ಮುಖಪುಟ / ಸಾರ್ವಜನಿಕ ಉದ್ದಿಮೆಗಳು ಮತ್ತು ನಿಗಮಗಳು1 ನಿಮಿಷದ ಓದು
ಮಾಹಿತಿ ನಿರಾಕರಣೆ
ಐಟಿಐ ಲಿಮಿಟೆಡ್: ಫಲಕಗಳ ಸುತ್ತೋಲೆ, ತಪಾಸಣಾ ವರದಿಗಳಿಗೆ ವೈಯಕ್ತಿಕ ಮಾಹಿತಿಯ ವಿನಾಯಿತಿ, ಸೆಕ್ಷನ್ 8(1)(j)
ಪೋರ್ಟಲ್ನಲ್ಲಿ ಮಾತ್ರ ಇರುವ ಪಠ್ಯ ಉತ್ತರ: ಸೆಕ್ಷನ್ 8(1)(j) ಅಡಿಯಲ್ಲಿ ನಿರಾಕರಣೆ, ಜೊತೆಗೆ ಮಾರ್ಗಸೂಚಿಗಳನ್ನು ಪಾಲಿಸುತ್ತಿದ್ದೇವೆ ಎಂಬ ಹೇಳಿಕೆ. ಯಾವುದೇ ದಾಖಲೆ ಇಲ್ಲ.
ಸಾರ್ವಜನಿಕ ಪ್ರಾಧಿಕಾರಐಟಿಐ ಲಿಮಿಟೆಡ್ (ಇಂಡಿಯನ್ ಟೆಲಿಫೋನ್ ಇಂಡಸ್ಟ್ರೀಸ್)
ನೋಂದಣಿ ಸಂಖ್ಯೆ
ITILT/R/E/26/00060ಸಲ್ಲಿಕೆ28.07.2026
ಉತ್ತರ09.09.2026 43ನೇ ದಿನ
ಮೂಲಕಆರ್ಟಿಐ ಆನ್ಲೈನ್ ಪೋರ್ಟಲ್
ಕೇಳಿದ್ದು ಏನು, ಬಂದ ಉತ್ತರ ಏನು
| 1OM ಅಡಿ ಹೊರಡಿಸಿದ ಸುತ್ತೋಲೆಗಳು | ಸೆಕ್ಷನ್ 8(1)(j) ಅಡಿಯಲ್ಲಿ ವಿನಾಯಿತಿ; “ಆದರೂ” ಪ್ರಾದೇಶಿಕ ಭಾಷೆಗಳ ಬಳಕೆ ಕುರಿತ ಗೃಹ ಸಚಿವಾಲಯದ ಮಾರ್ಗಸೂಚಿಗಳನ್ನು ಐಟಿಐ ಪಾಲಿಸುತ್ತಿದೆ |
|---|---|
| 2ಕನ್ನಡ ಬಳಕೆಗೆ ಕೈಗೊಂಡ ಕ್ರಮ | “Reply of Query No. 1 holds good.” (1ನೇ ಅಂಶದ ಉತ್ತರವೇ) |
| 3ತಪಾಸಣೆ / ಅನುಸರಣಾ ವರದಿಗಳು | ಸೆಕ್ಷನ್ 8(1)(j) ಅಡಿಯಲ್ಲಿ ವಿನಾಯಿತಿ; “ಆದರೂ” ರಾಜಭಾಷೆ ಬಳಕೆ ಕುರಿತ ಗೃಹ ಸಚಿವಾಲಯದ ಮಾರ್ಗಸೂಚಿಗಳನ್ನು ಪಾಲಿಸುತ್ತಿದೆ |
| 4ಅನುಸರಣೆ ಇಲ್ಲದೆಡೆ ಸರಿಪಡಿಸುವ ಕ್ರಮ | “Reply of Query No. 3 holds good.” (3ನೇ ಅಂಶದ ಉತ್ತರವೇ) |
| 5ಮೇಲ್ವಿಚಾರಣೆಯ ಹೊಣೆ ಹೊತ್ತ ಅಧಿಕಾರಿ | “Official Language Department.” (ರಾಜಭಾಷಾ ವಿಭಾಗ); ಅಧಿಕಾರಿಯ ಹೆಸರು ಅಥವಾ ಹುದ್ದೆ ಇಲ್ಲ |
ಇದೇಕೆ ಮುಖ್ಯ
ಸೆಕ್ಷನ್ 8(1)(j) ವ್ಯಕ್ತಿಯ ವೈಯಕ್ತಿಕ ಮಾಹಿತಿಗೆ ಸಂಬಂಧಿಸಿದ ವಿನಾಯಿತಿ. ಐಟಿಐ ಅದನ್ನು ಸಂಸ್ಥೆಯ ಸುತ್ತೋಲೆಗಳು ಮತ್ತು ತಪಾಸಣಾ ವರದಿಗಳಿಗೆ ಅನ್ವಯಿಸಿದೆ; ಯಾವ ವ್ಯಕ್ತಿಯ ಮಾಹಿತಿ ಎಂದು ಹೇಳಿಲ್ಲ. ಅದೇ ಉತ್ತರ ಮಾರ್ಗಸೂಚಿಗಳನ್ನು ಪಾಲಿಸಲಾಗುತ್ತಿದೆ ಎನ್ನುತ್ತದೆ, ಆದರೆ ಅದಕ್ಕೆ ಯಾವುದೇ ಆಧಾರ ನೀಡಿಲ್ಲ. ಕ್ರಮದ ವಿವರ ಕೇಳಿದ 2ನೇ ಪ್ರಶ್ನೆಗೂ ಇದೇ ವಿನಾಯಿತಿಯ ಉತ್ತರ. ಅರ್ಜಿ 28.07.2026ರಂದು ಸಲ್ಲಿಕೆಯಾಗಿದ್ದು, ಉತ್ತರ 09.09.2026ರಂದು, 43ನೇ ದಿನ ಬಂದಿದೆ. ಮೊದಲ ಮೇಲ್ಮನವಿ ಪ್ರಾಧಿಕಾರಿಯ ಹೆಸರು ಇಲ್ಲ.
