇಶಕರ ಕಚೇರಿ, ಲೆಕ್ಕಪರಿಶೋಧನೆ ರಕ್ಷಣಾ - ವಾಣಿಜ್ಯ, ಬೆಂಗಳೂರುDGADC/R/X/26/00001
ದಾಖಲೆಗಳು ಲಭ್ಯವಿಲ್ಲ

ಯಾವುದೇ ಸುತ್ತೋಲೆ ಹೊರಡಿಸಿಲ್ಲ, ಕ್ರಮ ಮತ್ತು ತಪಾಸಣೆಯ ಮಾಹಿತಿ “ಲಭ್ಯವಿಲ್ಲ” ಎಂದ ಬಾಹ್ಯಾಕಾಶ ಇಲಾಖೆ

ಮೂರು ಪುಟಗಳ ಉತ್ತರ: CPIO ಜೊತೆ ಪತ್ರ, APIO ಪತ್ರ ಮತ್ತು ಹಿಂದಿ ವಿಭಾಗದ ಒಂದು ಪುಟದ ಕೋಷ್ಟಕ. ಅದೇ ಪತ್ರಗಳನ್ನು ಇ-ಮೇಲ್ ಮೂಲಕವೂ ಕಳುಹಿಸಲಾಗಿದೆ.

ಬಾಹ್ಯಾಕಾಶ ಇಲಾಖೆ, ಬೆಂಗಳೂರುDSPCE/R/T/26/00078
ದಾಖಲೆಗಳು ಲಭ್ಯವಿಲ್ಲ

ವಿಮಾ ಕಂಪನಿಗಳ ಮೇಲೆ ತನಗೆ ಅಧಿಕಾರವಿಲ್ಲ ಎಂದ ವಿಮಾ ಓಂಬುಡ್ಸ್‌ಮನ್; ತನ್ನದೇ ಕಚೇರಿಯ ಫಲಕಗಳ ಬಗ್ಗೆ ಮಾತಿಲ್ಲ

ಪೋರ್ಟಲ್‌ನಲ್ಲಿ ಬರೆದ ನಾಲ್ಕು ಪ್ಯಾರಾದ ಸಣ್ಣ ಉತ್ತರ; ಯಾವುದೇ ದಾಖಲೆ ಲಗತ್ತಿಸಿಲ್ಲ.

ವಿಮಾ ಓಂಬುಡ್ಸ್‌ಮನ್ ಕಚೇರಿ, ಬೆಂಗಳೂರುINOBB/R/E/26/00012
ಅನುಸರಣೆಯ ಹೇಳಿಕೆ, ಪುರಾವೆ ಇಲ್ಲ

ಮಹಾನಿರ್ದೇಶಕರಿಂದ ಯಾವುದೇ ಮಾರ್ಗಸೂಚಿ ಬಂದಿಲ್ಲ, ಆದರೆ ಫಲಕಗಳು ಕನ್ನಡದಲ್ಲೂ ಇವೆ ಎಂದ ಕಾರ್ಮಿಕ ಕಲ್ಯಾಣ ಸಂಘಟನೆ ಬೆಂಗಳೂರು

ಎರಡು ಪುಟಗಳ ಉತ್ತರ: ಜೊತೆ ಪತ್ರ ಮತ್ತು ಐದು ಅಂಶಗಳ ಉತ್ತರದ ಕೋಷ್ಟಕ (ಅನುಬಂಧ A). ಯಾವುದೇ ದಾಖಲೆ ಅಥವಾ ಫೋಟೋ ಲಗತ್ತಿಸಿಲ್ಲ.

ಕಲ್ಯಾಣ ಮತ್ತು ಸೆಸ್ ಆಯುಕ್ತರ ಕಚೇರಿ, ಕಾರ್ಮಿಕ ಕಲ್ಯಾಣ ಸಂಘಟನೆ, ಬೆಂಗಳೂರುOWCBL/R/E/26/00015
ಅನುಸರಣೆಯ ಹೇಳಿಕೆ, ಪುರಾವೆ ಇಲ್ಲ

ಫಲಕಗಳು ತ್ರಿಭಾಷೆಯಲ್ಲಿವೆ ಎಂದ ಮಹಾಲೇಖಪಾಲರ ಕಚೇರಿ; ಜವಾಬ್ದಾರ ಅಧಿಕಾರಿಯ ಹೆಸರು ‘ವೈಯಕ್ತಿಕ ಮಾಹಿತಿ’ ಎಂದು ನಿರಾಕರಣೆ

ಎರಡು ಪುಟಗಳ ಕೋಷ್ಟಕ ರೂಪದ ಪತ್ರ. ಯಾವುದೇ ದಾಖಲೆ ಅಥವಾ ಫೋಟೋ ಇಲ್ಲ.

ಮಹಾಲೇಖಪಾಲರ (ಲೆಕ್ಕ ಮತ್ತು ಹಕ್ದಾರಿ) ಕಛೇರಿ, ಕರ್ನಾಟಕ, ಬೆಂಗಳೂರುPAGAK/R/E/26/00032
ಅನುಸರಣೆಯ ಹೇಳಿಕೆ, ಪುರಾವೆ ಇಲ್ಲ

ಯಾವುದೇ ಸುತ್ತೋಲೆ, ತಪಾಸಣೆ ಇಲ್ಲ, ಆದರೂ OM ಪಾಲನೆಯಾಗುತ್ತಿದೆ ಎಂದ ಲೆಕ್ಕಪರಿಶೋಧನೆ-I ಮಹಾಲೇಖಪಾಲರ ಕಚೇರಿ

ಪೋರ್ಟಲ್‌ನಲ್ಲಿ ಮಾತ್ರ ಉತ್ತರ, PDF ಇಲ್ಲ: ಐದು ಪ್ರಶ್ನೆಗಳಿಗೆ ಪ್ರಶ್ನೆವಾರು ಪಠ್ಯ ಉತ್ತರ.

ಮಹಾಲೇಖಪಾಲರ (ಲೆಕ್ಕಪರಿಶೋಧನೆ-I) ಕಛೇರಿ, ಕರ್ನಾಟಕ, ಬೆಂಗಳೂರುPAGAU/R/E/26/00027
ಭಾಗಶಃ ಉತ್ತರ

ಸುತ್ತೋಲೆ, ತಪಾಸಣಾ ವರದಿ ಇಲ್ಲ ಎಂದ ಎನ್‌ಜಿಎಂಎ ಬೆಂಗಳೂರು, 12 ಫಲಕಗಳ ಫೋಟೋ ಕಳುಹಿಸಿತು

14 ಪುಟಗಳ ಉತ್ತರ: ಜೊತೆ ಪತ್ರ, ಒಂದು ಪುಟದ ಉತ್ತರ ಕೋಷ್ಟಕ ಮತ್ತು ಗ್ಯಾಲರಿಯ ಫಲಕ, ನಾಮಫಲಕ ಹಾಗೂ ಸೂಚನಾಫಲಕಗಳ 12 ಫೋಟೋಗಳು.

ರಾಷ್ಟ್ರೀಯ ಆಧುನಿಕ ಕಲಾ ಸಂಗ್ರಹಾಲಯ, ಬೆಂಗಳೂರುNGMA
ದಾಖಲೆಗಳನ್ನು ನೀಡಲಾಗಿದೆ

ಬೆಂಗಳೂರು ಬಿಎಸ್‌ಎನ್‌ಎಲ್: ಕನ್ನಡ ಮೊದಲಿರುವ 30 ಫಲಕಗಳ ಫೋಟೋ, ಎರಡು ರಾಜಭಾಷಾ ತಪಾಸಣಾ ಪತ್ರ

10 ಪುಟಗಳ ಉತ್ತರ: ಒಂದು ಪುಟದ ಪತ್ರ, ರಾಜಭಾಷಾ ತಪಾಸಣೆಯ ಆಧಾರದ ಎರಡು ಆಂತರಿಕ ಪತ್ರಗಳು (03.07.2026 ಮತ್ತು 26.11.2025) ಹಾಗೂ ನಾಲ್ಕು ಪುಟಗಳಲ್ಲಿ 30 ನಾಮಫಲಕ / ಸೂಚನಾಫಲಕಗಳ ಫೋಟೋಗಳು.

ಭಾರತ ಸಂಚಾರ ನಿಗಮ ಲಿಮಿಟೆಡ್, ಬೆಂಗಳೂರು ವ್ಯಾಪಾರ ಕ್ಷೇತ್ರBSNKN/R/E/26/00071/21
ದಾಖಲೆಗಳನ್ನು ನೀಡಲಾಗಿದೆ

ಸಿಜಿಎಸ್‌ಟಿ ಬೆಂಗಳೂರು ವಲಯದಿಂದ 05.01.2026ರ ಸೂಚನೆ ಮತ್ತು ಲೆಕ್ಕ ವಿಭಾಗದ ಹಿಂದಿ ತಪಾಸಣಾ ವರದಿ; ಕನ್ನಡದ ಉಲ್ಲೇಖವಿಲ್ಲ

ಒಂಬತ್ತು ಪುಟಗಳು: ಅರ್ಜಿಯನ್ನು 16 ಆಯುಕ್ತಾಲಯಗಳಿಗೆ ವರ್ಗಾಯಿಸಿದ 25.08.2026ರ ಪತ್ರ, ಒಂದು ಪುಟದ ಉತ್ತರ, 05.01.2026ರ ತಪಾಸಣಾ ಅಂಶಗಳ ಸೂಚನೆ ಮತ್ತು 20.07.2026ರ ತಪಾಸಣಾ ವರದಿ.

ಕೇಂದ್ರ ತೆರಿಗೆ ಪ್ರಧಾನ ಮುಖ್ಯ ಆಯುಕ್ತರ ಕಚೇರಿ, ಬೆಂಗಳೂರು ವಲಯCCEBL/R/E/26/00098
ದಾಖಲೆಗಳನ್ನು ನೀಡಲಾಗಿದೆ

ನಗರ ಸೀಮಾ ಸುಂಕ ಕಚೇರಿಯಿಂದ ಫಲಕಗಳ ಫೋಟೋ ಮತ್ತು ತಪಾಸಣಾ ಅಂಶಗಳ ಆದೇಶ; ಅನುಸರಣಾ ವರದಿ ಹಿಂದಿ ಬಳಕೆಯ ಬಗ್ಗೆ ಮಾತ್ರ

ಎರಡು ಪುಟಗಳ ಉತ್ತರ ಮತ್ತು 70 ಪುಟಗಳ ಲಗತ್ತು: ಐದು ಫಲಕಗಳ ಫೋಟೋಗಳು, 25.06.2026ರ ತಪಾಸಣಾ ಅಂಶಗಳ ಆದೇಶ, ರಾಜಭಾಷಾ ವಿಭಾಗದ 2026-27ರ ವಾರ್ಷಿಕ ಕಾರ್ಯಕ್ರಮ ಮತ್ತು ನಾಸಿನ್ ತಪಾಸಣೆಯ ಅನುಸರಣಾ ವರದಿ. ಅದೇ ಪತ್ರವನ್ನು ಇ-ಮೇಲ್ ಮೂಲಕವೂ ಕಳುಹಿಸಲಾಗಿದೆ.

ಆಯುಕ್ತರ ಕಛೇರಿ, ನಗರ ಸೀಮಾ ಸುಂಕ, ಬೆಂಗಳೂರುCCUBL/R/E/26/00075/1
ಮಾಹಿತಿ ನಿರಾಕರಣೆ

ಬೆಳಗಾವಿ ಜಿಎಸ್‌ಟಿ ಲೆಕ್ಕಪರಿಶೋಧನಾ ಕಚೇರಿ: ಸೆಕ್ಷನ್ 6(1)ರ ‘ಅನುಸರಣೆ ಇಲ್ಲ’ ಎಂದು ಮಾಹಿತಿ ನಿರಾಕರಣೆ

ಒಂದು ಪುಟದ ಪತ್ರ: 2009ರ ಕೇಂದ್ರ ಮಾಹಿತಿ ಆಯೋಗದ ಆದೇಶ ಉಲ್ಲೇಖಿಸಿ ಐದೂ ಪ್ರಶ್ನೆಗಳಿಗೆ ಮಾಹಿತಿ ನಿರಾಕರಿಸುತ್ತದೆ. ಯಾವುದೇ ಪ್ರಶ್ನೆಗೆ ಪ್ರತ್ಯೇಕ ಉತ್ತರವಿಲ್ಲ.

ಕೇಂದ್ರ ತೆರಿಗೆ ಆಯುಕ್ತರ ಕಚೇರಿ, ಬೆಳಗಾವಿ ಲೆಕ್ಕ ಪರಿಶೋಧನಾ ಕಮಿಷನರೇಟ್CCEBL/R/E/26/00098
ಭಾಗಶಃ ಉತ್ತರ

ಐಐಎಸ್‌ಸಿ: ಕನ್ನಡ ಮೊದಲಿರುವ ಫಲಕಗಳ 13 ಪುಟದ ಫೋಟೋ, ಕನ್ನಡ ಅನುಷ್ಠಾನ ಘಟಕಕ್ಕೆ ಜಂಟಿ ರಿಜಿಸ್ಟ್ರಾರ್ ಹೊಣೆ; ಸುತ್ತೋಲೆ, ತಪಾಸಣೆ ಮಾಹಿತಿ ಇಲ್ಲ

14 ಪುಟಗಳ ಉತ್ತರ: ಒಂದು ಪುಟದ ಉತ್ತರ ಮತ್ತು 13 ಪುಟಗಳ ಫೋಟೋಗಳು (ಆವರಣದ ದಿಕ್ಸೂಚಕಗಳು, ಸಂಸ್ಥೆಯ ಹೆಸರಿನ ಫಲಕ, ನಾಮಫಲಕಗಳು, ಸೂಚನಾಫಲಕ, ಅಂಗಡಿ ಫಲಕಗಳು).

ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರುIISBL/R/E/26/00159
ಅನುಸರಣೆಯ ಹೇಳಿಕೆ, ಪುರಾವೆ ಇಲ್ಲ

ಹುಬ್ಬಳ್ಳಿಯ ರೈಲ್ವೆ ಲೆಕ್ಕಪರಿಶೋಧನಾ ಕಚೇರಿ: ಫಲಕಗಳು ಮೂರು ಭಾಷೆಯಲ್ಲಿವೆ, ಆದರೆ ಪ್ರತ್ಯೇಕ ಸುತ್ತೋಲೆ, ತಪಾಸಣೆ ಇಲ್ಲ

ಎರಡು ಪುಟಗಳ ಪತ್ರ, ಐದು ಅಂಶಗಳ ಕೋಷ್ಟಕದೊಂದಿಗೆ. ‘ಲಗತ್ತು: ಹೇಳಿದಂತೆ’ ಎಂದಿದ್ದರೂ ಯಾವುದೇ ಲಗತ್ತು ಅಥವಾ ಫೋಟೋ ಇಲ್ಲ.

ಮಹಾನಿರ್ದೇಶಕರ ಲೆಕ್ಕಪರಿಶೋಧನೆ ಕಛೇರಿ, ರೈಲ್ವೆ, ಸಿಕಂದರಾಬಾದ್ (ಶಾಖಾ ಕಚೇರಿ ಹುಬ್ಬಳ್ಳಿ)PDASH/R/X/26/00004
ದಾಖಲೆಗಳನ್ನು ನೀಡಲಾಗಿದೆ

OMಗಿಂತ ಮುಂಚೆಯೇ 2021ರಲ್ಲಿ ತ್ರಿಭಾಷಾ ಫಲಕ ಹಾಕಿದ್ದೇವೆ ಎಂದ ಪರಿಸರ ಸಚಿವಾಲಯದ ಬೆಂಗಳೂರು ಕಚೇರಿ; ಉತ್ತರದ ದಿನವೇ ತೆಗೆದ ಫೋಟೋಗಳು

ಮೂರು ಪುಟಗಳ ಉತ್ತರ: ಎರಡು ಪುಟದ ಪತ್ರ ಮತ್ತು ಕಚೇರಿ ಫಲಕ ಹಾಗೂ ನಾಮಫಲಕಗಳ ಮೂರು ಫೋಟೋಗಳಿರುವ ಒಂದು ಪುಟ.

ಪರಿಸರ, ಅರಣ್ಯ ಮತ್ತು ಜಲವಾಯು ಪರಿವರ್ತನೆ ಮಂತ್ರಾಲಯ, ಕ್ಷೇತ್ರೀಯ ಕಾರ್ಯಾಲಯ (ದಕ್ಷಿಣ ವಲಯ), ಬೆಂಗಳೂರುROBAN/R/E/26/00036
ಅನುಸರಣೆಯ ಹೇಳಿಕೆ, ಪುರಾವೆ ಇಲ್ಲ

ಕ್ಯಾಂಪಸ್‌ನಲ್ಲಿ 77 ತ್ರಿಭಾಷಾ ಫಲಕಗಳಿವೆ ಎಂದ ಐಐಎಂಬಿ; ಆಧಾರ 1977ರ ಜ್ಞಾಪನ, ಫೋಟೋ ಅಥವಾ ತಪಾಸಣಾ ವರದಿ ಇಲ್ಲ

ಎರಡು ಪುಟಗಳ ಪ್ರಶ್ನೆವಾರು ಉತ್ತರ. ಯಾವುದೇ ದಾಖಲೆ ಅಥವಾ ಫೋಟೋ ಲಗತ್ತಿಸಿಲ್ಲ.

ಭಾರತೀಯ ವ್ಯವಸ್ಥಾಪನಾ ಸಂಸ್ಥೆ ಬೆಂಗಳೂರು (ಐಐಎಂಬಿ)IIMBL/R/E/26/00312
ಭಾಗಶಃ ಉತ್ತರ

ಕಚೇರಿ ಆದೇಶ ಇದೆ ಎಂದ ಆಂಟ್ರಿಕ್ಸ್, ಪ್ರತಿ ಕೊಡಲಿಲ್ಲ; ತಪಾಸಣೆ ನಡೆದಿಲ್ಲ ಎಂದು ಒಪ್ಪಿಗೆ

ಎರಡು ಪುಟಗಳ ಉತ್ತರ: ಜೊತೆ ಪತ್ರ ಮತ್ತು ಒಂದು ಪುಟದ ಕೋಷ್ಟಕ. ಜವಾಬ್ದಾರಿ ಹೊತ್ತ ಹುದ್ದೆಗಳನ್ನು ಹೆಸರಿಸುತ್ತದೆ, ಆದರೆ ಯಾವುದೇ ದಾಖಲೆ ಲಗತ್ತಿಸಿಲ್ಲ.

ಆಂಟ್ರಿಕ್ಸ್ ಕಾರ್ಪೊರೇಷನ್ ಲಿಮಿಟೆಡ್, ಬೆಂಗಳೂರುAXCOL/R/E/26/00006
ದಾಖಲೆಗಳನ್ನು ನೀಡಲಾಗಿದೆ

OM ಜಾರಿಯ 2022ರ ಆದೇಶ ಸರಪಳಿ ಮತ್ತು ಕನ್ನಡ-ಮೊದಲ ಫಲಕದ ಫೋಟೋ ಕೊಟ್ಟ CPWD ಮೈಸೂರು

ಪೋರ್ಟಲ್‌ನಲ್ಲಿ ಒಂದು ಸಾಲಿನ ಉತ್ತರ ಮತ್ತು ಐದು ಪುಟಗಳು: 2022ರ ಮೂರು ಹಿಂದಿ ಪತ್ರಗಳು (CPWD ಮಹಾನಿರ್ದೇಶಾಲಯ, ಬೆಂಗಳೂರು ಹೆಚ್ಚುವರಿ ಮಹಾನಿರ್ದೇಶಕರ ಕಚೇರಿ, ಮೈಸೂರು ಅಧೀಕ್ಷಕ ಎಂಜಿನಿಯರ್) ಮತ್ತು ಎರಡು ಫಲಕಗಳ ಫೋಟೋಗಳು.

ಕೇಂದ್ರ ಲೋಕೋಪಯೋಗಿ ಇಲಾಖೆ (CPWD), ಅಧೀಕ್ಷಕ ಎಂಜಿನಿಯರ್ ಕಚೇರಿ, ಮೈಸೂರುCPWDB/R/E/26/00046/3
ಅನುಸರಣೆಯ ಹೇಳಿಕೆ, ಪುರಾವೆ ಇಲ್ಲ

ಐದು ಪ್ರಶ್ನೆಗಳಿಗೆ ಒಂದೇ ವಾಕ್ಯ: OM ಪಾಲಿಸಲಾಗಿದೆ ಎಂದ ರಕ್ಷಣಾ ಸಂಪದಾ ಕಚೇರಿ

ಒಂದು ಪುಟದ ಪತ್ರ: ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಒಂದು ವಾಕ್ಯದ ಉತ್ತರ. ಯಾವುದೇ ದಾಖಲೆ ಲಗತ್ತಿಸಿಲ್ಲ.

ರಕ್ಷಣಾ ಸಂಪದಾ ಕಚೇರಿ, ಕರ್ನಾಟಕ ವೃತ್ತ, ಬೆಂಗಳೂರುDEOBL/R/E/26/00160
ಅನುಸರಣೆಯ ಹೇಳಿಕೆ, ಪುರಾವೆ ಇಲ್ಲ

ನಿಮ್ಹಾನ್ಸ್ ಕಾರ್ಯಕ್ರಮದ ಹಿಂದಿ ಮಾತ್ರದ ಬ್ಯಾನರ್ ಕುರಿತ ಪ್ರಶ್ನೆಗಳಿಗೆ ‘ಅನ್ವಯಿಸದು’ ಎಂದ ಇಪಿಎಫ್‌ಒ; ಕನ್ನಡ ಫಲಕಗಳೂ ಇದ್ದವು ಎಂಬ ಹೇಳಿಕೆ

ಎರಡು ಪುಟಗಳ ಉತ್ತರ: ಪ್ರಶ್ನೆ ಮತ್ತು ಉತ್ತರದ ಕೋಷ್ಟಕವಿರುವ ಪತ್ರ. ಯಾವುದೇ ದಾಖಲೆ ಅಥವಾ ಫೋಟೋ ಲಗತ್ತಿಸಿಲ್ಲ.

ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ, ಪ್ರಾದೇಶಿಕ ಕಚೇರಿ, ಬೆಂಗಳೂರು ಕೇಂದ್ರEPFOG/R/E/26/12017
ದಾಖಲೆಗಳು ಲಭ್ಯವಿಲ್ಲ

ಸುತ್ತೋಲೆ, ತಪಾಸಣೆ, ಜವಾಬ್ದಾರ ಅಧಿಕಾರಿ ಯಾವುದರ ಮಾಹಿತಿಯೂ ಇಲ್ಲ ಎಂದ ಐಸಿಎಂಆರ್-ನೈನ್; ಫಲಕಗಳಲ್ಲಿ ಕನ್ನಡ ‘ಕೂಡ’ ಇದೆಯಂತೆ

ಎರಡು ಪುಟಗಳ ಪತ್ರ: ಐದು ಅಂಶಗಳ ಕೋಷ್ಟಕ, ನಾಲ್ಕಕ್ಕೆ ಒಂದೇ ‘ಮಾಹಿತಿ ಲಭ್ಯವಿಲ್ಲ’ ಉತ್ತರ. ಯಾವುದೇ ದಾಖಲೆ ಅಥವಾ ಫೋಟೋ ಇಲ್ಲ.

ಐಸಿಎಂಆರ್ - ರಾಷ್ಟ್ರೀಯ ಸಾಂಕ್ರಾಮಿಕವಲ್ಲದ ರೋಗಗಳ ಸೋಂಕುಶಾಸ್ತ್ರ ಸಂಸ್ಥೆ (ICMR-NINE), ಬೆಂಗಳೂರುNCDIR/R/E/26/00024
ದಾಖಲೆಗಳನ್ನು ನೀಡಲಾಗಿದೆ

ಫಲಕಗಳು ಕನ್ನಡ, ಹಿಂದಿ, ಇಂಗ್ಲಿಷ್‌ನಲ್ಲಿರಬೇಕು ಎಂಬ 2022ರ ಆದೇಶ ಮತ್ತು ಫೋಟೋ ಕೊಟ್ಟ BSNL ಮೈಸೂರು; ತಪಾಸಣಾ ವರದಿ ಇಲ್ಲ

ಎಂಟು ಪುಟಗಳ ಉತ್ತರ: ಎರಡು ಪುಟದ ಪತ್ರ, ಕರ್ನಾಟಕ ವೃತ್ತ ಕಚೇರಿಯ 2022ರ ಸ್ಥಾಯಿ ಆದೇಶ, ಮೈಸೂರು ಕಚೇರಿಯ 06.07.2022ರ ನಿರ್ದೇಶನ ಪತ್ರ ಮತ್ತು ಎರಡು ಪುಟಗಳ ಫಲಕಗಳ ಫೋಟೋಗಳು.

ಭಾರತ್ ಸಂಚಾರ್ ನಿಗಮ್ ಲಿಮಿಟೆಡ್, ದೂರಸಂಪರ್ಕ ಮಹಾಪ್ರಬಂಧಕರ ಕಾರ್ಯಾಲಯ, ಮೈಸೂರುBSNKN/R/E/26/00071/14
ಅನುಸರಣೆಯ ಹೇಳಿಕೆ, ಪುರಾವೆ ಇಲ್ಲ

ಫಲಕಗಳಲ್ಲಿ ಕನ್ನಡ ಬಳಸಿದ್ದೇವೆ ಎಂದ ಬಿಎಸ್‌ಎನ್‌ಎಲ್ ವಿಜಯಪುರ; ಉಳಿದ ನಾಲ್ಕು ಅಂಶಗಳಿಗೆ ‘ಇಲ್ಲ’

ಒಂದು ಪುಟದ ಪತ್ರ: ಒಂದು ಸಾಲಿನ ಹೇಳಿಕೆ ಮತ್ತು ನಾಲ್ಕು ‘Nil’. ಯಾವುದೇ ದಾಖಲೆ, ಫೋಟೋ ಅಥವಾ ಅಧಿಕಾರಿಯ ಹೆಸರಿಲ್ಲ.

ಬಿಎಸ್‌ಎನ್‌ಎಲ್, ವಿಜಯಪುರ ದೂರಸಂಪರ್ಕ ಜಿಲ್ಲೆBSNKN/R/E/26/00071/16
ಅನುಸರಣೆಯ ಹೇಳಿಕೆ, ಪುರಾವೆ ಇಲ್ಲ

ಕಾರವಾರ ಬಿಎಸ್‌ಎನ್‌ಎಲ್: ತ್ರಿಭಾಷಾ ಫಲಕಗಳಿವೆ ಎಂದು ಹೇಳಿಕೆ; ಸುತ್ತೋಲೆ, ತಪಾಸಣೆ, ಹೊಣೆಗಾರ ಯಾವುದೂ ಇಲ್ಲ

ಎರಡು ಪುಟಗಳ ಪತ್ರ, ಐದು ಸಾಲಿನ ಕೋಷ್ಟಕ. ಯಾವುದೇ ದಾಖಲೆ ಅಥವಾ ಫೋಟೋ ಲಗತ್ತಿಸಿಲ್ಲ.

ಬಿಎಸ್‌ಎನ್‌ಎಲ್, ಉತ್ತರ ಕನ್ನಡ ದೂರಸಂಪರ್ಕ ಜಿಲ್ಲೆ, ಕಾರವಾರBSNKN/R/E/26/00071/6
ಭಾಗಶಃ ಉತ್ತರ

ಆರು ಫಲಕಗಳ ಫೋಟೋ ಕಳುಹಿಸಿದ BSNL ಬೀದರ್; ಸುತ್ತೋಲೆ, ತಪಾಸಣಾ ವರದಿ ಇಲ್ಲ

ಏಳು ಪುಟಗಳ ಉತ್ತರ: ಐದು ಸಾಲುಗಳ ಒಂದು ಪುಟದ ಪತ್ರ ಮತ್ತು ಬೀದರ್ ಜಿಲ್ಲೆಯ BSNL ಕಚೇರಿಗಳ ಆರು ಫಲಕಗಳ ಫೋಟೋಗಳು. ಪತ್ರ ಪ್ರಶ್ನೆವಾರು ಉತ್ತರಿಸುವುದಿಲ್ಲ.

ಭಾರತ ಸಂಚಾರ ನಿಗಮ ಲಿಮಿಟೆಡ್, ಉಪ ಮಹಾಪ್ರಬಂಧಕರ ಕಚೇರಿ, ಬೀದರ್BSNKN/R/E/26/00071/8
ದಾಖಲೆಗಳನ್ನು ನೀಡಲಾಗಿದೆ

ಬಿಎಸ್‌ಎನ್‌ಎಲ್ ಕರ್ನಾಟಕ ವೃತ್ತದಿಂದ ಸುತ್ತೋಲೆ, ಫಲಕಗಳ ಫೋಟೋ ಮತ್ತು ಮೂರು ತಪಾಸಣಾ ವರದಿ; ತ್ರಿಭಾಷಾ ಫಲಕಕ್ಕೆ ಪತ್ರ 17.06.2026ರದ್ದು

23 ಪುಟಗಳ ಉತ್ತರ: CPIO ಪತ್ರ ಮತ್ತು ನಾಲ್ಕು ಅನುಬಂಧಗಳು. ಮೂರು ರಾಜಭಾಷಾ ಸುತ್ತೋಲೆಗಳು, ವೃತ್ತ ಕಚೇರಿಯ ಫಲಕಗಳ ಫೋಟೋಗಳು, ಹುಬ್ಬಳ್ಳಿ, ಬೆಂಗಳೂರು ಮತ್ತು ತುಮಕೂರು ವ್ಯವಹಾರ ಕ್ಷೇತ್ರಗಳ ಹಿಂದಿ ತಪಾಸಣಾ ವರದಿಗಳು, ಕಡತ ಟಿಪ್ಪಣಿಗಳು ಮತ್ತು 17.06.2026ರ ಪತ್ರ.

ಭಾರತ ಸಂಚಾರ ನಿಗಮ ಲಿಮಿಟೆಡ್, ಮುಖ್ಯ ಮಹಾಪ್ರಬಂಧಕರ ಕಾರ್ಯಾಲಯ, ಕರ್ನಾಟಕ ದೂರಸಂಪರ್ಕ ವೃತ್ತBSNKN/R/E/26/00071
ಅನುಸರಣೆಯ ಹೇಳಿಕೆ, ಪುರಾವೆ ಇಲ್ಲ

ಎಲ್ಲ ಫಲಕಗಳು ಕನ್ನಡದಲ್ಲಿವೆ ಎಂದ ಮಂಗಳೂರು ಸೀಮಾ ಸುಂಕ ಕಚೇರಿ; ಸುತ್ತೋಲೆ ಹೊರಡಿಸಿಲ್ಲ, ಹೊಣೆಗಾರ ಅಧಿಕಾರಿ ಇಲ್ಲ

ಎರಡು ಪುಟಗಳ ಉತ್ತರ: ಐದೂ ಅಂಶಗಳಿಗೆ ಉತ್ತರಿಸುವ ಕೋಷ್ಟಕವಿರುವ ಪತ್ರ; ಅದೇ ಪತ್ರ ಇ-ಮೇಲ್‌ನಲ್ಲೂ ಬಂದಿದೆ. ಯಾವುದೇ ದಾಖಲೆ ಅಥವಾ ಫೋಟೋ ಲಗತ್ತಿಸಿಲ್ಲ.

ಸೀಮಾ ಸುಂಕ ಆಯುಕ್ತರ ಕಚೇರಿ, ನವ ಸೀಮಾ ಸುಂಕ ಭವನ, ಪಣಂಬೂರು, ಮಂಗಳೂರುCCUBL/R/E/26/00075/2
ದಾಖಲೆಗಳು ಲಭ್ಯವಿಲ್ಲ

ಫಲಕಗಳಲ್ಲಿ ಕನ್ನಡ ಇದೆ ಎಂದ ಕರ್ನಾಟಕ ಗ್ರಾಮೀಣ ಬ್ಯಾಂಕ್; ಉಳಿದ ನಾಲ್ಕು ಪ್ರಶ್ನೆಗಳಿಗೆ ‘ದಾಖಲೆ ಇಟ್ಟಿಲ್ಲ’

ಎರಡು ಪುಟಗಳ ಉತ್ತರ: ಐದೂ ಅಂಶಗಳಿಗೆ ಉತ್ತರಿಸುವ ಕೋಷ್ಟಕವಿರುವ ಪತ್ರ. ಯಾವುದೇ ದಾಖಲೆ ಅಥವಾ ಫೋಟೋ ಲಗತ್ತಿಸಿಲ್ಲ.

ಕರ್ನಾಟಕ ಗ್ರಾಮೀಣ ಬ್ಯಾಂಕ್KTGMB/R/E/26/00237
ದಾಖಲೆಗಳು ಲಭ್ಯವಿಲ್ಲ

ರೈಲ್ವೆ ನೇಮಕಾತಿ ಮಂಡಳಿ ಬೆಂಗಳೂರು: ಐದೂ ಪ್ರಶ್ನೆಗಳಿಗೆ ಒಂದೇ ಸಾಲು: ಕೋರಿದ ಮಾಹಿತಿ ಲಭ್ಯವಿಲ್ಲ

ಪೋರ್ಟಲ್‌ನಲ್ಲಿ ಮಾತ್ರ ಇರುವ ಒಂದು ಸಾಲಿನ ಉತ್ತರ. ಯಾವುದೇ ದಾಖಲೆ ಇಲ್ಲ.

ರೈಲ್ವೆ ನೇಮಕಾತಿ ಮಂಡಳಿ, ಬೆಂಗಳೂರುRRBBL/R/E/26/00483
ದಾಖಲೆಗಳು ಲಭ್ಯವಿಲ್ಲ

ಐದೂ ಪ್ರಶ್ನೆಗಳಿಗೆ “ಮಾಹಿತಿ ಈ ಕಚೇರಿಯಲ್ಲಿ ಲಭ್ಯವಿಲ್ಲ” ಎಂದ ನೈಋತ್ಯ ರೈಲ್ವೆ ಮೈಸೂರು ವಿಭಾಗ

ಒಂದು ಪುಟದ ಪತ್ರ: ಐದು ಪ್ರಶ್ನೆಗಳಿಗೂ ಒಂದೇ ವಾಕ್ಯದ ಉತ್ತರ. ಉತ್ತರ ಸಿಬ್ಬಂದಿ ವಿಭಾಗದ ಪರವಾಗಿ ಮಾತ್ರ.

ನೈಋತ್ಯ ರೈಲ್ವೆ, ಮೈಸೂರು ವಿಭಾಗ, ಹಿರಿಯ ವಿಭಾಗೀಯ ಸಿಬ್ಬಂದಿ ಅಧಿಕಾರಿಯ ಕಚೇರಿSWRMD/R/E/26/00185
ಭಾಗಶಃ ಉತ್ತರ

ತಪಾಸಣಾ ವರದಿಗಳು “ವಾಣಿಜ್ಯ ಗೋಪ್ಯತೆ” ಎಂದು ನಿರಾಕರಿಸಿದ ಎಲ್‌ಐಸಿ; ಎಂಟು ವಿಭಾಗಗಳ ‘ದೃಢೀಕರಣ’ವೇ ಅನುಸರಣೆಯ ಆಧಾರ

ಎರಡು ಪುಟಗಳ ಪತ್ರ. 20.04.2026ರ ಸುತ್ತೋಲೆಯ ತಪಾಸಣಾ ಅಂಶಗಳ ಪ್ರತಿ ಲಗತ್ತಿಸಲಾಗಿದೆ ಎಂದು ಹೇಳುತ್ತದೆ, ಆದರೆ ಅದು ಉತ್ತರದಲ್ಲಿಲ್ಲ.

ಭಾರತೀಯ ಜೀವ ವಿಮಾ ನಿಗಮ, ದಕ್ಷಿಣ ಮಧ್ಯ ವಲಯ ಕಚೇರಿ, ಹೈದರಾಬಾದ್LICSC/R/E/26/00088
ದಾಖಲೆಗಳನ್ನು ನೀಡಲಾಗಿದೆ

ಮಹಾಲೇಖಪಾಲರ ಕಚೇರಿ: ನಾಮಫಲಕಗಳು ಕನ್ನಡ ಸೇರಿ ತ್ರಿಭಾಷೆಯಲ್ಲಿರಬೇಕು ಎಂಬ 2024ರ ಆದೇಶ ಸೇರಿ ಮೂರು ಕಚೇರಿ ಆದೇಶಗಳನ್ನು ಕೊಟ್ಟಿದೆ

ಎಂಟು ಪುಟಗಳ ಉತ್ತರ: ಎರಡು ಪುಟದ ಪತ್ರ ಮತ್ತು ಮೂರು ಕಚೇರಿ ಆದೇಶಗಳು (07.06.2024, 06.11.2025, ಹಾಗೂ 2026ರ ‘ತಪಾಸಣಾ ಅಂಶಗಳ’ ಆದೇಶದ ಹಿಂದಿ ಮತ್ತು ಇಂಗ್ಲಿಷ್ ಪ್ರತಿಗಳು).

ಪ್ರಧಾನ ಮಹಾಲೇಖಪಾಲರ (ಲೆಕ್ಕಪರಿಶೋಧನೆ- II) ಕಛೇರಿ, ಕರ್ನಾಟಕ, ಬೆಂಗಳೂರುPAGII/R/E/26/00013
ಭಾಗಶಃ ಉತ್ತರ

ಯು.ಆರ್. ರಾವ್ ಉಪಗ್ರಹ ಕೇಂದ್ರದಿಂದ ನಾಲ್ಕು ವರ್ಷಗಳ ತಪಾಸಣಾ ಅಂಶಗಳ ಪಟ್ಟಿ; ಎಲ್ಲದರಲ್ಲೂ ಫಲಕಗಳು “ದ್ವಿಭಾಷೆ (ಅಗತ್ಯವಿದ್ದಲ್ಲಿ ತ್ರಿಭಾಷೆ)”

19 ಪುಟಗಳು: CPIO ಪತ್ರ, ರಾಜಭಾಷಾ ಉಪನಿರ್ದೇಶಕರ 18.08.2026ರ ಟಿಪ್ಪಣಿ, ಮತ್ತು 2022, 2023, 2024, 2025ರ ತಪಾಸಣಾ ಅಂಶಗಳ ಕಚೇರಿ ಜ್ಞಾಪನಗಳು ಹಾಗೂ 30.04.2024ರ ಸುತ್ತೋಲೆ.

ಯು.ಆರ್. ರಾವ್ ಉಪಗ್ರಹ ಕೇಂದ್ರ, ಬೆಂಗಳೂರುURRSC/R/E/26/00052
ದಾಖಲೆಗಳು ಲಭ್ಯವಿಲ್ಲ

ತ್ರಿಭಾಷಾ ಫಲಕಗಳಿವೆ ಎಂದ BSNL ಮಂಗಳೂರು; ಸುತ್ತೋಲೆ, ತಪಾಸಣೆ, ಹೊಣೆಗಾರ ಅಧಿಕಾರಿ ಯಾವುದೂ ದಾಖಲೆಯಲ್ಲಿಲ್ಲ

ಎರಡು ಪುಟಗಳ ಉತ್ತರ: ಐದೂ ಅಂಶಗಳಿಗೆ ಉತ್ತರಿಸುವ ಕೋಷ್ಟಕವಿರುವ ಪತ್ರ. ಯಾವುದೇ ದಾಖಲೆ ಲಗತ್ತಿಸಿಲ್ಲ.

ಭಾರತ ಸಂಚಾರ್ ನಿಗಮ್ ಲಿಮಿಟೆಡ್, ದಕ್ಷಿಣ ಕನ್ನಡ ದೂರಸಂಪರ್ಕ ಜಿಲ್ಲೆ, ಮಂಗಳೂರುBSNKN/R/E/26/00071/12
ವರ್ಗಾವಣೆ, ಉತ್ತರವಿಲ್ಲ

ಬಳ್ಳಾರಿ ಬಿಎಸ್‌ಎನ್‌ಎಲ್: ಎಲ್ಲವೂ ಕರ್ನಾಟಕ ವೃತ್ತ ಕಚೇರಿಯ ವ್ಯಾಪ್ತಿ, “ಸೂಚನೆಗಳನ್ನು ಪಾಲಿಸಲಾಗುತ್ತಿದೆ”

ಪೋರ್ಟಲ್‌ನಲ್ಲಿ ಮಾತ್ರ ಇರುವ ಪಠ್ಯ ಉತ್ತರ: ಐದೂ ಪ್ರಶ್ನೆಗಳನ್ನು ಪುನರಾವರ್ತಿಸಿ, ಪ್ರತಿಯೊಂದಕ್ಕೂ ವೃತ್ತ ಕಚೇರಿಯತ್ತ ಬೆರಳು ತೋರಿಸುತ್ತದೆ. ಯಾವುದೇ ದಾಖಲೆ ಇಲ್ಲ.

ಬಿಎಸ್‌ಎನ್‌ಎಲ್, ಬಳ್ಳಾರಿ SSABSNKN/R/E/26/00071/19
ದಾಖಲೆಗಳನ್ನು ನೀಡಲಾಗಿದೆ

ಕನ್ನಡ ಫಲಕಗಳ ಫೋಟೋ, 2025ರ ಸುತ್ತೋಲೆ ಮತ್ತು ತಪಾಸಣಾ ವರದಿ ಕಳುಹಿಸಿದ BSNL ಹುಬ್ಬಳ್ಳಿ ವ್ಯಾಪಾರ ಕ್ಷೇತ್ರ

13 ಪುಟಗಳ ಉತ್ತರ: ಸಹಾಯಕ ಮಹಾಪ್ರಬಂಧಕರು ಉಪ ವಿಭಾಗೀಯ ಎಂಜಿನಿಯರ್‌ಗೆ ಬರೆದ 12.08.2026ರ ಒಂದು ಪುಟದ ಆಂತರಿಕ ಪತ್ರ, 30.04.2025ರ ಸುತ್ತೋಲೆ (ಅನುಬಂಧ I), ಕಟ್ಟಡ, ಸೂಚನಾಫಲಕ ಮತ್ತು ನಾಮಫಲಕಗಳ ಫೋಟೋಗಳು (ಅನುಬಂಧ II), ಹಾಗೂ 24.06.2025ರ ರಾಜಭಾಷಾ ತಪಾಸಣಾ ವರದಿ (ಅನುಬಂಧ III). ಅರ್ಜಿದಾರರಿಗೆ ಉದ್ದೇಶಿಸಿದ ಜೊತೆ ಪತ್ರ ಇಲ್ಲ.

ಭಾರತ ಸಂಚಾರ ನಿಗಮ ಲಿಮಿಟೆಡ್, ಮಹಾ ಪ್ರಬಂಧಕರು ದೂರಸಂಪರ್ಕ ಕಛೇರಿ, ಹುಬ್ಬಳ್ಳಿ ವ್ಯಾಪಾರ ಕ್ಷೇತ್ರBSNKN/R/E/26/00071/15
ಅನುಸರಣೆಯ ಹೇಳಿಕೆ, ಪುರಾವೆ ಇಲ್ಲ

ಕನ್ನಡ ಫಲಕ ಬಳಸಿದ್ದೇವೆ ಎಂದ ಬಿಎಸ್‌ಎನ್‌ಎಲ್ ಬೆಳಗಾವಿ; ಉಳಿದ ನಾಲ್ಕು ಪ್ರಶ್ನೆಗಳಿಗೆ “Nil”

ಒಂದು ಪುಟದ ಪತ್ರ: ಐದು ಪ್ರಶ್ನೆಗಳನ್ನು ಪುನರುಚ್ಚರಿಸಿ, ಒಂದು ಸಾಲಿನ ಹೇಳಿಕೆ ಮತ್ತು ನಾಲ್ಕು “Nil” ಉತ್ತರಗಳನ್ನು ಕೊಡುತ್ತದೆ. ಯಾವುದೇ ದಾಖಲೆ ಅಥವಾ ಫೋಟೋ ಇಲ್ಲ.

ಬಿಎಸ್‌ಎನ್‌ಎಲ್, ಮಹಾಪ್ರಬಂಧಕರ (ದೂರಸಂಪರ್ಕ) ಕಚೇರಿ, ಬೆಳಗಾವಿBSNKN/R/E/26/00071/3
ಭಾಗಶಃ ಉತ್ತರ

ಎಲ್ಲಾ ಕ್ಷೇಮ ಕೇಂದ್ರಗಳ ಫಲಕಗಳು ತ್ರಿಭಾಷೆಯಲ್ಲಿವೆ ಎಂದ CGHS ಬೆಂಗಳೂರು; ಕಳುಹಿಸಿದ ನಾಲ್ಕು ಫೋಟೋಗಳಲ್ಲಿ ಯಾವುದೂ ಕ್ಷೇಮ ಕೇಂದ್ರದ್ದು ಎಂದು ಗುರುತಿಸಿಲ್ಲ

ಪೋರ್ಟಲ್‌ನಲ್ಲಿ ಒಂದು ಪ್ಯಾರಾದ ಉತ್ತರ ಮತ್ತು ನಾಲ್ಕು ಫೋಟೋಗಳಿರುವ ಒಂದು ಪುಟ: ಕಚೇರಿ ಫಲಕ, ಜಾಗೃತ (ವಿಜಿಲೆನ್ಸ್) ಸೂಚನಾಫಲಕ, ಒಬ್ಬ ಅಧಿಕಾರಿಯ ನಾಮಫಲಕ ಮತ್ತು ‘ಉಗ್ರಾಣ’ ಫಲಕ.

ಕೇಂದ್ರ ಸರ್ಕಾರ ಆರೋಗ್ಯ ಯೋಜನೆ (CGHS), ಬೆಂಗಳೂರುCGHSU/R/E/26/00053
ಅನುಸರಣೆಯ ಹೇಳಿಕೆ, ಪುರಾವೆ ಇಲ್ಲ

ಫಲಕಗಳಲ್ಲಿ ಕನ್ನಡ ಮೊದಲು ಎಂದ CPWD ಬೆಂಗಳೂರು; ‘OM’ಗಳೆಂದು ಕಳುಹಿಸಿದ್ದು ಹಿಂದಿ ಸಾಹಿತ್ಯ ಕುರಿತ 2017-18ರ ಪತ್ರಗಳು

ಐದು ಪುಟಗಳ ಉತ್ತರ: ಒಂದು ಪುಟದ ಪತ್ರ ಮತ್ತು 2017-18ರ ಮೂರು CPWD ಪತ್ರಗಳ ‘ಅನುವಾದಿತ ಪ್ರತಿ’ಗಳು ಹಾಗೂ ಒಂದು ಟಿಪ್ಪಣಿ ಪುಟ. ಫಲಕಗಳ ಫೋಟೋ ಇಲ್ಲ.

ಕೇಂದ್ರ ಲೋಕೋಪಯೋಗಿ ಇಲಾಖೆ (CPWD), ಮುಖ್ಯ ಎಂಜಿನಿಯರ್ ಕಚೇರಿ, ಬೆಂಗಳೂರುCPWDB/R/E/26/00046
ಭಾಗಶಃ ಉತ್ತರ

OM ಬಂದು ಮೂರು ವರ್ಷದ ನಂತರ, 2025ರಲ್ಲಿ ತ್ರಿಭಾಷಾ ಫಲಕದ ಸೂಚನೆ ಕಳುಹಿಸಿದ ಐಟಿಎಟಿ; ತಪಾಸಣೆಯ ಮಾಹಿತಿ ಇಲ್ಲ

ಎರಡು ಪುಟಗಳು: ಐದು ಅಂಶಗಳ ಉತ್ತರ ಕೋಷ್ಟಕ ಮತ್ತು ಐಟಿಎಟಿ ಮುಂಬೈ ಮುಖ್ಯಾಲಯದ 09.05.2025ರ ಹಿಂದಿ ಅರೆ-ಸರ್ಕಾರಿ ಪತ್ರ. ಫೋಟೋ ಇಲ್ಲ.

ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ, ಬೆಂಗಳೂರು ಪೀಠಗಳುITATB/R/E/26/00004
ದಾಖಲೆಗಳನ್ನು ನೀಡಲಾಗಿದೆ

ಕನ್ನಡ ನಾಮಫಲಕಗಳ ಫೋಟೋ, 2025ರ ಸುತ್ತೋಲೆ ಮತ್ತು ತಪಾಸಣಾ ವರದಿ ಕೊಟ್ಟ BSNL ಹುಬ್ಬಳ್ಳಿ

14 ಪುಟಗಳ ಉತ್ತರ: ಎರಡು ಪುಟದ ಪತ್ರ, 30.04.2025ರ ಸುತ್ತೋಲೆ (ಅನುಬಂಧ I), ಕಟ್ಟಡ, ನಾಮಫಲಕ, ವಿಭಾಗ ಫಲಕ ಮತ್ತು ಎರಡು ಸಾರ್ವಜನಿಕ ಸೂಚನಾಫಲಕಗಳ ಫೋಟೋಗಳು (ಅನುಬಂಧ II), ಹಾಗೂ 24.06.2025ರ ರಾಜಭಾಷಾ ತಪಾಸಣಾ ವರದಿ (ಅನುಬಂಧ III).

ಭಾರತ ಸಂಚಾರ ನಿಗಮ ಲಿಮಿಟೆಡ್, ಧಾರವಾಡ ದೂರಸಂಪರ್ಕ ಜಿಲ್ಲೆ, ಹುಬ್ಬಳ್ಳಿBSNKN/R/E/26/00071/13
ದಾಖಲೆಗಳನ್ನು ನೀಡಲಾಗಿದೆ

ಕನ್ನಡ ಮೊದಲಿರುವ ಕಚೇರಿ ಫಲಕ, ನಾಮಫಲಕದ ಫೋಟೋ ಕೊಟ್ಟ ಬೆಂಗಳೂರು ವಿಮಾನ ನಿಲ್ದಾಣ ಸೀಮಾ ಸುಂಕ ಕಚೇರಿ; ಜೊತೆಗಿನ ಆದೇಶಗಳು ಹಿಂದಿ ಕುರಿತು

71 ಪುಟಗಳ ಉತ್ತರ: ಒಂದು ಪುಟದ ಪತ್ರ, 16.06.2026ರ ರಾಜಭಾಷಾ ‘ಜಾಂಚ್ ಬಿಂದು’ ಆದೇಶ, 2026-27ರ ಗುರಿಗಳು, ರಾಜಭಾಷಾ ಇಲಾಖೆಯ 2026-27ರ ವಾರ್ಷಿಕ ಕಾರ್ಯಕ್ರಮದ ಪೂರ್ಣ ಪ್ರತಿ (58 ಪುಟ), 01.12.2025ರ ಹಿಂದಿ ಅನುಸರಣಾ ವರದಿ ಮತ್ತು ಎರಡು ಫೋಟೋಗಳು. ಅದೇ ಉತ್ತರ ಎರಡು ಪ್ರತಿಗಳಲ್ಲಿ ಬಂದಿದೆ.

ಸೀಮಾ ಸುಂಕ ಪ್ರಧಾನ ಆಯುಕ್ತರವರ ಕಾರ್ಯಾಲಯ, ವಿಮಾನ ನಿಲ್ದಾಣ ಹಾಗೂ ವಾಯು ಸರಕು ಸಂಕೀರ್ಣ, ಬೆಂಗಳೂರುCCUBL/R/E/26/00075
ದಾಖಲೆಗಳನ್ನು ನೀಡಲಾಗಿದೆ

2022ರ OM ಜಾರಿಯ ದಾಖಲೆ ಕೇಳಿದರೆ 2012 ಮತ್ತು 2016ರ ಪತ್ರಗಳನ್ನು ಕೊಟ್ಟ HAL

19 ಪುಟಗಳ ಉತ್ತರ, ಪೋರ್ಟಲ್ ಮತ್ತು ಇ-ಮೇಲ್ ಎರಡರಲ್ಲೂ ಬಂದಿದೆ: ಎರಡು ಪುಟದ ಪತ್ರ, 2012ರ HAL ಸುತ್ತೋಲೆ ಮತ್ತು ಅದರೊಂದಿಗಿನ ರಕ್ಷಣಾ ಸಚಿವಾಲಯ ಹಾಗೂ ಗೃಹ ಸಚಿವಾಲಯದ ಪತ್ರಗಳು (ಮೂರು ಪುಟಗಳು ಎರಡು ಬಾರಿ), ಆಗಸ್ಟ್ 2012ರಲ್ಲಿ ರಕ್ಷಣಾ ಸಚಿವಾಲಯಕ್ಕೆ ಕಳುಹಿಸಿದ ಅಂಶವಾರು ವರದಿ, ಮತ್ತು ರಾಜಭಾಷಾ ಅನುಷ್ಠಾನದ ಬಗ್ಗೆ ಹಿಂದಿ ಹಾಗೂ ಇಂಗ್ಲಿಷ್‌ನಲ್ಲಿರುವ 2016ರ ಸುತ್ತೋಲೆ.

ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್, ಪ್ರಧಾನ ಕಛೇರಿHALTD/R/E/26/00154
ದಾಖಲೆಗಳನ್ನು ನೀಡಲಾಗಿದೆ

ಆದಾಯ ತೆರಿಗೆ ಇಲಾಖೆ: ಕರ್ನಾಟಕದಲ್ಲಿ OM ಕುರಿತ ಸುತ್ತೋಲೆ ಹೊರಡಿಸಿದ್ದು 2025ರ ಏಪ್ರಿಲ್‌ನಲ್ಲಿ, ದೆಹಲಿಯಿಂದ ಗಡುವು ಬಂದ ಮೇಲೆ

21 ಪುಟಗಳ ಉತ್ತರ: ಎರಡು ಪುಟದ ಆದೇಶ (ಅದರ ಎರಡನೇ ಪ್ರತಿಯೂ ಇದೆ) ಮತ್ತು 17 ಪುಟಗಳ ‘ಅನುಬಂಧ A’. ಅನುಬಂಧದಲ್ಲಿ ಕಚೇರಿಯ ಸುತ್ತೋಲೆಗಳು, ಕಂದಾಯ ಇಲಾಖೆ ಮತ್ತು ರಾಜಭಾಷಾ ಇಲಾಖೆಯ ಪತ್ರಗಳು, ಹಾಗೂ ಕಟ್ಟಡದ ಅಧಿಕಾರಿಗಳ ಪಟ್ಟಿ ಫಲಕಗಳ ಫೋಟೋಕಾಪಿಗಳಿವೆ.

ಪ್ರಧಾನ ಮುಖ್ಯ ಆದಾಯ ತೆರಿಗೆ ಆಯುಕ್ತರ ಕಛೇರಿ, ಕರ್ನಾಟಕ ಮತ್ತು ಗೋವಾ ವಲಯ, ಬೆಂಗಳೂರುCCITB/R/E/26/00113
ಭಾಗಶಃ ಉತ್ತರ

ಫಲಕಗಳು ಕನ್ನಡ, ಹಿಂದಿ, ಇಂಗ್ಲಿಷ್‌ನಲ್ಲಿವೆ ಎಂದ ಸಿಬ್ಬಂದಿ ಆಯ್ಕೆ ಆಯೋಗ; ಉಳಿದ ನಾಲ್ಕು ಪ್ರಶ್ನೆ ರಾಜಭಾಷಾ ಇಲಾಖೆಗೆ ವರ್ಗ

ಪೋರ್ಟಲ್‌ನಲ್ಲಿ ಎರಡು ವಾಕ್ಯಗಳ ಷರಾ ಮಾತ್ರ; ಯಾವುದೇ ಪತ್ರ, ಫೋಟೋ ಅಥವಾ ದಾಖಲೆ ಲಗತ್ತಿಸಿಲ್ಲ.

ಸಿಬ್ಬಂದಿ ಆಯ್ಕೆ ಆಯೋಗ (ಕರ್ನಾಟಕ ಕೇರಳ ಪ್ರದೇಶ), ಬೆಂಗಳೂರುSSCKK/R/E/26/00182
ಅನುಸರಣೆಯ ಹೇಳಿಕೆ, ಪುರಾವೆ ಇಲ್ಲ

ಇಸ್ಟ್ರ್ಯಾಕ್: ನಾಲ್ಕು ಪ್ರಶ್ನೆಗಳಿಗೆ “Nil”, ಆದರೂ “ಅನುಸರಣೆ ಖಚಿತಪಡಿಸಲಾಗಿದೆ” ಎಂಬ ಹೇಳಿಕೆ

ಎರಡು ಪುಟಗಳ ಉತ್ತರ: CPIOರ ಜೊತೆ ಪತ್ರ ಮತ್ತು ರಾಜಭಾಷಾ ಸಹಾಯಕ ನಿರ್ದೇಶಕರ ಒಂದು ಪುಟದ ಕೋಷ್ಟಕ. ಯಾವುದೇ ದಾಖಲೆ ಅಥವಾ ಫೋಟೋ ಇಲ್ಲ.

ಇಸ್ರೋ ಟೆಲಿಮೆಟ್ರಿ, ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್ (ಇಸ್ಟ್ರ್ಯಾಕ್), ಬೆಂಗಳೂರುITTCN/R/E/26/00028
ಮಾಹಿತಿ ನಿರಾಕರಣೆ

ಎಸ್‌ಬಿಐ: ಕನ್ನಡಕ್ಕೆ “ಕಟ್ಟುನಿಟ್ಟಿನ ಸೂಚನೆ” ಕೊಟ್ಟಿದ್ದೇವೆ, ಆದರೆ ಸುತ್ತೋಲೆ, ತಪಾಸಣಾ ವರದಿಗಳು “ಗೋಪ್ಯ”

ಎರಡು ಪುಟಗಳ ಪತ್ರ, ಐದು ಸಾಲಿನ ಕೋಷ್ಟಕ. ಸುತ್ತೋಲೆ, ತಪಾಸಣಾ ವರದಿ ಮತ್ತು ಪತ್ರವ್ಯವಹಾರಗಳನ್ನು “ಆಂತರಿಕ ಬಳಕೆಗೆ, ಗೋಪ್ಯ” ಎಂದು ನಿರಾಕರಿಸುತ್ತದೆ; ಯಾವುದೇ ದಾಖಲೆ ಇಲ್ಲ.

ಭಾರತೀಯ ಸ್ಟೇಟ್ ಬ್ಯಾಂಕ್, ಬೆಂಗಳೂರು ವೃತ್ತ (ಸ್ಥಳೀಯ ಪ್ರಧಾನ ಕಛೇರಿ)SBIBC/R/E/26/00293
ದಾಖಲೆಗಳನ್ನು ನೀಡಲಾಗಿದೆ

ಕನ್ನಡ ಫಲಕಗಳ ಫೋಟೋ ಕೊಟ್ಟ FCI ಕರ್ನಾಟಕ

19 ಪುಟಗಳ ಉತ್ತರ: ಎರಡು ಪುಟದ ಪತ್ರ, ಮೂರು ಅನುಬಂಧಗಳು, ಆಹಾರ ಸಚಿವಾಲಯ ಮತ್ತು ರಾಜಭಾಷಾ ಇಲಾಖೆಯ ಜ್ಞಾಪನಗಳು, ಹಾಗೂ ಬೆಂಗಳೂರಿನ ಪ್ರಾದೇಶಿಕ ಕಚೇರಿಯ ಆರು ಫೋಟೋಗಳು.

ಭಾರತೀಯ ಆಹಾರ ನಿಗಮ, ಕರ್ನಾಟಕ ಪ್ರಾದೇಶಿಕ ಕಚೇರಿFCIKA/R/E/26/00037/1
ಭಾಗಶಃ ಉತ್ತರ

‘ತಪಾಸಣಾ ವರದಿ’ ಎಂದು 2022ರ ಹಿಂದಿ ಬಳಕೆಯ ತಪಾಸಣೆ ಕಳುಹಿಸಿದ ಎಲ್‌ಪಿಎಸ್‌ಸಿ; ಅದರಲ್ಲಿ ಕನ್ನಡ ಫಲಕಗಳ ಪ್ರಸ್ತಾಪವಿಲ್ಲ

ನಾಲ್ಕು ಪುಟಗಳ ಉತ್ತರ: ಎರಡು ಪುಟಗಳ ಪತ್ರ, 15.11.2022ರ ತಪಾಸಣೆಯ ಪ್ರೇಕ್ಷಣೆ/ಸಲಹೆಗಳು (ಅನುಬಂಧ A) ಮತ್ತು ಕೈಗೊಂಡ ಕ್ರಮದ ವರದಿ (ಅನುಬಂಧ B), ಎರಡೂ ಹಿಂದಿಯಲ್ಲಿ.

ದ್ರವ ನೋದನ ವ್ಯವಸ್ಥೆಗಳ ಕೇಂದ್ರ (ಎಲ್‌ಪಿಎಸ್‌ಸಿ), ಇಸ್ರೋ, ಬೆಂಗಳೂರುLPSCV/R/E/26/00054
ಅನುಸರಣೆಯ ಹೇಳಿಕೆ, ಪುರಾವೆ ಇಲ್ಲ

"ಎಲ್ಲ ಫಲಕಗಳೂ ಅನುಸರಣೆಯಲ್ಲಿವೆ": ಒಂದೇ ಸಾಲು, ಒಂದೂ ದಾಖಲೆ ಇಲ್ಲ

ಮೂರು ಪ್ರಶ್ನೆಗಳಿಗೆ ಒಂದೇ ಟಿಪ್ಪಣಿ ಬರೆದು ಅರ್ಜಿಯನ್ನು ಹಿಂದಿರುಗಿಸಲಾಗಿದೆ; 1 ಮತ್ತು 5ನೇ ಪ್ರಶ್ನೆಗಳಿಗೆ ಉತ್ತರವೇ ಇಲ್ಲ.

ಪ್ರಾಣಿಗಳ ಸಂಪರ್ಕತಡೆ ಮತ್ತು ಪ್ರಮಾಣೀಕರಣ, ಬೆಂಗಳೂರುAQCSB/R/E/26/00013
ವರ್ಗಾವಣೆ, ಉತ್ತರವಿಲ್ಲ

ಮಾಹಿತಿ ಇಲ್ಲ, ಕರ್ನಾಟಕ ವೃತ್ತದ CPIO ಕೊಡುತ್ತಾರೆ ಎಂದ BSNL ಮುಖ್ಯ ವಾಸ್ತುಶಿಲ್ಪಿ ಕಚೇರಿ

ಪೋರ್ಟಲ್‌ನಲ್ಲಿ ಒಂದು ವಾಕ್ಯದ ಷರಾ ಮಾತ್ರ; ಯಾವುದೇ ಪತ್ರ ಅಥವಾ ದಾಖಲೆ ಲಗತ್ತಿಸಿಲ್ಲ.

ಬಿಎಸ್‌ಎನ್‌ಎಲ್, ಮುಖ್ಯ ವಾಸ್ತುಶಿಲ್ಪಿಯವರ ಕಚೇರಿ, ಬೆಂಗಳೂರುBSNKN/R/E/26/00071/22
ಉತ್ತರವಿಲ್ಲ

ಉತ್ತರವನ್ನು ಅರ್ಜಿಯಲ್ಲಿನ ವಿಳಾಸಕ್ಕೆ ಕಳುಹಿಸಿದ್ದೇವೆ ಎಂದ ಸಾಲ ವಸೂಲಾತಿ ನ್ಯಾಯಮಂಡಳಿ; ಪೋರ್ಟಲ್‌ನಲ್ಲಿ ಉತ್ತರವಿಲ್ಲ

ಪೋರ್ಟಲ್‌ನಲ್ಲಿ ಒಂದು ಸಾಲಿನ ಟಿಪ್ಪಣಿ ಮಾತ್ರ; ಅರ್ಜಿಯನ್ನು “ಅರ್ಜಿದಾರರಿಗೆ ಹಿಂದಿರುಗಿಸಲಾಗಿದೆ” ಎಂದು ಮುಕ್ತಾಯಗೊಳಿಸಲಾಗಿದೆ.

ಸಾಲ ವಸೂಲಾತಿ ನ್ಯಾಯಮಂಡಳಿ, ಬೆಂಗಳೂರುDRTBL/R/E/26/00010
ಮಾಹಿತಿ ನಿರಾಕರಣೆ

OM ಪಾಲಿಸಿದ್ದೇವೆ, ಉಳಿದ ಪ್ರಶ್ನೆಗಳು ‘ಮಾಹಿತಿ’ ಅಲ್ಲ ಎಂದ ಬೆಂಗಳೂರಿನ ಆಫೀಶಿಯಲ್ ಲಿಕ್ವಿಡೇಟರ್

ಪೋರ್ಟಲ್‌ನಲ್ಲಿ ಎರಡು ವಾಕ್ಯಗಳ ಷರಾ ಮಾತ್ರ; ಯಾವುದೇ ಪತ್ರ ಅಥವಾ ದಾಖಲೆ ಲಗತ್ತಿಸಿಲ್ಲ.

ಅಧಿಕೃತ ಸಮಾಪನಾಧಿಕಾರಿ (ಆಫೀಶಿಯಲ್ ಲಿಕ್ವಿಡೇಟರ್), ಬೆಂಗಳೂರುOFLQK/R/E/26/00005
ದಾಖಲೆಗಳು ಲಭ್ಯವಿಲ್ಲ

OM ಜಾರಿಯ ಯಾವುದೇ ದಾಖಲೆ ತನ್ನಲ್ಲಿಲ್ಲ ಎಂದ CPWD ಬೆಂಗಳೂರು ಪ್ರದೇಶ; ವರ್ಗಾವಣೆಯನ್ನೂ ನಿರಾಕರಣೆ

ಪೋರ್ಟಲ್‌ನಲ್ಲಿ ಬರೆದ ಆರು ಪ್ಯಾರಾದ ಉತ್ತರ; ಯಾವುದೇ ಪತ್ರ ಅಥವಾ ದಾಖಲೆ ಲಗತ್ತಿಸಿಲ್ಲ.

ಕೇಂದ್ರ ಲೋಕೋಪಯೋಗಿ ಇಲಾಖೆ (CPWD), ಬೆಂಗಳೂರು ಪ್ರದೇಶCPWDB/R/E/26/00046/1
ಅನುಸರಣೆಯ ಹೇಳಿಕೆ, ಪುರಾವೆ ಇಲ್ಲ

ಫಲಕಗಳು ತ್ರಿಭಾಷೆಯಲ್ಲಿವೆ, OM ಪಾಲಿಸುತ್ತಿದ್ದೇವೆ ಎಂದು ಹೇಳಿ ಅರ್ಜಿಯನ್ನೇ ‘ಹಿಂದಿರುಗಿಸಿದ’ ಗುಣಮಟ್ಟ ನಿಯಂತ್ರಣ ಘಟಕ

ಪೋರ್ಟಲ್‌ನಲ್ಲಿ ಎರಡು ವಾಕ್ಯದ ಹೇಳಿಕೆ; ಸ್ಥಿತಿ ‘ಅರ್ಜಿದಾರರಿಗೆ ಹಿಂದಿರುಗಿಸಲಾಗಿದೆ’. ಯಾವುದೇ ದಾಖಲೆ ಇಲ್ಲ.

ಗುಣಮಟ್ಟ ನಿಯಂತ್ರಣ ಘಟಕ (ಕ್ವಾಲಿಟಿ ಕಂಟ್ರೋಲ್ ಸೆಲ್), ಬೆಂಗಳೂರುQCCBN/R/E/26/00003
ಅನುಸರಣೆಯ ಹೇಳಿಕೆ, ಪುರಾವೆ ಇಲ್ಲ

2026ರ ಜನವರಿಯ ಸೂಚನೆ ಕೊಟ್ಟ BEL; ಕರ್ನಾಟಕದ ಎಲ್ಲ ಫಲಕಗಳೂ ತ್ರಿಭಾಷೆಯಲ್ಲಿವೆ ಎಂಬುದಕ್ಕೆ ಪುರಾವೆ ಇಲ್ಲ

ಮೂರು ಪುಟಗಳ ಉತ್ತರ: ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಎರಡು ಪುಟದ ಪತ್ರ, ಹಾಗೂ 16.01.2026ರ ಒಂದು ಪುಟದ ಕಾರ್ಪೊರೇಟ್ ಸುತ್ತೋಲೆ.

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್, ಬೆಂಗಳೂರುBELBL/R/E/26/00561
ದಾಖಲೆಗಳನ್ನು ನೀಡಲಾಗಿದೆ

ಕನ್ನಡ ಫಲಕಗಳ ಫೋಟೋ ಕಳುಹಿಸಿದ ಬಿಎಸ್‌ಎನ್‌ಎಲ್ ಚಿಕ್ಕಮಗಳೂರು; ಮಾಸಿಕ ತಪಾಸಣೆ ಎಂದರೂ ವರದಿ ಇಲ್ಲ

ಮೂರು ಪುಟಗಳ ಉತ್ತರ: ದಿನಾಂಕ ಮತ್ತು ಸಂಖ್ಯೆ ಇಲ್ಲದ ಒಂದು ಪುಟದ ಪತ್ರ ಮತ್ತು ಚಿಕ್ಕಮಗಳೂರಿನ ಫಲಕ, ಪೋಸ್ಟರ್‌ಗಳ ಐದು ಫೋಟೋಗಳು.

ಭಾರತ ಸಂಚಾರ ನಿಗಮ ನಿಯಮಿತ, ಉಪ ಮಹಾಪ್ರಬಂಧಕರ ಕಚೇರಿ, ಚಿಕ್ಕಮಗಳೂರುBSNKN/R/E/26/00071/5
ದಾಖಲೆಗಳು ಲಭ್ಯವಿಲ್ಲ

ಐದೂ ಪ್ರಶ್ನೆಗಳಿಗೆ ‘ಮಾಹಿತಿ ಲಭ್ಯವಿಲ್ಲ’ ಎಂದ CPWD ಹುಬ್ಬಳ್ಳಿ

ಎರಡು ಪುಟಗಳ ಪತ್ರ, ಪೋರ್ಟಲ್ ಮತ್ತು ಇ-ಮೇಲ್ ಎರಡರಲ್ಲೂ ಬಂದಿದೆ: ಐದೂ ಅಂಶಗಳಿಗೆ ಒಂದೇ ಸಾಲಿನ ಉತ್ತರ, ಮೇಲ್ಮನವಿ ಪ್ರಾಧಿಕಾರದ ವಿವರ; ಯಾವುದೇ ಲಗತ್ತಿಲ್ಲ.

ಕೇಂದ್ರೀಯ ಲೋಕೋಪಯೋಗಿ ಇಲಾಖೆ, ಕಾರ್ಯಪಾಲಕ ಅಭಿಯಂತರ ಕಾರ್ಯಾಲಯ, ಹುಬ್ಬಳ್ಳಿ ವಿಭಾಗCPWDB/R/E/26/00046/2
ದಾಖಲೆಗಳನ್ನು ನೀಡಲಾಗಿದೆ

OM ಪಾಲಿಸಲಾಗಿದೆ ಎಂದು ಕನ್ನಡ-ಮೊದಲ ಫಲಕ, ನಾಮಫಲಕ, ಪತ್ರಶೀರ್ಷಿಕೆಗಳ ಉದಾಹರಣೆ ಕೊಟ್ಟ CPWD ಬೆಂಗಳೂರು ಕಚೇರಿ

ಪೋರ್ಟಲ್‌ನಲ್ಲಿ ಎರಡು ಸಾಲಿನ ಉತ್ತರ ಮತ್ತು ಒಂಬತ್ತು ಪುಟಗಳ ‘ಮಾದರಿ ಉದಾಹರಣೆಗಳು’: ಕಚೇರಿ ಫಲಕ, ಐದು ನಾಮಫಲಕಗಳು, ಜಾಗೃತ ಸೂಚನಾಫಲಕಗಳು ಮತ್ತು ಎರಡು ಖಾಲಿ ಪತ್ರಶೀರ್ಷಿಕೆಗಳು.

ಕೇಂದ್ರ ಲೋಕೋಪಯೋಗಿ ಇಲಾಖೆ, ಬೆಂಗಳೂರಿನ ಅಧೀಕ್ಷಕ ಮತ್ತು ಯೋಜನಾ ನಿರ್ದೇಶಕರ ಕಚೇರಿCPWDB/R/E/26/00046/4
ದಾಖಲೆಗಳನ್ನು ನೀಡಲಾಗಿದೆ

ಕನ್ನಡ ಮೊದಲು ಎಂಬ 2022ರ ಸುರಕ್ಷಾ ಫಲಕ ಆದೇಶ ಕಳುಹಿಸಿದ ಎಂಆರ್‌ಪಿಎಲ್; ಎಲ್ಲ ಕಚೇರಿಗಳ ಸುತ್ತೋಲೆ ಬಂದದ್ದು ಅರ್ಜಿಯ ನಂತರ, 04.08.2026ರಂದು

ಐದು ಪುಟಗಳ ಉತ್ತರ: CPIO ಪತ್ರ, ಮಾನವ ಸಂಪನ್ಮೂಲ ವಿಭಾಗದ ಕೋಷ್ಟಕ ರೂಪದ ಉತ್ತರ, 21.04.2022 ಮತ್ತು 04.08.2026ರ ಎರಡು ಆಂತರಿಕ ಜ್ಞಾಪನಗಳು ಹಾಗೂ ಸಚಿವಾಲಯಕ್ಕೆ ಕಳುಹಿಸಿದ 26.11.2024ರ ಹಿಂದಿ ಅನುಸರಣಾ ವರದಿ.

ಮಂಗಳೂರು ರಿಫೈನರಿ ಆಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್‌ಪಿಎಲ್), ಮಂಗಳೂರುMRPLT/R/E/26/00046
ಅನುಸರಣೆಯ ಹೇಳಿಕೆ, ಪುರಾವೆ ಇಲ್ಲ

KAPL: ‘ಸಾಧ್ಯವಾದಷ್ಟು’ ಕನ್ನಡ ಫಲಕ ಹಾಕಿದ್ದೇವೆ; ತಪಾಸಣೆ, ತಿದ್ದುಪಡಿಯ ದಾಖಲೆ ಇಲ್ಲ

ಪೋರ್ಟಲ್‌ನಲ್ಲಿ ಒಂದು ಟಿಪ್ಪಣಿಯ ಉತ್ತರ, ಅರ್ಜಿಯನ್ನು ‘ಅರ್ಜಿದಾರರಿಗೆ ಹಿಂದಿರುಗಿಸಲಾಗಿದೆ’ ಎಂದು ಮುಚ್ಚಲಾಗಿದೆ; ಯಾವುದೇ ದಾಖಲೆ ಲಗತ್ತಿಸಿಲ್ಲ.

ಕರ್ನಾಟಕ ಆಂಟಿಬಯೋಟಿಕ್ಸ್ ಅಂಡ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್KABPL/R/E/26/00008
ವರ್ಗಾವಣೆ, ಉತ್ತರವಿಲ್ಲ

ಹಿಂದಿ-ಮಾತ್ರ ಬ್ಯಾನರ್‌ಗಳ ಕಾರ್ಯಕ್ರಮ ಇಪಿಎಫ್‌ಒದ್ದು ಎಂದ ನಿಮ್ಹಾನ್ಸ್; ತನ್ನ ಭಾಷಾ ನೀತಿಯ ಪ್ರಶ್ನೆಗಳಿಗೆ ಉತ್ತರವಿಲ್ಲ

ಎರಡು ಪುಟಗಳ ಪತ್ರ: ಎಲ್ಲ ಪ್ರಶ್ನೆಗಳಿಗೂ ಒಂದೇ ಉತ್ತರ, ಕಾರ್ಯಕ್ರಮ ನಡೆಸಿದ್ದು ಇಪಿಎಫ್‌ಒ ಪ್ರಾದೇಶಿಕ ಕಚೇರಿ, ಹಾಗಾಗಿ ವಿವರ ಲಭ್ಯವಿಲ್ಲ. ಯಾವುದೇ ದಾಖಲೆ ಇಲ್ಲ.

ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್), ಬೆಂಗಳೂರುNIMNS/R/E/26/00220