ಮುಖಪುಟ / ಸಚಿವಾಲಯಗಳು ಮತ್ತು ಇಲಾಖೆಗಳು1 ನಿಮಿಷದ ಓದು
ಅನುಸರಣೆಯ ಹೇಳಿಕೆ, ಪುರಾವೆ ಇಲ್ಲ
ನಿಮ್ಹಾನ್ಸ್ ಕಾರ್ಯಕ್ರಮದ ಹಿಂದಿ ಮಾತ್ರದ ಬ್ಯಾನರ್ ಕುರಿತ ಪ್ರಶ್ನೆಗಳಿಗೆ ‘ಅನ್ವಯಿಸದು’ ಎಂದ ಇಪಿಎಫ್ಒ; ಕನ್ನಡ ಫಲಕಗಳೂ ಇದ್ದವು ಎಂಬ ಹೇಳಿಕೆ
ಎರಡು ಪುಟಗಳ ಉತ್ತರ: ಪ್ರಶ್ನೆ ಮತ್ತು ಉತ್ತರದ ಕೋಷ್ಟಕವಿರುವ ಪತ್ರ. ಯಾವುದೇ ದಾಖಲೆ ಅಥವಾ ಫೋಟೋ ಲಗತ್ತಿಸಿಲ್ಲ.
ಸಾರ್ವಜನಿಕ ಪ್ರಾಧಿಕಾರಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ, ಪ್ರಾದೇಶಿಕ ಕಚೇರಿ, ಬೆಂಗಳೂರು ಕೇಂದ್ರ
ನೋಂದಣಿ ಸಂಖ್ಯೆ
EPFOG/R/E/26/12017ಸಲ್ಲಿಕೆ30.07.2026
ಉತ್ತರ28.08.2026 29ನೇ ದಿನ
ಮೂಲಕಆರ್ಟಿಐ ಆನ್ಲೈನ್ ಪೋರ್ಟಲ್
ಕೇಳಿದ್ದು ಏನು, ಬಂದ ಉತ್ತರ ಏನು
| 1OM ಅಡಿ ಹೊರಡಿಸಿದ ಸುತ್ತೋಲೆಗಳು | ಮಾರ್ಗಸೂಚಿ ಕೊಟ್ಟಿಲ್ಲ; ಇಪಿಎಫ್ಒ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಎಲ್ಲ ಮಾರ್ಗಸೂಚಿಗಳನ್ನು ಪಾಲಿಸುತ್ತದೆ, ಅವು “ಈಗಾಗಲೇ ಸಾರ್ವಜನಿಕ ವಲಯದಲ್ಲಿ ಲಭ್ಯವಿವೆ”; ಅರ್ಜಿದಾರರೇ OM ಪ್ರತಿ ಲಗತ್ತಿಸಿದ್ದಾರೆ ಎಂದಿದೆ (1 ಮತ್ತು 4ಕ್ಕೆ ಒಂದೇ ಉತ್ತರ) |
|---|---|
| 2ಕನ್ನಡ ಬಳಕೆಗೆ ಕೈಗೊಂಡ ಕ್ರಮ | “ಅನ್ವಯಿಸುವುದಿಲ್ಲ”; ಇಪಿಎಫ್ಒ ತನ್ನ ಕಾರ್ಯಕ್ರಮಗಳಲ್ಲಿ ಭಾರತ ಸರ್ಕಾರದ ತ್ರಿಭಾಷಾ ನೀತಿ ಪಾಲಿಸುತ್ತದೆ, ಆ ಕಾರ್ಯಕ್ರಮದಲ್ಲಿ ವಿವಿಧೆಡೆ ಕನ್ನಡ ಫಲಕಗಳನ್ನು ಬಳಸಲಾಗಿತ್ತು ಎಂದಿದೆ (2, 3, 5ಕ್ಕೆ ಒಂದೇ ಉತ್ತರ) |
| 3ತಪಾಸಣೆ / ಅನುಸರಣಾ ವರದಿಗಳು | 2ನೇ ಅಂಶದ ಉತ್ತರವೇ; ಕಡತ ಟಿಪ್ಪಣಿ, ಅನುಮೋದನೆ ಅಥವಾ ಪತ್ರವ್ಯವಹಾರ ಯಾವುದೂ ಕೊಟ್ಟಿಲ್ಲ |
| 4ಅನುಸರಣೆ ಇಲ್ಲದೆಡೆ ಸರಿಪಡಿಸುವ ಕ್ರಮ | 1ನೇ ಅಂಶದ ಉತ್ತರವೇ |
| 5ಮೇಲ್ವಿಚಾರಣೆಯ ಹೊಣೆ ಹೊತ್ತ ಅಧಿಕಾರಿ | 2ನೇ ಅಂಶದ ಉತ್ತರವೇ; ಮುಂದಿನ ಕಾರ್ಯಕ್ರಮಗಳಿಗೆ ಯಾವುದೇ ಸರಿಪಡಿಸುವ ಕ್ರಮ ಹೇಳಿಲ್ಲ |
ಇದೇಕೆ ಮುಖ್ಯ
ಈ ಅರ್ಜಿ 19.06.2026ರಂದು ನಿಮ್ಹಾನ್ಸ್ ಬೆಂಗಳೂರಿನಲ್ಲಿ ನಡೆದ ಪ್ರಧಾನ ಮಂತ್ರಿ ವಿಕಸಿತ ಭಾರತ ರೋಜ್ಗಾರ್ ಯೋಜನೆ ಕಾರ್ಯಕ್ರಮದ ಸ್ವಾಗತ ಬ್ಯಾನರ್ಗಳು ಹಿಂದಿಯಲ್ಲಿ ಮಾತ್ರ ಇದ್ದವು ಎಂದು ಫೋಟೋ ಸಹಿತ ಪ್ರಶ್ನಿಸಿತ್ತು. ಉತ್ತರ ಕನ್ನಡ ಬಳಸದ ಕಾರಣ, ಬ್ಯಾನರ್ ಅನುಮೋದನೆಯ ಕಡತಗಳು ಮತ್ತು ಮುಂದಿನ ಸರಿಪಡಿಸುವ ಕ್ರಮ ಕೇಳಿದ ಪ್ರಶ್ನೆಗಳನ್ನು ‘ಅನ್ವಯಿಸುವುದಿಲ್ಲ’ ಎನ್ನುತ್ತದೆ. ಕಾರ್ಯಕ್ರಮದಲ್ಲಿ ವಿವಿಧೆಡೆ ಕನ್ನಡ ಫಲಕಗಳಿದ್ದವು ಎನ್ನುತ್ತದೆ, ಆದರೆ ಯಾವುದೇ ಫೋಟೋ ಅಥವಾ ದಾಖಲೆ ಕೊಟ್ಟಿಲ್ಲ. ಮಾರ್ಗಸೂಚಿಗಳಿಗೆ ‘ಸಾರ್ವಜನಿಕ ವಲಯ’ ಮತ್ತು ಅರ್ಜಿದಾರರೇ ಲಗತ್ತಿಸಿದ OM ಕಡೆ ಬೊಟ್ಟು ಮಾಡುತ್ತದೆ. ಪತ್ರದ ಶಿರೋಲೇಖದಲ್ಲಿ ಸಂಘಟನೆಯ ಹೆಸರು ಕನ್ನಡ, ಹಿಂದಿ, ಇಂಗ್ಲಿಷ್ ಈ ಕ್ರಮದಲ್ಲಿದೆ.

